ಕೂಡಿಗೆ, ಮೇ 23: ಹುದುಗೂರು ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ 28ನೇ ವರ್ಷದ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ತಾ. 26ರಂದು ಮಹಾ ಮೃತ್ಯುಂಜಯ ಯಜ್ಞ ನಡೆಯಲಿದೆ. ಅಂದು ಬೆಳಿಗ್ಗೆಯಿಂದಲೇ ಕಳಸ ಪೂಜೆ, ಗಣಪತಿ ಹೋಮ ನಂತರ ಮೃತ್ಯುಂಜಯ ಯಜ್ಞ ನಡೆಯಲಿದ್ದು, 12.30ಕ್ಕೆ ಕಳಶಾಭಿಷೇಕ, ಅಲಂಕಾರ ಪೂಜೆ, ಮಹಾಮಂಗಳಾರತಿ ನೆರವೇರಲಿದೆ.