ನಾಪೋಕ್ಲು, ಮೇ 23: ಸಮೀಪದ ಯವಕಪಾಡಿ ಗ್ರಾಮದ ಕೆರೆತಟ್ಟು ಪೈಸಾರಿಯಲ್ಲಿ ಶ್ರೀವಿಷ್ಣುಮೂರ್ತಿ ನಾಗಬ್ರಹ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ವಿಷ್ಣುಮೂರ್ತಿ ನಾಗಬ್ರಹ್ಮರ ಪುನರ್‍ಪ್ರತಿಷ್ಠೆ ತಾ. 25 ರಂದು ನಡೆಯಲಿದೆ. ಕೊಲ್ಲಗುಳಿ ಕ್ಷೇತ್ರದ ಅರ್ಚಕರ ನೇತೃತ್ವದಲ್ಲಿ ಅಂದು ಬೆಳಿಗ್ಗೆ 10ಗಂಟೆಯಿಂದ ಎರಡು ಗಂಟೆಯವರೆಗೆ ನಡೆಯಲಿರುವ ಮಹಾಗಣಪತಿ ಹವನ ನೆರವೇರಲಿದೆ.