ಸುಂಟಿಕೊಪ್ಪ, ಮೇ 23: ಸಮೀಪದ ಪನ್ಯದ ಉದ್ದಿಬಾಣೆ ಮಠದಲ್ಲಿ ಶ್ರದ್ಧಾಭಕ್ತಿಯಿಂದ ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ಧರ್ಮ ದೈವಗಳ ನೇಮೋತ್ಸವ ಗುರುವಾರ ರಾತ್ರಿ ನಡೆಯಿತು.
ಬೆಳಿಗ್ಗೆ ಗಣಹೋಮ, ಸತ್ಯ ನಾರಾಯಣ ಪೂಜೆ ನೆರವೇರಿತು.
ರಾತ್ರಿ 8 ಗಂಟೆಗೆ ಸರಿಯಾಗಿ ಭಂಡಾರ ತೆಗೆಯಲಾಯಿತು. 10 ಗಂಟೆಯ ನಂತರ ಪ್ರಮುಖ ಧರ್ಮ ಶಕ್ತಿ ದೈವಗಳಾದ ಪಾಷಾಣ ಮೂರ್ತಿ ಮತ್ತು ಪಂಜುರ್ಲಿದೈವಗಳ ಕೋಲ ನಡೆಯಿತು. ಬೆಳಿಗ್ಗೆ 6 ಗಂಟೆಯಿಂದ ಗುಳಿಗ ಮತ್ತು ಕೊರಗಜ್ಜನ ನೇಮವು ನಡೆಯಿತು. ನೆರೆದಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಿತು.