*ಗೋಣಿಕೊಪ್ಪಲು, ಮೇ 24: ಇಲ್ಲಿನ ಹೆಬ್ಬಾಲೆ ಬೇಡು ಹಬ್ಬ ಬುಡಕಟ್ಟು ಜನರ ನೃತ್ಯ ಅಶ್ಲೀಲ ಬೈಗುಳದೊಂದಿಗೆ ವಿಜೃಂಭಣೆಯಿಂದ ಜರುಗಿತು.
ದೇವರಪುರದ ಹೆಬ್ಬಾಲೆ ಗ್ರಾಮದ ಶ್ರೀ ಭದ್ರಕಾಳಿ ಅಯ್ಯಪ್ಪ ದೇವಸ್ಥಾನದ ಅಂಗಳದಲ್ಲಿ ವೇಷದಾರಿಗಳು ವಿವಿಧ ವೇಷಗಳನ್ನು ತೊಟ್ಟು ಸೂರೆ ಬುರುಡೆಯ ಜಿಲಿ-ಜಿಲಿ ಭೋರ್ಗೆರೆತ ನಾದದೊಂದಿಗೆ ನೆರೆದ ಭಕ್ತಾದಿಗಳಿಗೆ ವಾಚಾಮ ಗೋಚರವಾಗಿ ಬಯ್ಯುತ್ತಾ ಭಕ್ತರಿಗೆ ರಂಜನೆ ನೀಡಿದರು.
ಸೊಪ್ಪು, ಹರಿದ ಬಟ್ಟೆ, ಕರಡಿ ವೇಷ, ಸ್ತ್ರೀ ರೂಪಧಾರಿಗಳು ಉದ್ದಕೂದಲು, ತುಂಡುಡುಗೆ, ಫ್ಯಾಶನ್ ವೇಷಧಾರಿಗಳು ಮುಖವಾಡ ಹಾಕಿಕೊಂಡು ಗಂಡಸರು ಸ್ತ್ರೀಯರ ಉಡುಪುಗಳನ್ನು ಧರಿಸಿಕೊಂಡು ಹುಡುಗಿಯರಂತೆ ಕಾಣಿಸಿಕೊಂಡು ಆದಿವಾಸಿಗಳ ಡೋಲು ಬಡಿತಕ್ಕೆ ಸರಿಯಾಗಿ ತಾಳ ಹಾಕಿಕೊಂಡು ಕುಣಿಯುವ ಪರಿ ಎಂತಹವರ ಮನಸ್ಸನ್ನು ಮುದಗೊಳಿಸುವಂತಿತ್ತು.
ಗೋಣಿಕೊಪ್ಪಲು, ತಿತಿಮತಿ, ಬಾಳೆಲೆ, ಪಾಲಿಬೆಟ್ಟ, ಪೆÇನ್ನಂಪೇಟೆ, ಸಿದ್ದಾಪುರ, ವೀರಾಜಪೇಟೆ ಸೇರಿದಂತೆ ಹಲವು ಪಟ್ಟಣಗಳಲ್ಲಿ ವೇಷಧಾರಿಗಳು ಸಾರ್ವಜನಿಕರಿಗೆ ಆಶ್ಲೀಲವಾಗಿ ಬೈಯ್ಯುತ್ತಾ ಕಾಣಿಕೆ ಬೇಡಿಕೆ ಇಟ್ಟರು.
ದಿನಂಪ್ರತಿ ದುಡಿಯುವ ದೇಹಗಳು ಇಂದು ಭಕ್ತಾದಿಗಳಿಗೆ ಮನರಂಜನೆ ನೀಡಿ ತಾವುಗಳು ಸಂಭ್ರಮಿಸಿದರು. ಮನತುಂಬ ಬೈಗುಳದ ಸುರಿಮಳೆ ಎರೆದು ನಂತರ ಕೋಪಿಸಿಕೊಳ್ಳದಂತೆ ಮನವೊಲಿಸಿ ತಮ್ಮ ಉತ್ತಮ ಭಾವನೆಯನ್ನು ತೋರ್ಪಡಿಸಿದರು. ಎರಡು ಸಾವಿರಕ್ಕೂ ಹೆಚ್ಚು ವೇಷಧಾರಿಗಳು ವಿವಿಧ ವೇಷಧರಿಸುವ ಮೂಲಕ ದ.ಕೊಡಗಿನಲ್ಲಿ ಸಂಭ್ರಮಕ್ಕೆ ಕಾರಣರಾದರು.
ವೇಷಧಾರಿಗಳು ಬೇಡುವಾಗ ಕೆಲವೊಂದು ಅಶ್ಲೀಲ ಪದಗಳನ್ನು ಬಳಸಿ ಬೇಡುತ್ತಾರೆ. ಪದಗಳನ್ನು ಕೇಳಿ ನಾಚಿಕೆ ಪಟ್ಟವರು ಇವರಿಗೆ ಬೇಗ ಹಣ ನೀಡಿ ಕಳುಹಿಸಲು ಪ್ರಯತ್ನಿಸುತ್ತಾರೆ. ಇದನ್ನೇ ಅಸ್ತ್ರವಾಗಿ ಬಳಸುವ ವೇಷಧಾರಿಗಳು ಹೆಚ್ಚಾಗಿ ಹಣ ಸಂಪಾದಿಸುತ್ತಾರೆ. ವೇಷ ಹಲವು ಆದರೆ ಬೈಗುಳ ಹಾಗೂ ಬೇಡುವ ಪರಿ ಒಂದೇ ಆಗಿತ್ತು.
ಕಾಡಿನಲ್ಲಿ ವಾಸವಿರುವ ಆದಿವಾಸಿಗಳು ಇಂದು ಕೂಡ ತನ್ನ ವೇಷಭೂಷಣವನ್ನು ಕಾಡಿನಲ್ಲಿ ಪ್ರಾಕೃತಿಕವಾಗಿ ಸಿಗುವ ವಸ್ತುಗಳಿಂದಲೇ ವಿಭಿನ್ನವಾಗಿ ತೋರಿಸಿಕೊಂಡು ಸಂಭ್ರಮಿಸುತ್ತಾರೆ. ಇಂದು ತಾಂತ್ರಿಕವಾಗಿ ಮುಂದುವರೆದಿರುವ ಇವರು ಕಾಲಕ್ಕೆ ತಕ್ಕಂತೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ವ್ಯಕ್ತಿಗಳಾಗಿ ವೇಷಭೂಷಣ ಮಾಡಿಕೊಂಡು ಜನರಿಂದ ಆಕರ್ಷಿತರಾದರು.
ದೇವರಪುರದಲ್ಲಿರುವ ಅಯ್ಯಪ್ಪ ದೇವಸ್ಥಾನದಲ್ಲಿ ಮಧ್ಯಾಹ್ನ 2.30 ಗಂಟೆಗೆ ಎಲ್ಲಾ ವೇಷಧಾರಿಗಳು ಸೇರಿ ದೇವರ ಸನ್ನಿಧಿಯಲ್ಲಿ ಹಾಡುತ್ತಾ, ಕುಣಿಯುತ್ತಾ ತಮ್ಮ ಹರಕೆಯನ್ನು ಸಲ್ಲಿಸಿದರು. ಈ ಸಂದರ್ಭ 4 ಸಾವಿರಕ್ಕೂ ಅಧಿಕ ಭಕ್ತಾದಿಗಳು ದೂರದ ಊರಿನಿಂದ ಬಂದು ಸೇರಿದ್ದರು.
ಇದಕ್ಕೂ ಮೊದಲು ಅಲ್ಲಿನ ಅಂಬಲದಿಂದ ಭದ್ರಕಾಳಿ ದೇವರು ವ್ಯಕ್ತಿಯ ಮೈ ಮೇಲೆ ಬಂದು ಹಬ್ಬದಲ್ಲಿ ಪಾಲ್ಗೊಂಡಿತು. ಇದರೊಂದಿಗೆ ಪಣಿಕ ಜನಾಂಗದ ಇಬ್ಬರು ದೇವರ ಮೊಗವನ್ನು ತೆಗೆದುಕೊಂಡು ಕುದುರೆಯೊಂದಿಗೆ ಅಯ್ಯಪ್ಪ ದೇವರ ದೇವಸ್ಥಾನದತ್ತ ತೆರಳಿದರು. ಕುದುರೆ ಹೊತ್ತ ಯುವಕರು ಹಾಗೂ ಭಂಡಾರ ಪೆಟ್ಟಿಗೆ ಹೊತ್ತ ತಕ್ಕ ಮುಖ್ಯಸ್ಥರು ತೆರಳಿದರು.
ದೇವರ ವಿಧಿವಿಧಾನದೊಂದಿಗೆ ನಡೆಯುವ ಈ ಹಬ್ಬದಲ್ಲಿ ಸಣ್ಣುವಂಡ ರತನ್ ಮಾದಯ್ಯ ಭಂಡಾರ ಪೆಟ್ಟಿಗೆಯನ್ನು ಹೊತ್ತಿದ್ದರು. ಬಿದಿರಿನಿಂದ ತಯಾರಿಸಿದ ಕೃತಕ ಕುದುರೆಯನ್ನು ಸಣ್ಣುವಂಡ ಅಯ್ಯಮ್ಮ ಹಾಗೂ ಅಜ್ಜಮಾಡ ಪೃಥ್ವಿ ಪೂಣಚ್ಚ ಹೊತ್ತು ದೇವಸ್ಥಾನದ ಕಣದಲ್ಲಿ ಮದ್ಯ ನಿಷೇಧ ಪ್ರಭಾವ
ಕಳೆದ ಎರಡು ಮೂರು ವರ್ಷ ಗಳಿಂದ ಜಿಲ್ಲಾಡÀಳಿತ ಹಬ್ಬದ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮಕೈಗೊಂಡು ಮದ್ಯದ ಅಂಗಡಿಗಳು ಮುಚ್ಚುತ್ತಿ ರುವ ಕಾರಣ ಗೋಣಿಕೊಪ್ಪಲು ಪಟ್ಟಣದಲ್ಲಿ ಹೆಚ್ಚಾಗಿ ವೇಷಧಾರಿ ಗಳು ಕಂಡು ಬರಲಿಲ್ಲ. ವೀರಾಜಪೇಟೆ, ಅಮ್ಮತ್ತಿ ಭಾಗಗಳಲ್ಲಿ ಮದÀ್ಯದ ಅಂಗಡಿ ತೆರೆದ ಕಾರಣ ವೇಷಧಾರಿಗಳಲ್ಲಿ ಈ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡರು.
ಹುಣಸೂರು, ಹೆಚ್.ಡಿ.ಕೋಟೆ, ಬೂದಿತಿಟ್ಟು, ಪಿರಿಯಾಪಟ್ಟಣ ಭಾಗದಲ್ಲಿ ಹರಕೆ ಒಪ್ಪಿಸಿದ ವೇಷಧಾರಿಗಳು ನೇರವಾಗಿ ಜೀಪು, ಆಟೋಗಳ ಮೂಲಕ ದೇವಸ್ಥಾನಕ್ಕೆ ಪ್ರವೇಶಿಸುವದರಿಂದ ಪಟ್ಟಣದ ನಿವಾಸಿಗಳಿಗೆ ಆಶ್ಲೀಲ ಬೈಗುಳ ಹಾಗೂ ಕುಣಿತದ ರಸಭಂಗವಾಯಿತು.