ಮಡಿಕೇರಿ, ಮೇ 24: ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಡಿಕೇರಿ 100 ಗಂಟೆಗಳ ಕಾಲ ಸ್ವಚ್ಛತಾ ಕಾರ್ಯಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಜಿಯನ್ನು ಆನ್ಲೈನ್ ಮೂಲಕ ನೋಂದಣಿ ಮಾಡಲು ತಾ. 31 ಕೊನೆಯ ದಿನಾಂಕವಾಗಿದೆ.
ಒಂದು ಯುವಕ-ಯುವತಿ ಮಂಡಳಿಯು ಗರಿಷ್ಠ 10 ಸದಸ್ಯರುಗಳನ್ನು ಒಳಗೊಂಡಿರಬೇಕು. 10 ಸದಸ್ಯರ ಹೆಸರು, ಜನ್ಮ ದಿನಾಂಕ ಹಾಗೂ ಮೊಬೈಲ್ ಸಂಖ್ಯೆಗಳನ್ನು ನೀಡಬೇಕು. ಯುವಕ-ಯುವತಿ ಮಂಡಳಿಯ ಸೀಲ್. ಯುವಕ-ಯುವತಿ ಮಂಡಳಿಯ ಅಧ್ಯಕರು ಕಡ್ಡಾಯವಾಗಿ ಇ-ಮೇಲ್ ಐಡಿಯನ್ನು ಹೊಂದಿರತಕ್ಕದ್ದು.
ಪ್ರಶಸ್ತಿಯ ವಿವರ: ಜಿಲ್ಲಾಮಟ್ಟ-ಪ್ರಥಮ: ರೂ. 30,000, ದ್ವಿತೀಯ: ರೂ. 20,000, ತೃತೀಯ ರೂ. 10,000. ರಾಜ್ಯಮಟ್ಟ - ಪ್ರಥಮ: ರೂ. 50,000, ದ್ವಿತೀಯ: ರೂ. 30,000, ತೃತೀಯ ರೂ. 20,000. ರಾಷ್ಟ್ರಮಟ್ಟ: - ಪ್ರಥಮ: ರೂ. 2 ಲಕ್ಷ, ದ್ವಿತೀಯ: ರೂ. 1 ಲಕ್ಷ, ತೃತೀಯ ರೂ. 50,000.
ಸ್ವಚ್ಛತಾ ಅಂದೋಲನದಡಿಯಲ್ಲಿ ಮಾಡುವ ಕಾರ್ಯಕ್ರಮದ ವಿವರ: ಸ್ವಚ್ಛತಾ ಜಾಗೃತಿ ಅಭಿಯಾನ. ಬೀದಿ ನಾಟಕ-ಸ್ವಚ್ಛತೆಯ ಕುರಿತು ಜಾನಪದ ಗೀತೆ ಹಾಗೂ ನೃತ್ಯ. ಸ್ವಚ್ಛತಾ ಮೇಳ.
ಮನೆಯಿಂದ ಮನೆಗೆ ಸ್ವಚ್ಛತೆ ಜಾಗೃತಿ ಅಭಿಯಾನ. ಜಾಥಾ. ಸಾರ್ವಜನಿಕ ಸ್ಥಳದ ಗೋಡೆಗಳಲ್ಲಿ ಸ್ವಚ್ಛತೆಯ ಜಾಗೃತಿ ಕುರಿತಿರುವ ವಿಷಯಗಳ ಬಗ್ಗೆ ಸುಣ್ಣ ಬಳಿಯುವದು. ಸ್ವಚ್ಛತೆಯ ಬಗ್ಗೆ ಚಲನಚಿತ್ರ ಪ್ರದರ್ಶನ. ತ್ಯಾಜ್ಯ ಸಂಗ್ರಹಣೆ. ಪ್ರತ್ಯೇಕತೆ ಘನ ವಸ್ತುಗಳನ್ನು. ಮಿಶ್ರ ಗೊಬ್ಬರದ ಹೊಂಡಗಳು. ಮನೆಯ ತ್ಯಾಜ್ಯಗಳನ್ನು ಸಾಗಿಸುವದು. ರಸ್ತೆ ಬದಿ, ಒಳ ಚರಂಡಿಗಳು ಮತ್ತು ಕಾಲು ದಾರಿಗಳನ್ನು ಶುಚಿಗೊಳಿಸುವದು. ಶೌಚಾಲಯ ನಿರ್ಮಾಣದಲ್ಲಿ ಸಹಾಯ ಮಾಡುವದು.
ಅರ್ಜಿ ಸಲ್ಲಿಸಲು ಇಚ್ಚಿಸುವವರು ನೆಹರು ಯುವ ಕೇಂದ್ರ, ಯಶು ನಿಲಯ, ಬ್ಲಾಕ್ ನಂ: 8, ಕಾವೇರಿ ಲೇಔಟ್ನ್ನು,ಮಡಿಕೇರಿ ಖುದ್ದಾಗಿ ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 08272-225470ನ್ನು ಸಂಪರ್ಕಿಸಬಹುದು.