ಕುಶಾಲನಗರ, ಮೇ 23: ಸರ್ಕಾರಿ ನೌಕರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರ ಆದಾಯದ ಪರಿಮಿತಿಯಲ್ಲಿ ರಾಜ್ಯ ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಲು ಮುಂದಾಗಬೇಕೆಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎ. ಎಂ. ಶ್ರೀಧರ್ ಹೇಳಿದರು.

ಕುಶಾಲನಗರದ ಕೊಡವ ಸಮಾಜದಲ್ಲಿ ನಡೆದ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಸುದೀರ್ಘ ಅವಧಿಯ ಅವಿರತ ಸೇವೆ ಸಲ್ಲಿಸಿದ ನೌಕರರು ನಿವೃತ್ತಿಯ ನಂತರದಲ್ಲಿ ತಮ್ಮ ಬದುಕಿನ ಕೊನೆಯ ದಿನ ಗಳನ್ನು ನೆಮ್ಮದಿಯಾಗಿ ಕಳೆಯು ವಂತಹ ವಾತಾವರಣ ಅವಶ್ಯಕತೆ ಯಿದೆ ಎಂದರು. ನಿವೃತ್ತ ಸರ್ಕಾರಿ ನೌಕರರ ಸಂಘದಿಂದ ಯಾವುದೇ ಉದ್ದಿಮೆ ಸ್ಥಾಪನೆ ಮಾಡಲು 3 ಲಕ್ಷದಿಂದ 15 ಲಕ್ಷದ ವರೆಗೆ ಸಬ್ಸಿಡಿ ಸಾಲ ಲಭ್ಯವಿದೆ. ನಿವೇಶನ ರಹಿತ ರಾಗಿರುವ ನಿವೃತ್ತ ಸರ್ಕಾರಿ ನೌಕರ ರಿಗೆ ಗುಂಡೂರಾವ್ ಬಡಾವಣೆಯಲ್ಲಿ ರಿಯಾಯಿತಿ ದರದಲ್ಲಿ ನಿವೇಶನ ಗಳನ್ನು ಪಡೆದುಕೊಳ್ಳಲು ಅವಕಾಶ ಗಳಿವೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಸಂಘದ ಅಧ್ಯಕ್ಷರಾದ ಹಾಜಿ ಹೆಚ್.ಎಂ.ಮಹಮ್ಮದ್ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕುಶಾಲನಗರ ಹೋಬಳಿಯ ಕರ್ನಾಟಕ ರಾಜ್ಯದ ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಡಿ.ಕೆ.ಬೊಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿರಿಯ 20 ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕುಶಾಲನಗರದ ಮುಖ್ಯ ಶಿಕ್ಷಕರು ಹಾಗೂ ಸಂಘದ ಸಲಹೆ ಗಾರರಾದ ಎಂ.ಹೆಚ್. ನಝೀರ್ ಅಹಮ್ಮದ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಳೆದ ಮಹಾಸಭೆಯ ವರದಿಯನ್ನು ಸಂಘದ ಕಾರ್ಯದರ್ಶಿ ಬಿ.ಎಂ. ಪೊನ್ನಪ್ಪ, ಆಡಳಿತ ಮಂಡಳಿಯ ವರದಿಯನ್ನು ನಿರ್ದೇಶಕರಾದ ಸಣ್ಣಯ್ಯ, ಲೆಕ್ಕಪರಿಶೋಧನ ವರದಿಯನ್ನು ಸಂಘದ ಖಜಾಂಚಿ ರಾಘವಯ್ಯ ಸಭೆಯಲ್ಲಿ ಮಂಡಿಸಿದರು.

ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಕೆ.ಜಿ.ಉತ್ತಪ್ಪ, ಜಾನಕಿ ಅಪ್ಪಣ್ಣ, ನಿರ್ದೇಶಕರಾದ ಟಿ.ಡಿ.ಸೋಮಣ್ಣ, ರಾಜಪ್ಪ, ಅಬ್ರಹಾಂ ದಿವಾಕರ್, ಚಂಗಪ್ಪ, ಗಿರೀಶ್, ಶಾಂತಮ್ಮ, ರಾಜಶೇಖರ್, ಸಾವಿತ್ರಿ ಮತ್ತು ಪಾರ್ವತಿ ಇದ್ದರು.