ಮಡಿಕೇರಿ, ಮೇ 24: ಕಲೆ, ಸಾಂಸ್ಕøತಿಕ, ಯಾವದೇ ಕ್ಷೇತ್ರದಲ್ಲಿ ನಾವೀನ್ಯತೆ, ರಾಷ್ಟ್ರೀಯ ಮಟ್ಟದಲ್ಲಿ ತಾರ್ಕಿಕ ಸಾಧನೆ, ಕ್ರೀಡೆ, ಸಮಾಜಸೇವೆ, ಸಂಗೀತ ಮತ್ತು ಕೇಂದ್ರ ಆಯ್ಕೆ ಸಮಿತಿಯ ನಿರ್ಧಾರದ ಪ್ರಕಾರ ಮಾನ್ಯತೆಗೆ ಯೋಗ್ಯವಾದ ಯಾವದೇ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿರುವಂತಹ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿಯನ್ನು ಭಾರತ ಸರಕಾರ ನೀಡುತ್ತದೆ. ಭಾರತದಲ್ಲಿ ನೆಲೆಸಿರುವ ಮತ್ತು ಮೇಲ್ಕಂಡ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಯನ್ನು ಮಾಡಿರುವ 5 ರಿಂದ 18 ವರ್ಷದೊಳಗಿನ ಅಂದರೆ ದಿನಾಂಕ 1.8.2000 ಹಾಗೂ ನಂತರ ಹುಟ್ಟಿದ ಮಕ್ಕಳನ್ನು 2018ನೇ ಸಾಲಿಗೆ ಆಯ್ಕೆ ಮಾಡಲಾಗುವದು. ಈ ರಾಷ್ಟ್ರಮಟ್ಟದ ಪ್ರಶಸ್ತಿಯು ಒಂದು ಚಿನ್ನದ ಪದಕ, ರೂ. 20 ಸಾವಿರ ನಗರು, ರೂ. 10 ಸಾವಿರ ಮೌಲ್ಯದ ಪುಸ್ತಕ ವೋಚರ್ ಮತ್ತು ಪ್ರಶಸ್ತಿ ಪತ್ರ ಹಾಗೂ 35 ಬೆಳ್ಳಿ ಪದಕ (ಪ್ರತಿ ರಾಜ್ಯ ಕೇಂದ್ರಾಡಳಿತ ಪ್ರದೇಶಕ್ಕೆ ಒಂದು ಬೆಳ್ಳಿ ಪದಕ) ರೂ. 10 ಸಾವಿರ ನಗದು, ರೂ. 3 ಸಾವಿರ ಮೌಲ್ಯದ ಪುಸ್ತಕ ವೋಚರ್ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.
ಈ ಪ್ರಶಸ್ತಿಗೆ ಆಯ್ಕೆಯಾಗುವಂತಹ ಮಕ್ಕಳು ಅಪ್ರತಿಮ ಪ್ರತಿಭೆಯುಳ್ಳವರಾಗಿರತಕ್ಕದ್ದು. ಅಸಾಧಾರಣವೆಂದು ಇವರ ಸಾಧನೆಯನ್ನು ಸಮರ್ಥಿಸಲು ಪೂರಕ ದಾಖಲಾತಿಗಳನ್ನು ಒದಗಿಸುವದು. ಮಕ್ಕಳ ವಯಸ್ಸಿನ ಪ್ರಮಾಣ ಪತ್ರವನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು.
2018ನೇ ವರ್ಷದ ಪ್ರಶಸ್ತಿಗೆ ನಿಗದಿಪಡಿಸಿದ ಅರ್ಜಿ ನಮೂನೆಗಳನ್ನು ಉಪನಿರ್ದೇಶಕರ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಡಗು ಜಿಲ್ಲೆ ಇಲ್ಲಿಂದ ಪಡೆದು, ಆಂಗ್ಲ ಭಾಷೆಯಲ್ಲಿ ದ್ವಿಪ್ರತಿಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ 30.6.2018 ರೊಳಗೆ ತಲಪುವಂತೆ ಉಪನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್‍ಗೇಟ್ ಹತ್ತಿರ, ಮೈಸೂರು ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ ಈ ಕಚೇರಿಗೆ ಸಲ್ಲಿಸತಕ್ಕದ್ದು, ನಿಗದಿತ ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ಯಾವದೇ ಕಾರಣಕ್ಕೂ ಪರಿಗಣಿಸಲಾಗುವದಿಲ್ಲ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 08272-228010 ಎಂದು ಪ್ರಕಟಣೆ ತಿಳಿಸಿದೆ.