ಮಡಿಕೇರಿ, ಮೇ 24: ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಜಿಲ್ಲೆಯ ನಾಗರಿಕರಿಗಾಗಿ ಬಂದೂಕು ತರಬೇತಿ ಕಾರ್ಯಾಗಾರವನ್ನು ನಡೆಸಲು ಉದ್ದೇಶಿಸಲಾಗಿದೆ. ಬಂದೂಕು ತರಬೇತಿಯನ್ನು ಪಡೆಯಲು ಇಚ್ಛಿಸುವ ನಾಗರಿಕರು ಈ ಕೆಳಕಂಡ ದಾಖಲೆಗಳೊಂದಿಗೆ ಜಿಲ್ಲಾ ಸಶಸ್ತ್ರ ದಳ (ಡಿ.ಎ.ಆರ್.) ಆರ್.ಪಿ.ಐ. ಕಚೇರಿಯಿಂದ ನಿಗದಿತ ನಮೂನೆಯ ಅರ್ಜಿಯನ್ನು ಪಡೆದು ಭರ್ತಿ ಮಾಡಿ ಸಲ್ಲಿಸಬಹುದಾಗಿದೆ.
ಅರ್ಜಿ ಶುಲ್ಕ ರೂ. 10, ಪಾಸ್ಪೋಟ್ ಅಳತೆಯ ಭಾವಚಿತ್ರ 4 ಪ್ರತಿಗಳು, ಸಂಪರ್ಕಿಸಬೇಕಾದ ವಿಳಾಸ: ಆರ್.ಪಿ.ಐ. ಜಿಲ್ಲಾ ಸಶಶ್ತ್ರ ದಳ, ಮಡಿಕೇರಿ, ದೂ. 9480804906 ಅಥವಾ 08273 - 228420. ಅರ್ಜಿ ಸಲ್ಲಿಸಲು ತಾ. 30 ಕೊನೆಯ ದಿನ. ತರಬೇತಿಯ ಅವಧಿ ಹಾಗೂ ದಿನಾಂಕವನ್ನು ನಂತರ ತಿಳಿಸಲಾಗುವದು. ಜಿಲ್ಲೆಯ ನಾಗರಿಕರು ಈ ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.