ಮಡಿಕೇರಿ ಮೇ 23 : ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅಗತ್ಯ ಸೌಲಭ್ಯಗಳು ದೊರೆಯುತ್ತಿಲ್ಲ ಮತ್ತು ಔಷಧಿಗಾಗಿ ರೋಗಿಗಳನ್ನು ಖಾಸಗಿ ಔಷಧಿ ಅಂಗಡಿಗಳಿಗೆ ಕಳುಹಿಸ ಲಾಗುತ್ತಿದೆ ಎಂದು ಆರೋಪಿಸಿರುವ ವೀರನಾಡು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಹರೀಶ್ ಜಿ.ಆಚಾರ್ಯ, ವ್ಯವಸ್ಥೆ ಸುಧಾರಿಸದಿದ್ದಲ್ಲಿ ಸಾರ್ವಜನಿಕರನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದ್ದಾರೆ.
ಮೆಡಿಕಲ್ ಕಾಲೇಜ್ ನಿರ್ದೇಶಕರಾದ ಕಾರ್ಯಪ್ಪ ಹಾಗೂ ಜಿಲ್ಲಾ ಸರ್ಜನ್ ಜಗದೀಶ್ ಅವರು ಗಳನ್ನು ಭೇಟಿಯಾದ ಹರೀಶ್ ಆಚಾರ್ಯ ಹಾಗೂ ಸಂಘಟನೆಯ ಪ್ರಮುಖರು ಆಸ್ಪತ್ರೆಯಲ್ಲಿರುವ ಕೊರತೆಗಳ ಬಗ್ಗೆ ಚರ್ಚಿಸಿದರು.
ವೈದ್ಯರ ಕೊರತೆಯೊಂದಿಗೆ ಔಷಧಿಗಳ ಅಲಭ್ಯತೆ ಹಾಗೂ ರೋಗಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳು ದೊರೆಯುತ್ತಿಲ್ಲವೆಂದು ಗಮನ ಸೆಳೆದರು.
ನಗರದಲ್ಲಿ ವೈದ್ಯಕೀಯ ಕಾಲೇಜು ಕಾರ್ಯ ನಿರ್ವಹಿಸುತ್ತಿ ದ್ದರೂ ಸರಕಾರÀದಿಂದ ಸಿಗಬೇಕಾದ ಅನೇಕ ಸೌಲಭ್ಯಗಳು ಸಿಗದೆ ರೋಗಿ ಗಳು ಪರದಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಆರೋಪಿಸಿದರು.
ಕನಿಷ್ಟ ಎಕ್ಸರೇ ಸೌಲಭ್ಯ ಕೂಡ ಬಡ ರೋಗಿಗಳಿಗೆ ದೊರೆಯುತ್ತಿಲ್ಲ ವೆಂದರು. ಈ ಸಂದರ್ಭ ಮಾತನಾಡಿದ ಮೆಡಿಕಲ್ ಕಾಲೇಜ್ ನಿರ್ದೇಶಕರಾದ ಕಾರ್ಯಪ್ಪ ಹಾಗೂ ಜಿಲ್ಲಾ ಸರ್ಜನ್ ಜಗದೀಶ್ ಅವರುಗಳು ಜಿಲ್ಲಾ ಆಸ್ಪತ್ರೆಯಲ್ಲಿ ಸಾಕಷ್ಟು ಸುಧಾರಣೆಗಳಾಗಿದ್ದು, ಉಳಿದಿರುವ ಸಮಸ್ಯೆಗಳ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು.
ಬಿ.ಎಸ್.ಚರಣ್, ಕೋಳಿಬೈಲ್ ಜಯರಾಂ, ಉರೇರ, ಎಂ. ಹೆಚ್. ಮುಸ್ತಫ, ಟಿ. ಪಿ. ನಾಣಯ್ಯ, ರಘುಪತಿ ಹಾಗೂ ನಾಗೇಶ್ ಭಟ್ ಹಾಜರಿದ್ದರು.