ಮಡಿಕೇರಿ, ಮೇ 24: ಕೊಡವ ಮಕ್ಕಡ ಕೂಟ ಹಾಗೂ ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಜಂಟಿ ಆಶ್ರಯದಲ್ಲಿ ಮಡಿಕೇರಿ ಜನರಲ್ ತಿಮ್ಮಯ್ಯ ಶಾಲೆಯಲ್ಲಿ ನಡೆಯುತ್ತಿರುವ ಆಟ್-ಪಾಟ್-ಪಡಿಪು ಸಮಾರೋಪ ಸಮಾರಂಭ ತಾ. 25 ರಂದು (ಇಂದು) ನಡೆಯಲಿದೆ ಎಂದು ಕೊಡವ ಮಕ್ಕಡ ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ತಿಳಿಸಿದ್ದಾರೆ.

ತಾ. 14 ರಿಂದ 24 ರವರೆಗೆ 6ನೇ ವರ್ಷದ ಆಟ್-ಪಾಟ್-ಪಡಿಪು ಕಾರ್ಯಕ್ರಮದಲ್ಲಿ ತರಬೇತುದಾರರಾದ ನಾಪಂಡ ಈರಪ್ಪ, ಮೇವಡ ನಾಣಯ್ಯ, ಮುಂಡಂಡ ಪೂವಪ್ಪ, ಬೊಳ್ಳಜಿರ ಬಿ. ಅಯ್ಯಪ್ಪ, ಮಾದೇಟಿರ ಪ್ರಮೀಳ ಜೀವನ್, ಬೊಳ್ಳಜಿರ ಯಮುನ ಅಯ್ಯಪ್ಪ, ಮುಕ್ಕಾಟಿರ ಅಂಜು ಸುಬ್ರಮಣಿ ಬೊಳಕಾಟ್, ಕೋಲಾಟ್, ಕತ್ತಿಯಾಟ್, ಪರೆಕಳಿ, ಕಪ್ಪೆಯಾಟ್, ಉಮ್ಮತಾಟ್, ಬಾಳೋಪಾಟ್, ತಾಲಿಪಾಟ್ ಸಂಬಂಧ ಅಡ್‍ಕ್‍ವ, ಕೊಡವ ತಿಂಗಳು, ವಾರದ ಬಗ್ಗೆ ತರಬೇತಿ ನೀಡಿದ್ದಾರೆ. ತಾ. 25 ರಂದು ಮಡಿಕೇರಿ ಜನರಲ್ ತಿಮ್ಮಯ್ಯ ಶಾಲೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

ಪೂರ್ವಾಹ್ನ 10.30 ಗಂಟೆಗೆ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತ ಬೊಳ್ಳಪ್ಪ, ಜನರಲ್ ತಿಮ್ಮಯ್ಯ ಶಾಲೆಯ ಪ್ರಾಂಶುಪಾಲೆ ಕಲ್ಮಾಡಂಡ ಸರಸ್ವತಿ, ಮಡಿಕೇರಿ ಕೊಡವ ಸಮಾಜದ ಉಪಾಧ್ಯಕ್ಷ ಮಣವಟ್ಟಿರ ಚಿಣ್ಣಪ್ಪ, ಜನರಲ್ ತಿಮ್ಮಯ್ಯ ಶಾಲೆಯ ಕರಸ್ಪಾಂಡೆಂಟ್ ಚೋವಂಡ ಕಾಳಪ್ಪ ಭಾಗವಹಿಸಲಿರುವರು. ಸಭಾ ಕಾರ್ಯದ ನಂತರ ತರಬೇತಿ ಹೊಂದಿದ ಮಕ್ಕಳಿಂದ ಆಟ್-ಪಾಟ್ ಪ್ರದರ್ಶನ, ಮಕ್ಕಳಿಗೆ ಪ್ರಮಾಣ ಪತ್ರ ನೀಡಲಾಗವದು. ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಭೋಜನದ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.