ಕುಶಾಲನಗರ, ಮೇ 23 : ಕುಶಾಲನಗರ ಸೆರಾಕೇರ್ ಹೆಲ್ತ್ ಸೆಂಟರ್ ಆಶ್ರಯದಲ್ಲಿ ಅಮ್ಮಂದಿರ ದಿನಾಚರಣೆ ಆಚರಿಸಲಾಯಿತು. ಮೈಸೂರು ರಸ್ತೆಯ ಶೌರ್ಯ ಮ್ಯಾನ್‍ಶನ್ ಕಾಂಪ್ಲೆಕ್ಸ್‍ನ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕಿ ಸುನಂದ, ಸಿಬ್ಬಂದಿಗಳಾದ ಪಾರ್ವತಿ, ಮಮತ, ಚೈತ್ರ, ಭವ್ಯ, ನಂದೀಶ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸೆರಾಕೇರ್ ಸಂಸ್ಥೆ ಕಳೆದ 12 ವರ್ಷಗಳಿಂದ ರೋಗಿಗಳಿಗೆ ಉಚಿತ ಥರ್ಮಲ್ ಅಕ್ಯುಪ್ರೆಷರ್ ಥೆರಪಿ ಚಿಕಿತ್ಸೆ ನೀಡುತ್ತಿದೆ.