ಮೂರ್ನಾಡು, ಮೇ. 22 : ಕೊಡಗು ಕೆಂಬಟ್ಟಿ ಜನಾಂಗದ ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಾವಳಿ ವಿಜೃಂಭಣೆಯಿಂದ ಜರುಗಿತು. ಮೂರ್ನಾಡು ವಿದ್ಯಾಸಂಸ್ಥೆ ಬಾಚ್ಚೆಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಏರ್ಪಡಿಸಲಾದ ವಾಲಿಬಾಲ್ ಪಂದ್ಯವನ್ನು ಜೋಡುಬೀಟಿಯ ನಿವೃತ್ತ ಸೈನಿಕ ಬಿಲ್ಲರಿಕುಟ್ಟಂಡ ಪ್ರಭು ಅಯ್ಯಪ್ಪ ಉದ್ಘಾಟಿಸಿದರು. ಮಹಿಳೆಯರ ಥ್ರೋಬಾಲ್ ಪಂದ್ಯವನ್ನು ಉಪನ್ಯಾಸಕಿ ಡಾ. ರಾಧಿಕ ಹಾಗೂ ನಿವೃತ್ತ ಶಿಕ್ಷಕಿ ಬೋಜಮ್ಮ ಉದ್ಘಾಟಿಸಿದರು.

ಪ್ರಭು ಅಯ್ಯಪ್ಪ ಮಾತನಾಡಿ ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ. ಕ್ರೀಡಾಕೂಟಗಳಿಂದ ಜನಾಂಗದವರು ಒಂದೆಡೆ ಸೇರುವ ಅವಕಾಶ ಲಭಿಸುತ್ತದೆ ಎಂದು ತಿಳಿಸಿ ಪಂದ್ಯಾವಳಿ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಜನಾಂಗ ಭಾಂದವರ ನಡುವೆ ನಡೆದ ವಾಲಿಬಾಲ್ ಅಂತಿಮ ಪಂದ್ಯದಲ್ಲಿ ಜೋಡುಬೀಟಿ ತಂಡವು ಅರಮೇರಿ ತಂಡವನ್ನು ಸೋಲಿಸಿ ವಿನ್ನರ್ಸ್ ಪ್ರಶಸ್ತಿ ಪಡೆದುಕೊಂಡಿತು. ಅರಮೇರಿ ತಂಡ ರನ್ನರ್ಸ್ ಪ್ರಶಸ್ತಿಗೆ ಭಾಜನವಾಯಿತು. ಮಹಿಳೆಯರ ಥ್ರೋಬಾಲ್ ಪಂದ್ಯದಲ್ಲಿ ಜೋಡುಬೀಟಿ ಹಾಗೂ ಬಿಳುಗುಂದ ತಂಡವು ಫೈನಲ್ ಪ್ರವೇಶಿಸಿ ಜೋಡುಬೀಟಿ ತಂಡ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಪನ್ಯಾಸಕಿ ಡಾ. ರಾಧಿಕ ಮಾತನಾಡಿ ಕೊಡಗಿನ ಮೂಲನಿವಾಸಿಗಳಲ್ಲಿ ಕೆಂಬಟ್ಟಿ ಜನಾಂಗ ಬಾಂಧವರು ಒಗ್ಗಟ್ಟು ಮೂಡಿಸುವಲ್ಲಿ ಇಂತಹ ಕ್ರೀಡಾಕೂಟ ಸಹಕಾರಿ ಆಗಿದೆ. ಕ್ರೀಡಾಕೂಟಕ್ಕೆ ಜನಾಂಗದ ಪ್ರತಿಯೊಬ್ಬರು ಸಹಕಾರ ನೀಡಬೇಕು. ಆಗ ಜನಾಂಗದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಿಳಿಸಿ ಮಕ್ಕಳ ವಿದ್ಯೆಯತ್ತ ಗಮನ ಹರಿಸುವಂತೆ ಕರೆನೀಡಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಡಾ. ಮೇಚಿರ ಸುಭಾಷ್ ನಾಣಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕೆಂಬಟ್ಟಿ ಜನಾಂಗವು ಕೊಡವ ಸಂಸ್ಕøತಿ, ಪದ್ದತಿ, ಪರಂಪರೆಯ ಪೋಷಣೆಯಲ್ಲಿ ಮಹತ್ವರ ಪಾತ್ರ ಹಾಗೂ ಜವಾಬ್ದಾರಿ ಹೊಂದಿದೆ. ವೇದಿಕೆಯಲ್ಲಿ ಕರಡ ಪ್ರಕಾಶ್, ಪಾರಾಣೆ ಸುರೇಶ್, ಬಾವಲಿ ಬಾಬಣಿ, ಹೇಮಂತ್, ಅರುಣಾ, ಭೀಮ್ಮಣ್ಣಿ ಅಪ್ಪುಕುಂಞÂ, ರವಿ, ಅಟ್ಟು ಪೂವಯ್ಯ, ಪಂದ್ಯ ಆಯೋಜಕ ಹರೀಶ್ ಕುಟ್ಟಪ್ಪ, ಕಿಶೋರ್ ಪೂವಯ್ಯ ಇತರರು ಹಾಜರಿದ್ದರು.