ಮಡಿಕೇರಿ, ಮೇ 21: 2018-19ನೇ ಸಾಲಿಗೆ ವಿರಾಜಪೇಟೆ ತಾಲ್ಲೂಕಿನ ಬಾಳುಗೋಡು ಏಕಲವ್ಯ/ಮೊರಾರ್ಜಿ ದೇಸಯಿ ವಸತಿ ಶಾಲೆಗೆ ಅತಿಥಿ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಏಕಲವ್ಯ ಮಾದರಿ ವಸತಿ ಶಾಲೆಯ ಪ್ರೌಢ ಶಾಲಾ ವಿಭಾಗಕ್ಕೆ ಕನ್ನಡ (ಬಿ.ಎ.,ಬಿ.ಎಡ್), ವಿಜ್ಞಾನ (ಬಿ.ಎಸ್ಸಿ,ಬಿ.ಎಡ್) ವಿಷಯಗಳಿಗೆ ಅತಿಥಿ ಶಿಕ್ಷಕರು ಹಾಗೂ ಕಾಲೇಜು ವಿಭಾಗಕ್ಕೆ ಭೌತಶಾಸ್ತ್ರ (ಸ್ನಾತಕೋತ್ತರ ಪದವಿ), ರಾಸಾಯನಶಾಸ್ತ್ರ (ಸ್ನಾತಕೋತ್ತರ ಪದವಿ), ಜೀವಶಾಸ್ತ್ರ (ಸ್ನಾತಕೋತ್ತರ ಪದವಿ), ಕನ್ನಡ(ಸ್ನಾತಕೋತ್ತರ ಪದವಿ), ಗಣಿತ (ಸ್ನಾತಕೋತ್ತರ ಪದವಿ), ಕಂಪ್ಯೂಟರ್ ಸೈನ್ಸ್ (ಕಂಪ್ಯೂಟರ್ ಸೈನ್ಸ್, ಎಂಎಸ್‍ಸಿ) ವಿಷಯಗಳಿಗೆ ಅತಿಥಿ ಉಪನ್ಯಾಸಕರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಾಲಾ ವಿಭಾಗಕ್ಕೆ ಕನ್ನಡ(ಬಿ.ಎ.,ಬಿ.ಎಡ್), ಇಂಗ್ಲೀಷ್(ಬಿ.ಎ., ಬಿ.ಎಡ್), ಹಿಂದಿ (ಬಿ.ಎ., ಬಿ.ಎಡ್), ಗಣಿತ(ಬಿ.ಎಸ್ಸಿ, ಬಿ.ಎಡ್) ವಿಷಯಗಳಿಗೆ ಅತಿಥಿ ಶಿಕ್ಷಕರಿಂದ ಅರ್ಜಿ ಆಹ್ವಾನಿಸಲಾಗಿದೆ ಅರ್ಜಿಯನ್ನು ಸಲ್ಲಿಸಲು ತಾ. 31 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು ಏಕಲವ್ಯ/ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಾಳುಗೋಡು ದೂರವಾಣಿ ಸಂಖ್ಯೆ 9483162466, 9902499269 ಸಂಪರ್ಕಿಸಬಹುದಾಗಿದೆ.