ಮಡಿಕೇರಿ, ಮೇ 20: ನಿನ್ನೆಯಿಂದ ಇಲ್ಲಿನ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಆಯೋಜ&divound; Éಗೊಂಡಿದ್ದ ಕರ್ನಾಟಕ ಮೂಳೆ ತಜ್ಞ ವೈದ್ಯರ ಶಿಬಿರದ ಸಮಾರೋಪ ಸಮಾರಂಭವು ಇಂದು ನೆರವೇರಿತು. ಶಿಬಿರದಲ್ಲಿ ಪ್ರಸಕ್ತ ಕೊಡಗಿನ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಇರುವ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ಸ್ಥಳೀಯ ಜನತೆಗೆ ಉತ್ತಮ ಸೇವೆ ಒದಗಿಸುವ ದಿಸೆಯಲ್ಲಿ ಸಮಾಲೋಚನೆ ನಡೆಸಲಾಯಿತು.

ಅಲ್ಲದೆ, ಮೂಳೆ ತಜ್ಞರು ಶಿಬಿರದಲ್ಲಿ ಸಾಕಷ್ಟು ಮಂಥನ ನಡೆಸುವದರೊಂದಿಗೆ, ಭವಿಷ್ಯದ ಕುರಿತು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು. ಅತ್ಯುತ್ತಮ ಪ್ರಬಂಧಗಳನ್ನು ಮಂಡಿಸಿದ ತಜ್ಞ ವೈದ್ಯರಿಗೆ ಕರ್ನಾಟಕ ಮೂಳೆ ತಜ್ಞರ ಸಂಘದಿಂದ ಪುರಸ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತ ಹೆಸರಾಂತ ಇಪ್ಪತ್ತು ತಜ್ಞ ವೈದ್ಯರುಗಳಿಂದ ಕೀಲು ಮತ್ತು ಮೂಳೆಗಳ ವಿಷಯವಾಗಿ ಸುಧೀರ್ಘ ವಾದ ವಿವರಣೆ ಮತ್ತು ನೂತನ ಚಿಕಿತ್ಸಾ ವಿಧಾನಗಳ ಬಗ್ಗೆ ಚರ್ಚೆ ನಡೆಸಲಾಯಿತು. ತಾ. 20 ರಂದು ಕಾರ್ಯಕ್ರಮದಲ್ಲಿ ಮೇಡಿಕೋ ಲೀಗಲ್ ಮತ್ತು ಕೆಪಿಎಂಕಾಯ್ದೆ ಬಗ್ಗೆ ಸುಧೀರ್ಘವಾದ ಚರ್ಚೆ ನಡೆಯಿತು.

ನಂತರ ಕಾರ್ಯಕ್ರಮದಲ್ಲಿ ವೈದ್ಯರಿಂದ ಸಂಶೋಧನ ಪ್ರಬಂಧ ಮಂಡಿಸಲಾಯಿತು. ಅತ್ಯೂತ್ತಮ ಪ್ರಭಂದ ಮಂಡಿಸಿದ ವೈದೇಹಿ ಮೆಡಿಕಲ್ ಕಾಲೇಜಿನ ಡಾ. ಶಶಾಂಕ್ ರವರಿಗೆ ಪ್ರಥಮ ಬಹುಮಾನ ನೀಡಲಾಯಿತು.

ಕಾರ್ಯಕ್ರಮದ ಕೊನೆಗೆ ಸಮಾರೋಪ ಸಮಾರಂಭ ನಡೆದು ಕರ್ನಾಟಕ ಆರ್ಥೋಪೇಡಿಕ್ಸ್ ಅಧ್ಯಕ್ಷರಾದ ಡಾ. ಪುರುಷೋತ್ತಮ ವಿ.ಜೆ ರವರು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಸಂಘಟನ ಸಮಿತಿಗೆ ಅಭಿನಂದನೆ ಸಲ್ಲಿಸಿದರು. ಕೊಡಗಿನಲ್ಲಿ ಇಂತಹ ಕಾರ್ಯಕ್ರಮ ಆಯೋಜನೆಯೊಂದಿಗೆ ಕೊಡಗಿನಲ್ಲಿ ವೈದ್ಯಕೀಯ ಚಟುವಟಿಕೆ ಮುಂದುವರೆಯಲಿ ಎಂದು ಹಾರೈಸಿದರು.

ಸಂಸ್ಥೆಯ ಅಧ್ಯಕ್ಷ ಡಾ. ಪುರುಷೋತ್ತಮ, ಮಡಿಕೇರಿ ವೈದ್ಯಕೀಯ ಸಂಸ್ಥೆಯ ಡಾ. ಕಾರ್ಯಪ್ಪ, ತಜ್ಞ ವೈದ್ಯರುಗಳಾದ ಡಾ. ರವಿ ಅಪ್ಪಾಜಿ, ಡಾ. ಜೋಷಿ ಪೆರೇರಾ, ಡಾ. ಆನಂದ್, ಡಾ. ಗ್ರೇಸಿ ನಾಣಯ್ಯ, ಡಾ. ಸಿದ್ಧಿಕ್, ಸೇರಿದಂತೆ ಕೊಡಗು ಸಹಿತ ರಾಜ್ಯದೆಲ್ಲೆಡೆಯಿಂದ ಆಗಮಿಸಿದ್ದ ಪ್ರತಿನಿಧಿಗಳು, ಕೆಓಎ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.