ಮಡಿಕೇರಿ, ಮೇ 18: ಕೊಡಗು ಫುಟ್ಬಾಲ್ ಅಕಾಡೆಮಿ ಮರಗೋಡು ವತಿಯಿಂದ ಏರ್ಪಡಿಸಲಾಗಿರುವ ಗೌಡ ಫುಟ್ಬಾಲ್ ಪಂದ್ಯಾವಳಿಯನ್ನು ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಂ ಉದ್ಘಾಟಿಸಿದರು.ಈ ರೀತಿಯ ಕ್ರೀಡೆಯು ಗ್ರಾಮೀಣ ಜನತೆಯಲ್ಲಿ ಅಡಗಿರುವ ಕಲೆಯನ್ನು ಹೊರಹಾಕಲು ಉತ್ತಮ ವೇದಿಕೆಯನ್ನು ಒದಗಿಸುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌಡ ಫುಟ್ಬಾಲ್ ಅಕಾಡೆಮಿ ಅಧ್ಯಕ್ಷ ಕಟ್ಟೆಮನೆ ರಾಕೇಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಂಪುಳೀರ ದಿನೇಶ್, ಮಂದ್ರೀರ ತೇಜಸ್ ನಾಣಯ್ಯ, ಮಂದ್ರೀರ ಮೋಹನ್ ದಾಸ್, (ಮೊದಲ ಪುಟದಿಂದ) ದೇವಜನ ನಾಣಯ್ಯ, ಪರಿಚನ ಪ್ರದೀಪ್ ಹಾಗೂ ದೀರ್‍ಮಕ್ಕಡ ಶಿವ ಉಪಸ್ಥಿತರಿದ್ದರು.ಪ್ರದರ್ಶನ ಪಂದ್ಯಾಟವು ಕೊಡಗು ಗೌಡ ಆರ್ಮಿ ಟೈಗರ್ಸ್ ಮತ್ತು ಕಿಕ್ಕರ್ಸ್ ಮರಗೋಡು ನಡುವೆ ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ಪೇರಿಯನ ಜಯಾನಂದ ನೆರವೇರಿಸಿದರು. ನಂತರ ಗೌಡ ಕುಟುಂಬವಾರು ಪಂದ್ಯಾಟವು ಕಾಂಗೀರ ಹಾಗೂ ಎಡಿಕೇರಿ ತಂಡಗಳ ನಡುವೆ ನಡೆಯಿತು. ಕಾಂಗೀರ ತಂಡವು 3-1 ಗೋಲುಗಳಿಂದ ಎಡಿಕೇರಿಯನ್ನು ಮಣಿಸಿತು. ಪಾರೆಮಜಲು ತಂಡವು ಬಾರಿಕೆ ತಂಡವನ್ನು 3-0 ಗೋಲುಗಳಿಂದ ಜಯಗಳಿಸಿತು. ಬಿಲ್ತಜ್ಜೆ ತಂಡವು 1-0 ಗೋಲುಗಳಿಂದ ಗುಡ್ಡಾಂಡ್ರ ತಂಡವನ್ನು ಸೋಲಿಸಿತು. ಬೆಪ್ಪುರನ - ಬಿಲ್ತಜ್ಜೆ, ಬಿಲ್ತಜ್ಜೆ ತಂqವು 2-1 ಗೋಲುಗಳಿಂದ ಬೆಪ್ಪುರನ ತಂಡವನ್ನು ಸೋಲಿಸಿತು.