ಮಡಿಕೇರಿ, ಮೇ 15: ಇಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಶ್ರೀವಿದ್ಯಾ ಅವರ ಹುಟ್ಟುಹಬ್ಬ. ಆದರೂ ಅದನ್ನು ಹೇಳಿಕೊಳ್ಳದೆ ಬೆಳಗ್ಗಿನಿಂದ ಚುನಾವಣಾ ಮತಪತ್ರ ಎಣಿಕೆ ಕಾರ್ಯದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದರು.
ಇಂದು ರಾತ್ರಿ ಕಚೇರಿಯ ಕೆಲಸದಲ್ಲೇ ಮಗ್ನರಾಗಿದ್ದ ಅವರಿಗೆ ಕಚೇರಿ ಸಿಬ್ಬಂದಿ ಅಚ್ಚರಿ ನೀಡಿದರು. ಕೇಕೊಂದನ್ನು ತಂದು ಕತ್ತರಿಸುವಂತೆ ಹೇಳಿ ಶುಭ ಹಾರೈಸಿದರು.