ಶನಿವಾರಸಂತೆ, ಮೇ 14: ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಮುಂದುವರೆದಿದ್ದು, ಮತ ಎಣಿಕೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ವೃತ್ತ ನಿರೀಕ್ಷಕ ನಂಜುಂಡೇಗೌಡ ಮನವಿ ಮಾಡಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ಸಂಜೆ ನಡೆದ ವಿವಿಧ ಪಕ್ಷಗಳ ಮುಖಂಡರ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಿಎಸ್ಐ ಎನ್. ಆನಂದ್ ಮಾತನಾಡಿ, ಶಾಂತಿ ಕಾಪಾಡುವಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸುವಂತೆ ಕೋರಿದರು.
ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಮುಖಂಡರಾದ ಎಂ.ಎ. ಆದಿಲ್ ಪಾಶ, ಡಿ.ಪಿ. ಬೋಜಪ್ಪ, ಎನ್.ಕೆ. ಅಪ್ಪಸ್ವಾಮಿ, ಕೆ.ಎಸ್. ಚೆನ್ನಬಸಪ್ಪ, ಬಸವರಾಜ್ ಬೆಳ್ಳಿ, ಡಿ. ಭಗವಾನ್, ಹನೀಫ್, ಎಸ್.ಎಂ. ಪ್ರಕಾಶ್, ಅಬ್ಬಾಸ್, ನಾಸೀರ್ ಮತ್ತಿತರರು ಹಾಗೂ ಪಿಎಸ್ಐಗಳಾದ ಹೆಚ್.ಎಂ. ಗೋವಿಂದ್, ಚೆಲುವರಾಜ್, ಸಿಬ್ಬಂದಿ ಉಪಸ್ಥಿತರಿದ್ದರು.