ಕಾಶ್ಮೀರದಾದ್ಯಂತ ಹೈ ಅಲರ್ಟ್ಜ ಮ್ಮು, ಮೇ 14 : ಅಂತರಾಷ್ಟ್ರೀಯ ಗಡಿಯಲ್ಲಿ ಶಂಕಾಸ್ಪದ ಓಡಾಟಗಳು ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಸೋಮವಾರ ತಿಳಿದು ಬಂದಿದೆ. ಮೇ.19 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದು, ಈ ಹಿನ್ನಲೆಯಲ್ಲಿ ಅಹಿತಕರ ಘಟನೆಗಳನ್ನು ಸೃಷ್ಟಿಸಲು ಉಗ್ರರು ಸಂಚು ರೂಪಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಮಧ್ಯರಾತ್ರಿ 12 ಗಂಟೆ ಸಮಯದಲ್ಲಿ ಕತುವಾ ಜಿಲ್ಲೆಯ ಅಂತರಾಷ್ಟ್ರೀಯ ಗಡಿ ಭಾಗದಲ್ಲಿ ಗುಂಪೆÇಂದು ಶಂಕಾಸ್ಪದ ಚಟುವಟಿಕೆಗಳನ್ನು ನಡೆಸುತ್ತಿದೆ ಎಂಬುದಾಗಿ ಮಾಹಿತಿಗಳು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಜಮ್ಮುಮತ್ತು ಕಾಶ್ಮೀರದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕತುವಾ, ಸಾಂಬಾ, ಜಮ್ಮು ಜಿಲ್ಲೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭದ್ರತಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಕತುವಾ ಜಿಲ್ಲೆಯ ತರ್ನಾಹ್ ಅಲ್ಲಾಹ್ ಪ್ರದೇಶದಲ್ಲಿ ಶಂಕಿತ ಉಗ್ರರ ಓಡಾಟಗಳು ಕಂಡು ಬಂದ ಹಿನ್ನಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಶಶಿ ತರೂರ್ ವಿರುದ್ಧ ಚಾರ್ಜ್‍ಶೀಟ್ ನವದೆಹಲಿ, ಮೇ 14 : ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ-ಕಾನೂನು, ಫೆÇೀರೆನ್ಸಿಕ್ ಪುರಾವೆಗಳ ಆಧಾರದ ಮೇಲೆ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಹೆಸರನ್ನು ದಾಖಲಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಈ ಪ್ರಕರಣದ ಜಾರ್ಜ್ ಶೀಟ್ ನಲ್ಲಿ ಶಶಿ ತರೂರ್ ಅವರನ್ನೇ ಏಕೈಕ ಆರೋಪಿಯನ್ನಾಗಿಸಲಾಗಿದೆ. 3 ಸಾವಿರ ಪುಟಗಳ ಜಾರ್ಜ್ ಶೀಟ್ ನಲ್ಲಿ ಶಶಿ ತರೂರ್, ಅವರ ಪತ್ನಿಯೊಂದಿಗೆ ಕ್ರೂರವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.ತನಿಖೆಯ ಸಂದರ್ಭದಲ್ಲಿ ವಿಶ್ಲೇಷಿಸಿದ ವೈದ್ಯಕೀಯ-ಕಾನೂನು ಮತ್ತು ನ್ಯಾಯ ಸಾಕ್ಷ್ಯಗಳ ಆಧಾರದ ಮೇಲೆ ಮತ್ತು ಮಾನಸಿಕ ಶವಪರೀಕ್ಷೆಯ ತಜ್ಞರ ಅಭಿಪ್ರಾಯದಲ್ಲಿ ಜಾರ್ಜ್ ಶೀಟ್ ಸಲ್ಲಿಸಲಾಗಿದ್ದು, ಈ ವಿಷಯವು ನ್ಯಾಯಾಧೀಶರದ್ದಾಗಿದೆ” ಎಂದು ದೆಹಲಿ ಪೆÇಲೀಸ್ ವಕ್ತಾರರು ತಿಳಿಸಿದ್ದಾರೆ.ಸಾವಿನ ಕಾರಣವನ್ನು ಗುರುತಿಸುವ ಉದ್ದೇಶದಿಂದ ಸಾವಿನ ಸಮಯದಲ್ಲಿ ವ್ಯಕ್ತಿಯ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮನೋವೈಜ್ಞಾನಿಕ ಶವತಜ್ಞರು ಪುನರ್ ರಚಿಸಿದ ಮಾನಸಿಕ ಸ್ಥಿತಿಯ ಮೌಲ್ಯಮಾಪನ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಪ್ರಚಾರಕ್ಕಾಗಿ 4,343 ಕೋಟಿ ರೂ. ವೆಚ್ಚ

ಮುಂಬೈ, ಮೇ 14 : ವಿವಿಧ ಮಾಧ್ಯಮಗಳಿಗೆ ಜಾಹೀರಾತು ಮತ್ತು ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬರೋಬ್ಬರಿ 4,343 ಕೋಟಿ ರೂಪಾಯಿ ವ್ಯಯಿಸಿದೆ ಎಂಬ ಅಂಶ ಆರ್‍ಟಿಐನಿಂದ ಬಹಿರಂಗೊಂಡಿದೆ. ಮುಂಬೈ ಮೂಲದ ಆರ್ಟಿಐ ಕಾರ್ಯಕರ್ತ ಅನಿಲ್ ಗಲ್ಗಲಿ ಅವರು ಕೇಂದ್ರದ ಬ್ಯೂರೋ ಆಫ್ ಔಟ್ರೀಚ್ ಅಂಡ್ ಕಮ್ಯುನಿಕೇಷನ್(ಬಿಒಸಿ)ಗೆ ಪ್ರಸ್ತುತ ಕೇಂದ್ರ ಸರ್ಕಾರ ಜಾಹೀರಾತು ಮತ್ತು ಪ್ರಚಾರಕ್ಕಾಗಿ ವ್ಯಯಿಸಿರುವ ಮೊತ್ತದ ಮಾಹಿತಿ ನೀಡುವಂತೆ ಆರ್ಟಿಐ ಸಲ್ಲಿಸಿದ್ದರು. ಬಿಒಸಿಯ ಹಣಕಾಸು ಸಲಹೆಗಾರ ತಪನ್ ಸುತ್ರಾಧರ್ ಅವರು ಮಾಹಿತಿ ನೀಡಿದ್ದು 2014ರಿಂದ 2017ರವರೆಗೂ 4,300 ಕೋಟಿ ರುಪಾಯಿ ವ್ಯಯಿಸಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. 2014ರ ಜೂನ್ ನಿಂದ 2015ರ ಮಾರ್ಚ್ ವರೆಗೂ ಕೇಂದ್ರ ಸರ್ಕಾರ ಪ್ರಿಂಟ್ ಗೆ 424 ಕೋಟಿ ರು. ಸಂವಹನ ಮಾಧ್ಯಮಕ್ಕೆ 448 ಕೋಟಿ ರು. ಹೊರಾಂಗಣ ಪ್ರಚಾರಕ್ಕೆ 79 ಕೋಟಿ ರೂ. ಖರ್ಚು ಮಾಡಿದ್ದು ಒಟ್ಟಾರೆ 953 ಕೋಟಿ ರೂ. ವ್ಯಯಿಸಿದೆ.

ಕುಮಾರಸ್ವಾಮಿಗೆ ಸಿಂಗಾಪುರದಲ್ಲಿ ಚಿಕಿತ್ಸೆ

ಬೆಂಗಳೂರು, ಮೇ 14 : ಜ್ವರದಿಂದ ಬಳಲುತ್ತಿದ್ದರೂ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಪ್ರಚಾರ ಕಾರ್ಯ ನಡೆಸಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿಯವರು, ಮತದಾನ ಪ್ರಕ್ರಿಯೆ ಅಂತ್ಯಗೊಳ್ಳುತ್ತಿದ್ದಂತೆಯೇ ವೈದ್ಯಕೀಯ ತಪಾಸಣೆಗಾಗಿ ಸಿಂಗಾಪುರಕ್ಕೆ ತೆರಳಿದ್ದಾರೆಂದು ಸೋಮವಾರ ತಿಳಿದುಬಂದಿದೆ. ಮೇ. 12 ರಂದು ಮತದಾನ ಪ್ರಕ್ರಿಯೆ ಅಂತಿಮಗೊಳ್ಳುತ್ತಿದ್ದಂತೆಯೇ ಆರೋಗ್ಯ ತಪಾಸಣೆಗಾಗಿ ಸಿಂಗಾಪುರಕ್ಕೆ ತೆರಳಿದ್ದರು. ವೈದ್ಯಕೀಯ ತಪಾಸಣೆ ಪೂರ್ಣಗೊಂಡಿರುವದಾಗಿ ತಿಳಿಬಂದಿದ್ದು, ಇಂದು ರಾತ್ರಿ ವಾಪಸ್ಸಾಗಲಿದ್ದಾರೆಂದು ವರದಿಗಳು ತಿಳಿಸಿವೆ. ರಾಜ್ಯ ವಿಧಾನಸಭಾ ಚುನಾವಣೆ ಕುರಿತಂತೆ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಅತಂತ್ರ ಫಲಿತಾಂಶಗಳ ಮುನ್ಸೂಚನೆಗಳನ್ನು ನೀಡುತ್ತಿವೆ. ಈ ನಡುವಲ್ಲೇ ಕಿಂಗ್ ಮೇಕರ್ ಎಂದೇ ಪರಿಗಣಿಸಲಾಗುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು ಸಿಂಗಾಪುರಕ್ಕೆ ಹಾರಿರುವುದು ಹಲವು ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು.

ಸಿಮಿ ತರಬೇತಿ : 18 ಮಂದಿಗೆ ಶಿಕ್ಷೆ

ಕೊಚ್ಚಿ, ಮೇ 14 : ಡಿಸೆಂಬರ್ 2007ರ ವಗಾಮೋನ್ ಸಿಮಿ ಶಸ್ತ್ರಾಸ್ತ್ರ ತರಬೇತಿ ಶಿಬಿರ ಪ್ರಕರಣದಲ್ಲಿ 18 ಮಂದಿ ಅಪರಾಧಿಗಳೆಂದು ಕೇರಳದ ಕೊಚ್ಚಿಯ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ ಸೋಮವಾರ ತೀರ್ಪು ನೀಡಿದೆ. ಘಟನೆಯಲ್ಲಿ ನ್ಯಾಯಾಲಯ 17 ಮಂದಿಯನ್ನು ಖುಲಾಸೆಗೊಳಿಸಿದೆ. ಭಾರತೀಯ ದಂಡಸಂಹಿತೆಯ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ (ಯುಎಪಿಎ) ಮತ್ತು ಸ್ಫೋಟಕ ವಸ್ತುಗಳ ವಸ್ತುನಿಷ್ಠ ಕಾಯ್ದೆಯಡಿ ಆರೋಪಿಗಳನ್ನು ತಪ್ಪಿತಸ್ಥರೆಂದು ಗುರುತಿಸಿ ವಿಶೇಷ ನ್ಯಾಯಾಧೀಶ ಕೌಸರ್ ಎಡಪ್ಪಗತ್ ಇಂದು ತೀರ್ಪು ನೀಡಿದರು. ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ನಾಳೆ ಪ್ರಕಟಿಸಲಿದೆ. ನ್ಯಾಯಾಲಯಕ್ಕೆ ಇಂದು ಇಬ್ಬರು ಆರೋಪಿಗಳನ್ನು ಮಾತ್ರ ಹಾಜರುಪಡಿಸಲಾಗಿತ್ತು. ಇನ್ನುಳಿದವರು ಅಹ್ಮದಾಬಾದ್, ಭೋಪಾಲ್ ಮತ್ತು ಬೆಂಗಳೂರಿನ ವಿವಿಧ ನ್ಯಾಯಾಲಯಗಳಲ್ಲಿ ಬಂಧಿಗಳಾಗಿದ್ದಾರೆ. ಇವರೆಲ್ಲರೂ ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದರು. ಈ ಆರೋಪಿಗಳು ವಿವಿಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರಲ್ಲದೆ ಶಸ್ತಾಸ್ತ್ರಗಳನ್ನು ಅಕ್ರಮವಾಗಿ ಇರಿಸಿಕೊಂಡಿದ್ದರು ಮತ್ತು ವಿವಿಧ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದ್ದರು ಎಂದು ವಿಚಾರಣೆ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ.

ಮೋದಿ ಸರ್ಕಾರ : ಶೇ.57 ಜನರಿಗೆ ತೃಪ್ತಿ

ನವದೆಹಲಿ ಮೇ 14 : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಪೂರೈಸಿದ್ದು ಇನ್ನು ನಾಲ್ಕು ವರ್ಷಗಳ ಮೋದಿ ಸರ್ಕಾರದ ಆಡಳಿತದ ಪರ ಶೇ.57ರಷ್ಟು ಜನರು ತೃಪ್ತಿ ಹೊಂದಿದ್ದಾರೆ ಎಂಬ ಅಂಶ ಸರ್ವೇಯೊಂದರಲ್ಲಿ ಬಹಿರಂಗಗೊಂಡಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಚಿತ್ರಣ ಬದಲಾವಣೆ, ಪಾಕಿಸ್ತಾನದೊಂದಿಗೆ ನಿರ್ವಹಣೆ, ಭಯೋತ್ಪಾದನೆ ವಿರುದ್ಧ ಹೋರಾಟ, ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ತೆರಿಗೆ ಕಿರಿಕಿರಿಯನ್ನು ಕಡಿಮೆ ಮಾಡಿರುವುದು ಇದೇ ವಿಷಯಗಳನ್ನು ಮುಂದಿಟ್ಟುಕೊಂಡು ಆನ್ ಲೈನ್ ಕಮ್ಯುನಿಟಿ ವೆಬ್ ಸೈಟ್ ನಡೆಸಿದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಕಳೆದ ನಾಲ್ಕು ವರ್ಷದಲ್ಲಿ ಎನ್ಡಿಎ ಸರ್ಕಾರದಲ್ಲಿ ವಿಶ್ವ ಮಟ್ಟದಲ್ಲಿ ಭಾರತದ ಚಿತ್ರಣ ಬದಲಾವಣೆ ಮತ್ತು ಪ್ರಭಾವದ ಕುರಿತಂತೆ ಶೇಖಡ 82ರಷ್ಟು ಜನರು ಸಹ ಮತ ವ್ಯಕ್ತಪಡಿಸಿದ್ದಾರೆ.

ರೋಜರ್ ಫೆಡರರ್‍ಗೆ ಅಗ್ರಸ್ಥಾನ

ಪ್ಯಾರಿಸ್, ಮೇ 14 : ಮ್ಯಾಡ್ರಿಡ್ ಮಾಸ್ಟರ್ಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಆಶ್ಚರ್ಯ ರೀತಿಯಲ್ಲಿ ಹೊರಬಂದಿದ್ದ ರಫೆಲ್ ನಡಾಲ್ ಇದೀಗ ಎಟಿಪಿ ರ್ಯಾಂಕಿಂಗ್ ಪಟ್ಟಿಯಲ್ಲೂ ನಂಬರ್ ಒನ್ ಸ್ಥಾನ ಕಳೆದುಕೊಂಡಿದ್ದಾರೆ. ಎಟಿಪಿ ಬಿಡುಗಡೆ ಮಾಡಿರುವ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ರಫೆನ್ ನಡಾಲ್ ರನ್ನು ಹಿಂದಿಕ್ಕಿ ರೋಜರ್ ಫೆಡರರ್ ಅಗ್ರಸ್ಥಾನಕ್ಕೇರಿದ್ದಾರೆ. ಇನ್ನು ಮಾಜಿ ನಂಬರ್ ಆಟಗಾರರಾಗಿದ್ದ ನೊವಾಕ್ ಜಾಕೋವಿಚ್ ಆರು ಅಂಕಗಳ ಕುಸಿತ ಕಂಡಿದ್ದು 18ನೇ ಸ್ಥಾನದಲ್ಲಿದ್ದಾರೆ. ಮಾಡ್ರಿಡ್ ವಿನ್ನರ್ ಅಲೆಕ್ಸಾಂಡರ್ ಝೆರೆವ್ ಮೂರನೇ ಸ್ಥಾನದಲ್ಲಿದ್ದರೆ ಗ್ರಿಗರ್ ಡಿಮಿಟ್ರೋವ್ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.