ಮಡಿಕೇರಿ, ಮೇ 13: ಮುಂಗಾರು ಮಳೆ ಉತ್ತಮವಾಗಿ ಆಗುತ್ತಿರುವುದರಿಂದ ಗುಡುಗು, ಸಿಡಿಲು ಹೆಚ್ಚಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಆ ದಿಸೆಯಲ್ಲಿ ಕುಂಡಾಮೇಸ್ತ್ರಿ ಯೋಜನೆನಿಂದ ನೀರನ್ನು ಪಂಪ್ ಮಾಡಲು ಸಾಕಷ್ಟು ವಿದ್ಯುತ್ ಒದಗದೇ ಇರುವ ಹಿನ್ನೆಲೆ, ನಗರಕ್ಕೆ ನೀರು ಸರಬರಾಜು ಮಾಡಲು ವ್ಯತ್ಯಯ ಉಂಟಾಗುತ್ತಿರುವುದರಿಂದ ಈ ಬಗ್ಗೆ ಸೆಸ್ಕ್ ಅಧಿಕಾರಿಗಳೊಂದಿಗೆ ಸಮಲೋಚಿಸಿಕೊಂಡು ವಿದ್ಯುತ್ ಪೂರೈಸುವ ಸಂದರ್ಭದಲ್ಲಿ ನೀರನ್ನು ಸಾಕಷ್ಟು ಪಂಪ್‍ಮಾಡಿ ಪಂಪ್‍ಹೌಸ್‍ಗಳಲ್ಲಿ ಶೇಖರಿಸಿಕೊಂಡು ನೀರನ್ನು ವಿತರಣೆ ಮಾಡುವಲ್ಲಿ ಕ್ರಮವಹಿಸಲಾಗಿದೆ. ಆದರೂ ಮಳೆ ಹಾಗೂ ಗಾಳಿಗೆ ಮರಗಳು ವಿದ್ಯುತ್ ತಂತಿಗಳ ಮೇಲೆ ಬೀಳುತ್ತಿರುವುದರಿಂದ ತಕ್ಷಣವೇ ತೆರವು ಮಾಡುವ ಕಾರ್ಯ ಸಹ ಮಾಡಿಸಲಾಗುತ್ತಿದೆ. ಆದ್ದರಿಂದ ಆದಷ್ಟು ಶೀಘ್ರ ಸಮಸ್ಯೆ ಬಗೆಹರಿಸಲು ಕ್ರಮವಹಿಸಲಾಗುವುದು ಎಂದು ಎಂದು ಪೌರಾಯುಕ್ತರಾದ ಬಿ.ಶುಭಾ ಅವರು ತಿಳಿಸಿದ್ದಾರೆ.