ಶನಿವಾರಸಂತೆಯ ನಿವಾಸಿ ನಿವೃತ್ತ ಪ್ರಾಂಶುಪಾಲ ಎಂ. ನಾಗೇಶ್ ದಂಪತಿಯ ಅಂಗವಿಕಲೆ ಪುತ್ರಿ ಧಾತ್ರಿ, ತಂದೆ - ತಾಯಿಗಳ ಸಹಾಯದಿಂದ ಶನಿವಾರಸಂತೆಯ ಪ್ರಾಥಮಿಕ ಶಾಲೆಯಲ್ಲಿ ಭಾಗ 34 ಸಂಖ್ಯೆ ಮತಗಟ್ಟೆಗೆ ಇಂದು ಆಗಮಿಸಿ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗೆ ತಮ್ಮ ಮತ ಚಲಾಯಿಸಿದರು.ಶಿರಂಗಾಲ ಮತಗಟ್ಟೆಯ ಸಮೀಪದಲ್ಲಿ ಅರೋಗ್ಯ ಇಲಾಖೆಯ 108ರ ವಾಹನದಲ್ಲಿ ಮತ ಚಲಾಯಿಸಲು ಬಂದ ಕೆಲವು ಮಂದಿ ತಮ್ಮ. ಬಿ.ಪಿ.ಯನ್ನು ಪರೀಕ್ಷಿಸಿಕೊಳ್ಳುತ್ತಿರುವದು ಕಂಡುಬಂದಿತು.ಶನಿವಾರಸಂತೆಯ ಸಮೀಪದ ತ್ಯಾಗರಾಜ ಕಾಲೋನಿಯ ನಿವಾಸಿ, ಅಂಗವಿಕಲ ಸಕುನಪ್ಪ ಅವರು ತಮ್ಮ ಸ್ನೇಹಿತರೊಂದಿಗೆ ವೀಲ್ಚೇರ್ ಸಹಾಯದಿಂದ ತ್ಯಾಗರಾಜ ಕಾಲೋನಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಮತಗಟ್ಟೆಗೆ ಆಗಮಿಸಿ ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗೆ ತಮ್ಮ ಮತ ಚಲಾಯಿಸಿದರು.
ಪೊನ್ನಂಪೇಟೆ ಮತಗಟ್ಟೆಯಲ್ಲಿ ಅನಾರೋಗ್ಯಕ್ಕಿಡಾದ ವ್ಯಕ್ತಿಯನ್ನು ಕಾರ್ಯಕರ್ತರು ಮತದಾನಕ್ಕೆ ವೀಲ್ ಚೇರ್ನಲ್ಲಿ ಕರೆದೊಯ್ಯುತ್ತಿರುವದುಮುಟ್ಲು ಮತಗಟ್ಟೆಯ ದೃಶ್ಯವಿದು...