ನಾಪೆÇೀಕ್ಲು, ಮೇ. 13: ನಾಪೆÇೀಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ನಮ್ಮೆಯ ಇಪ್ಪತ್ತೇಳನೇ ದಿನದ ಪಂದ್ಯಾಟದಲ್ಲಿ ನೆಲ್ಲಮಕ್ಕಡ, ಅಂಜಪರವಂಡ, ಮುರುವಂಡ, ಚೆಕ್ಕೆರ, ಐನಂಡ, ಚೆಪ್ಪುಡಿರ, ಸುಳ್ಳಿಮಾಡ, ಮಂಡೇಪಂಡ, ಕೊಂಗೇಟಿರ, ಪಳಂಗಂಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.ನೆಲ್ಲಮಕ್ಕಡ ಮತ್ತು ಕಂಬೀರಂಡ ತಂಡಗಳ ನಡುವಿನ ಪಂದ್ಯದಲ್ಲಿ ನೆಲ್ಲಮಕ್ಕಡ ತಂಡವು ಕಂಬೀರಂಡ ತಂಡವನ್ನು 2-0 ಗೋಲಿನಿಂದ ಸೋಲಿಸಿತು. ನೆಲ್ಲಮಕ್ಕಡ ತಂಡದ ಪರ ಸಜಿ ನಾಣಯ್ಯ, ಮೊಣ್ಣಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ಅಂಜಪರವಂಡ ಮತ್ತು ಕಡೇಮಾಡ ತಂಡಗಳ ನಡುವಿನ ಸೆಣೆಸಾಟದಲ್ಲಿ ಅಂಜಪರವಂಡ ತಂಡವು ಕಡೇಮಾಡ ತಂಡವನ್ನು 2-0 ಗೋಲಿನಿಂದ ಸೋಲಿಸಿತು. ಅಂಜಪರವಂಡ ತಂಡದ ಪರ ಅಬಿನ್ ಚೆಟ್ಟಿಯಪ್ಪ, ಹೇಮಂತ್ ದೇವಯ್ಯ ತಲಾ ಒಂದೊಂದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು. ಮುರುವಂಡ ಮತ್ತು ಅರೆಯಡ ತಂಡಗಳ ನಡುವಿನ ಪಂದ್ಯದಲ್ಲಿ ಮುರುವಂಡ ತಂಡವು ಅರೆಯಡ ತಂಡವನ್ನು ಟೈ ಬ್ರೇಕರ್ನ 6-5 ಗೋಲಿನಿಂದ ಸೋಲಿಸಿತು. ಕೇಲೇಟಿರ ಮತ್ತು ಚೆಕ್ಕೆರ ತಂಡಗಳ ನಡುವಿನ ಪಂದ್ಯದಲ್ಲಿ ಚೆಕ್ಕೆರ ತಂಡವು ಕೇಲೇಟಿರ ತಂಡವನ್ನು 4-1 ಗೋಲಿನಿಂದ ಸೋಲಿಸಿತು. ಚೆಕ್ಕೆರ ತಂಡದ ಪರ ಬೆಳ್ಯಪ್ಪ ಮೂರು, ಆದರ್ಶ್ ಒಂದು ಗೋಲು ದಾಖಲಿಸಿದರು. ಕೋಡಿಮಣಿಯಂಡ ಮತ್ತು ಐನಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಐನಂಡ ತಂಡವು ಕೋಡಿಮಣಿಯಂಡ ತಂಡವನ್ನು 2-0 ಗೋಲಿನ ಅಂತರದಿಂದ ಸೋಲಿಸಿತು. ಐನಂಡ ತಂಡದ ಪರ ರಂಜನ್, ಕುಶಾಲಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ಚೆಪ್ಪುಡಿರ ಮತ್ತು ಚೌರೀರ (ಹೊದ್ದೂರು) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆಪ್ಪುಡಿರ ತಂಡವು ಚೌರೀರ ತಂಡವನ್ನು 3-1 ಗೋಲಿನಿಂದ ಮಣಿಸಿತು. ಚೆಪ್ಪುಡಿರ ತಂಡದ ಪರ ಪ್ರಣವ್ ಎರಡು, ವಚನ್ ಒಂದು ಗೋಲು ದಾಖಲಿಸಿದರೆ, ಚೌರೀರ ತಂಡದ ಪರ ಧನುಷ್ ನಾಣಯ್ಯ ಒಂದು ಗೋಲು ದಾಖಲಿಸಿದರು. ಸುಳ್ಳಿಮಾಡ ಮತ್ತು ಕುಟ್ಟಂಡ (ಅಮ್ಮತ್ತಿ) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಸುಳ್ಳಿಮಾಡ ತಂಡವು ಕುಟ್ಟಂಡ ತಂಡವನ್ನು ಟೈ ಬ್ರೇಕರ್ನ 5-3 ಗೋಲಿನ ಅಂತರದಿಂದ ಸೋಲಿಸಿತು. ಅನ್ನಾಡಿಯಂಡ ಮತ್ತು ಮಂಡೇಪಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಂಡೇಪಂಡ ತಂಡವು ಅನ್ನಾಡಿಯಂಡ ತಂಡವನ್ನು 4-1 ಗೋಲಿನಿಂದ ಮಣಿಸಿತು. ಮಂಡೇಪಂಡ ತಂಡದ ಪರ ಕವನ್ ಎರಡು, ಗೌತಮ್, ದಿಲನ್ ತಲಾ ಒಂದೊಂದು ಗೋಲು ದಾಖಲಿಸಿದರೆ, ಅನ್ನಾಡಿಯಂಡ ತಂಡದ ಪರ ಪೆÇನ್ನಣ್ಣ ಒಂದು ಗೋಲು ದಾಖಲಿಸಿದರು. ಬಿದ್ದಾಟಂಡ ಮತ್ತು ಕೊಂಗೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೊಂಗೇಟಿರ ತಂಡವು ಬಿದ್ದಾಟಂಡ ತಂಡವನ್ನು 2-1 ಗೋಲಿನಿಂದ ಮಣಿಸಿತು. ಕೊಂಗೇಟಿರ ತಂಡದ ಪರ ನಿಲಾಶ್ ಮಾದಪ್ಪ, ಅನಿಶ್ ಉತ್ತಪ್ಪ ತಲಾ ಒಂದೊಂದು ಗೋಲು ದಾಖಲಿಸಿದರೆ, ಬಿದ್ದಾಟಂಡ ತಂಡದ ಪರ ಚೆಲ್ಸಿ ಮೇದಪ್ಪ ಒಂದು ಗೋಲು ದಾಖಲಿಸಿದರು. ಪಳಂಗಂಡ ಮತ್ತು ಕಾಳೇಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಪಳಂಗಂಡ ತಂಡವು ಕಾಳೇಂಗಡ ತಂಡವನ್ನು 3-1 ಗೋಲಿನಿಂದ ಮಣಿಸಿತು. ಪಳಂಗಂಡ ತಂಡದ ಪರ ಕಾಳಪ್ಪ, ಪ್ರಶೀಲ್, ಪ್ರಜ್ವಲ್ ತಲಾ ಒಂದೊಂದು ಗೋಲು ದಾಖಲಿಸಿದರೆ, ಕಾಳೇಂಗಡ ತಂಡದ ಪರ ಸುಜನ್ ಒಂದು ಗೋಲು ದಾಖಲಿಸಿದರು.
ಭಾರೀ ಮಳೆ: ಅಸ್ತವ್ಯಸ್ತ
ಭಾನುವಾರ ಅಪರಾಹ್ನ 2 ಗಂಟೆ ಸುಮಾರಿಗೆ ಸುರಿದ ಭಾರೀ ಮಳೆಯ ಕಾರಣ ಕುಲ್ಲೇಟಿರ ಹಾಕಿ ನಮ್ಮೆ ನಡೆಯುತ್ತಿರುವ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಮಳೆ ನೀರು ಸಂಗ್ರಹಗೊಳ್ಳುವದರ ಮೂಲಕ ಅಸ್ತವ್ಯಸ್ತಗೊಂಡಿದೆ.
ಮೈದಾನದ ದ್ವಾರಕ್ಕೆ ಅಳವಡಿಸಿರುವ ಕುಲ್ಲೇಟಿರ ಕುಟುಂಬದ ನಾಮ ಫಲಕವಿರುವ ಕಟ್ ಔಟರ್ಗಳು ಮಳೆ, ಗಾಳಿಯ ಕಾರಣದಿಂದ ನೆಲಕ್ಕುರುಳಿದೆ. ಮಾರಾಟ ಮಳಿಗೆಯ ಛಾವಣಿ ಶೀಟುಗಳು ಹಾರಿ ಹೋಗಿವೆ. ಮಳಿಗೆಯಲ್ಲಿರುವ ಫರ್ನಿಚರ್ಗಳು ಮಳೆ ನೀರಿಗೆ ಆಹುತಿಯಾಗಿವೆ. ಮೈದಾನದ ಬಳಿಯಿರುವ ಮರಗಳು ಮುರಿದು ಬಿದ್ದಿವೆ. ಮೈದಾನದ ಸುತ್ತಲು ಅಳವಡಿಸಲಾಗಿರುವ ಜಾಹೀರಾತು ಫಲಕಗಳು ಗಾಳಿಯ ರಭಸಕ್ಕೆ ಮೈದಾನದಲ್ಲಿ ಹರಡಿಕೊಂಡಿರುವದಾಗಿ ಪ್ರತ್ಯಕ್ಷದರ್ಶಿಗಳು ‘ಶಕ್ತಿ’ಗೆ ತಿಳಿಸಿದ್ದಾರೆ.
.