ಗೋಣಿಕೊಪ್ಪಲು, ಮೇ 12 : ನಾಗರಹೊಳೆ ಹಾಗೂ ಬೊಮ್ಮಾಡು ಆಶ್ರಮ ಶಾಲೆಯಲ್ಲಿ ಮತಗಟ್ಟೆಗೆ ಸಿಂಗರಿಸಿದ್ದು ವಿಶೇಷವಾಗಿದ್ದರೆ, ಹೊಡೆದಾಟ ಪ್ರಕರಣ ಮೂಲಕ ಸುದ್ದಿಯಾಗಿದ್ದ ಗೋಣಿಕೊಪ್ಪಲಿನಲ್ಲಿ ಇಂದು ಶಾಂತಿಯುತ ಮತದಾನ ನಡೆಯಿತು.ಕಾಂಗ್ರೆಸ್-ಬಿಜೆಪಿ ಗುಂಪುಗಳ ನಡುವಿನ ಹೊಡೆದಾಟದ ನಂತರ ಗೋಣಿಕೊಪ್ಪಲಿನೆಲ್ಲೆಡೆ ವ್ಯಾಪಕ ಬಿಗಿ ಬಂದೋಬಸ್ತ್ ಹಿನ್ನೆಲೆ ಯಾವದೇ ಅಹಿತಕರ ಘಟನೆ ಮತದಾನದ ಸಂದರ್ಭ ನಡೆಯಲಿಲ್ಲ. ಇಂಡಿಯನ್ ರಿಸರ್ವ್ ಬೆಟಾಲಿಯನ್, ಬಿಹಾರ್ ಮಿಲಿಟರಿ ಪೆÇಲೀಸ್, ಕೆಎಸ್‍ಆರ್‍ಪಿ, ಡಿಎಆರ್, ಎಎನ್‍ಎಫ್, ಸಿವಿಲ್ ಪೆÇಲೀಸ್, ಮಹಿಳಾ ಪೆÇಲೀಸ್, ಹೋಮ್ ಗಾಡ್ರ್ಸ್ ಒಳಗೊಂಡಂತೆ ಹೆಚ್ಚಿನ ಭದ್ರತಾ ಸಿಬ್ಬಂದಿಗಳನ್ನು ಗೋಣಿಕೊಪ್ಪಲು ಒಳಗೊಂಡಂತೆ ಸುತ್ತಮುತ್ತಲು ನಿಯೋಜಿಸಲಾಗಿತ್ತು.ಗೋಣಿಕೊಪ್ಪಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಹಿಳಾ ಸಮಾಜ, ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಸಂತ ಥೋಮಸ್ ಶಾಲಾ ಆವರಣದಲ್ಲಿನ ಮತಗಟ್ಟೆಯಲ್ಲಿ ಬೆಳಗ್ಗಿನಿಂದಲೇ ಮತದಾರರು ನಿರ್ಭೀತಿಯಿಂದ ಬಂದು ಮತ ಚಲಾಯಿಸಿದ್ದು ಕಂಡು ಬಂತು. ಇಂದು ಮತದಾನದ ದಿನವಾದ ಹಿನ್ನೆಲೆ ವಾಣಿಜ್ಯ ನಗರಿ ಗೋಣಿ ಕೊಪ್ಪಲು, ಬಾಳೆಲೆ, ಪೆÇನ್ನಂಪೇಟೆ, ಕಾನೂರು ಇತ್ಯಾದಿ ಸ್ಥಳಗಳಲ್ಲಿ ಸಾರ್ವಜನಿಕರ ಓಡಾಟ ಕುಂಠಿತಗೊಂಡಿತ್ತು.ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅರುಣ್‍ಮಾಚಯ್ಯ ಅವರು ತಮ್ಮ ಪತ್ನಿ ಚಾಂದಿನಿ ಹಾಗೂ ಪುತ್ರ ಅಯ್ಯಪ್ಪನೊಂದಿಗೆ ಮಾಯಮುಡಿ ಗ್ರಾ.ಪಂ.ನ ಮತಗಟ್ಟೆ ಸಂಖ್ಯೆ 201ರಲ್ಲಿ ಬೆಳಿಗ್ಗೆ 7.30 ಗಂಟೆಗೆ ಸುಮಾರಿಗೆ ಸರತಿಯಲ್ಲಿ ನಿಂತು ಮತ ಚಲಾಯಿಸಿದರು. ಇದೇ ಸಂದರ್ಭ ಮಾಧ್ಯಮದೊಂದಿಗೆ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಮತಗಟ್ಟೆಯಲ್ಲಿ ರಮ್ಯಾ ಎಂಬಾಕೆ ತನ್ನ 7 ತಿಂಗಳ ಕಂದಮ್ಮ ನೊಂದಿಗೆ ಬಂದು ಮತಚಲಾಯಿಸಿದ್ದು ವಿಶೇಷವಾಗಿತ್ತು. ಕಾಂಗ್ರೆಸ್ ಮಾಧ್ಯಮ ವಕ್ತಾರ ಟಾಟುಮೊಣ್ಣಪ್ಪ, ಜಿ.ಪಂ.ಸದಸ್ಯ ಬಿ.ಎನ್.ಪ್ರಥ್ಯು, ಟಿಪ್ಪು ಬಿದ್ದಪ್ಪ, ಬಿಜೆಪಿಯ ಮುಖಂಡ ಕಾಳಪಂಡ ಸುಧೀರ್ ಮುಂತಾದವರು ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗ್ರಾ.ಪಂ.ಮತಗಟ್ಟೆಯಲ್ಲಿ ಮತಯಾಚನೆ ಮಾಡುತ್ತಿದ್ದರು.
ಬಾಳೆಲೆ ಸರ್ಕಾರಿ ಶಾಲಾ ಆವರಣದ ಮೂರು ಮತಗಟ್ಟೆ ಗಳಲ್ಲಿಯೂ (ಮೊದಲ ಪುಟದಿಂದ) ಇಂದು ಶಾಂತಿಯುತ ಮತದಾನ ಕಂಡು ಬಂತು.ಬೆಳಿಗ್ಗೆ 8.45 ರ ಸುಮಾರಿಗೆ ಮತಗಟ್ಟೆ ಸಂಖ್ಯೆ 226 ರಲ್ಲಿ 110( ಒಟ್ಟು 873) ಮಂದಿ ಮತಚಲಾಯಿಸಿದ್ದರೆ, 227,228 ಮತಗಟ್ಟೆಯಲ್ಲಿ ತಲಾ 45, 47 ಮತದಾನವಾಗಿತ್ತು. ಇಲ್ಲಿ ಕಾಂಗ್ರೆಸ್ ಪಕ್ಷದ ಪರ ಮಾಜಿ ಕಾಫಿ ಮಂಡಳಿ ಉಪಾಧ್ಯಕ್ಷೆ ಹಾಗೂ ಕೆಪಿಸಿಸಿ ಸದಸ್ಯೆ ತಾರಾ ಅಯ್ಯಮ್ಮ ಮತಯಾಚನೆ ಮಾಡುತ್ತಿದ್ದರು.
ಕಾರ್ಮಾಡುವಿನ ಮತಗಟ್ಟೆಯಲ್ಲಿ ನಿಧಾನಗತಿಯ ಮತದಾನ ಕಂಡು ಬಂತು. ಮಲ್ಲಂಗೆರೆ ಸರ್ಕಾರಿ ಶಾಲಾ ಆವರಣದಲ್ಲಿನ 217 ಮತಗಟ್ಟೆಯಲ್ಲಿ ದೇವನೂರಿನ ಇಬ್ಬರು ಗಿರಿಜನ ಯುವತಿಯರು ತಮ್ಮ ಪುಟ್ಟ ಮಕ್ಕಳೊಂದಿಗೆ ಬಂದು ಮತ ಚಲಾವಣೆ ಮಾಡಿದ್ದು ಕಂಡು ಬಂತು.