ಮಡಿಕೇರಿ, ಮೇ 4: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕುಟುಂಬ ಕಲ್ಯಾಣ ಕಾರ್ಯಕ್ರಮದ ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಿದೆ.
ಲ್ಯಾಪ್ರೊಸ್ಕೋಪಿಕ್: ಡಾ.ನವೀನ್ ನೇತೃತ್ವದಲ್ಲಿ ತಾ. 9ರಂದು ಸಮುದಾಯ ಆರೋಗ್ಯ ಕೇಂದ್ರ ಕುಟ್ಟ, ತಾ. 16 ರಂದು ಸಮುದಾಯ ಆರೋಗ್ಯ ಕೇಂದ್ರ ಕುಶಾಲನಗರ, ತಾ. 19 ರಂದು ಸಮುದಾಯ ಆರೋಗ್ಯ ಕೇಂದ್ರ ಸಿದ್ದಾಪುರ ಮತ್ತು ಪಾಲಿಬೆಟ್ಟ, ತಾ. 21 ರಂದು ಸಮುದಾಯ ಆರೋಗ್ಯ ಕೇಂದ್ರ ನಾಪೋಕ್ಲು, ತಾ. 23 ರಂದು ಸಾರ್ವಜನಿಕ ಆಸ್ಪತ್ರೆ ಸೋಮವಾರಪೇಟೆ, ಹಾಗೂ ತಾ. 26 ರಂದು ಸಮುದಾಯ ಆರೋಗ್ಯ ಕೇಂದ್ರ ಗೋಣಿಕೊಪ್ಪದಲ್ಲಿ ನಡೆಯಲಿದೆ.
ಟ್ಯುಬೆಕ್ಟಮಿ: ಡಾ.ಚೇತನ್.ಎಂ.ವಿ ಅವರ ನೇತೃತ್ವದಲ್ಲಿ ತಾ. 8 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಸುಂಟಿಕೊಪ್ಪ, ತಾ. 17 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಕೊಡ್ಲಿಪೇಟೆ, ತಾ. 18 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಚೆಟ್ಟಳ್ಳಿ ಮತ್ತು ಮಾದಾಪುರ, ತಾ. 22 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಹೆಬ್ಬಾಲೆ ಹಾಗೂ ತಾ.25 ರಂದು ಸಮುದಾಯ ಆರೋಗ್ಯ ಕೇಂದ್ರ ಸಿದ್ದಾಪುರ ಮತ್ತು ಪಾಲಿಬೆಟ್ಟದಲ್ಲಿ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.