ಕುಶಾಲನಗರ: ಚುನಾವಣಾ ಆಯೋಗದ ವತಿಯಿಂದ ಇಲ್ಲಿನ ಸಂತ ಸಬಾಸ್ಟಿನ್ ಚರ್ಚ್ ಆವರಣದಲ್ಲಿ ವಿ.ವಿ. ಪ್ಯಾಟ್ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಒದಗಿಸಲಾಯಿತು. ಚರ್ಚ್ನ ವಾರ್ಷಿಕೋತ್ಸವ ಹಿನ್ನೆಲೆ ಸೇರಿದ್ದ ನೂರಾರು ಮಂದಿ ಕ್ರಿಶ್ಚಿಯನ್ ಸಮುದಾಯದವರಿಗೆ ಮತಯಂತ್ರ, ಹೊಸದಾಗಿ ಪರಿಚಯಿಸಿರುವ ವಿವಿಪ್ಯಾಟ್ ಯಂತ್ರದ ಬಗ್ಗೆ ಅಧಿಕಾರಿಗಳು ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡಿದರು. ಯಂತ್ರಗಳ ಮೂಲಕ ಪ್ರಾಯೋಗಿಕವಾಗಿ ಸಾರ್ವಜನಿಕರಲ್ಲಿ ಉಂಟಾಗಿರುವ ಸಂಶಯಗಳನ್ನು ನಿವಾರಿಸಲಾಯಿತು.
ಈ ಸಂದರ್ಭ ಚುನಾವಣಾಧಿಕಾರಿಗಳಾದ ಎ.ಎಂ. ಶ್ರೀಧರ್, ಜಿ. ಗಣೇಶನ್ ಮತ್ತಿತರರು ಇದ್ದರು.