ಗೋಣಿಕೊಪ್ಪ, ಮೇ 4: ಉತ್ಪಾದನೆಯನ್ನು ಹೆಚ್ಚಿಸುವದರೊಂದಿಗೆ ಸಮರ್ಪಕ ನೀರಿನ ಬಳಕೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವಂತೆ ಟಾಟಾ ಕಾಫಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಸರೀನ್ ಕರೆ ನೀಡಿದರು. ಪಾಲಿಬೆಟ್ಟದ ಟಾಟಾ ಕಾಫಿ ಮೈದಾನದಲ್ಲಿ ಕಾರ್ಮಿಕರ ದಿನಾಚರಣೆಯ ಅಂಗವಾಗಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು ನೀರು ಹಾಗೂ ಇಂಧನವನ್ನು ಮಿತವಾಗಿ ಬಳಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಕಾರ್ಮಿಕರು ತಪ್ಪದೆ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಕ್ರೀಡಾ ಜ್ಯೋತಿಯನ್ನು ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಕಾರ್ಮಿಕರು ತಮ್ಮ ತಂಡಗಳೊಂದಿಗೆ ಮೈದಾನದಲ್ಲಿ ಪಥಸಂಚಲನ ನಡೆಸಿ ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಕಾರ್ಮಿಕ ದಿನಾಚರಣೆಯಲ್ಲಿ ಸಂಭ್ರಮಿಸಿದರು.
ಟಾಟಾ ಸಮೂಹ ಸಂಸ್ಥೆಯ 150 ನೇ ವರ್ಷಾಚರಣೆ ಹಿನ್ನೆಲೆ 150 ಬಿಳಿ ಹಾಗೂ ನೀಲಿ ಬಲೂನ್ಗಳನ್ನು ಹಾರಿಬಿಡುವ ಮೂಲಕ ಸಂಸ್ಥೆಯ ಸೇವೆಯನ್ನು ಸ್ಮರಿಸಲಾಯಿತು. ಸಂಸ್ಥೆಯಲ್ಲಿ 25 ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರನ್ನು ಗುರುತಿಸಿ ಕೈಗಡಿಯಾರವನ್ನು ಉಡುಗೊರೆಯಾಗಿ ನೀಡಲಾಯಿತು. ಅತಿ ಹೆಚ್ಚು ಹಾಜರಾತಿ, ರಕ್ತದಾನ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಕಾರ್ಮಿಕರನ್ನು ಗುರುತಿಸಿ ಗೌರವಿಸಲಾಯಿತು.
ಅತಿ ಹೆಚ್ಚು ಕಾಫಿ ಕೊಯ್ಲು ಮಾಡಿದ ಕಾರ್ಮಿಕರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅರೇಬಿಕಾ ವಿಬಾಗದಲ್ಲಿ 191.98 ಕೆ,ಜಿ ಕೊಯ್ಲು ಮಾಡಿದ ಜಂಬೂರು ಎಸ್ಟೇಟ್ನ ಇನಾಸಿ ಪ್ರಥಮ ಹಾಗೂ 147.96 ಕೆ.ಜಿ ಕೊಯ್ಲು ಮಾಡಿದ ಮೈಲಿಮನೆ ಎಸ್ಟೇಟ್ನ ಕರುಣಾಕರ ದ್ವಿತೀಯ ಬಹುಮಾನ ಪಡೆದುಕೊಂಡರು.
ರೋಬಸ್ಟಾ ವಿಭಾಗದಲ್ಲಿ 331.16 ಕೆ.ಜಿ ಕೊಯ್ಲು ಮಾಡಿದ ಎಮ್ಮೆಗುಂಡಿ ಎಸ್ಟೇಟ್ನ ವೈರಮಣಿ ಪ್ರಥಮ ಹಾಗೂ 269.92 ಕೆ.ಜಿ ಕೊಯ್ಲು ಮಾಡಿದ ಕೋಟೆಬೆಟ್ಟ ಎಸ್ಟೇಟ್ನ ರಾಣಿ ದ್ವಿತೀಯ ಬಹುಮಾನ ಪಡೆದುಕೊಂಡರು.

ಪಡೆದರು.
ಮಹಿಳೆಯರ ವಿಭಾಗ : 100 ಮೀ ಓಟದಲ್ಲಿ ಕಾನನಕಾಡು ಎಸ್ಟೇಟ್ನ ಗಾನವಿ ಪ್ರಥಮ, ಜಂಬೂರು ಎಸ್ಟೇಟ್ನ ಕುಮಾರಿ ದ್ವಿತೀಯ ಹಾಗೂ ಆನಂದಪುರ ಎಸ್ಟೇಟ್ನ ಕವಿತಾ ತೃತೀಯ ಬಹುಮಾನ ಪಡೆದರು.
ನಿಂಬೆ ಹಾಗೂ ಚಮಚದೊಂದಿಗೆ ಓಟದ ಸ್ಪರ್ಧೆಯಲ್ಲಿ ಮೈಲಿಮನೆ ಎಸ್ಟೇಟ್ನ ಪರಮೇಶ್ವರಿ ಪ್ರಥಮ, ಹೊಸಳ್ಳಿ ಎಸ್ಟೇಟ್ನ ಆಶಾ ದ್ವಿತೀಯ ಹಾಗೂ ಸುಂಟಿಕೊಪ್ಪ ಎಸ್ಟೇಟ್ನ ಸರೋಜ ತೃತೀಯ ಬಹುಮಾನ ಪಡೆದರು.
ಮಡಿಕೆ ಓಟ ಸ್ಪರ್ಧೆಯಲ್ಲಿ ಹೊಸಳ್ಳಿ ಎಸ್ಟೇಟ್ನ ಅಂಜಲಿ ಪ್ರಥಮ, ಕೂವರ್ಕೊಲ್ಲಿ ಎಸ್ಟೇಟ್ನ ನೀಲ ದ್ವಿತೀಯ ಹಾಗೂ ಗೂರ್ಗ್ಗುಲ್ಲಿ ಎಸ್ಟೇಟ್ನ ಯಶೋಧ ತೃತೀಯ ಬಹುಮಾನ ಪಡೆದರು. ಮ್ಯೂಸಿಕಲ್ ಚೇರ್ ಸ್ಪಧೆಯಲ್ಲಿ ಎಮ್ಮೆಗುಂಡಿ ಎಸ್ಟೇಟ್ನ ಜಯಶ್ರೀ ಪ್ರಥಮ, ಹೊಸಳ್ಳಿ ಎಸ್ಟೇಟ್ನ ಗೌರಿ ದ್ವಿತೀಯ ಹಾಗೂ ನಲ್ಲೂರು ಎಸ್ಟೇಟ್ನ ಲಕ್ಷ್ಮಿ ತೃತೀಯ ಬಹುಮಾನ ಪಡೆದರು. ಚೆಂಡು ಎಸೆತದಲ್ಲಿ ಹೊಸಳ್ಳಿ ಎಸ್ಟೇಟ್ನ ಅಮುದ ಪ್ರಥಮ, ಕಾನನಕಾಡು ಎಸ್ಟೇಟ್ನ ಕಾಂಚನ ದ್ವಿತೀಯ, ಗೂರ್ಗ್ಗುಲ್ಲಿ ಎಸ್ಟೇಟ್ನ ಪ್ರೀತಿ ತೃತೀಯ ಬಹುಮಾನ ಪಡೆದರು. ರಿಲೆ ಓಟದಲ್ಲಿ ಕೋವರ್ಕೊಲ್ಲಿ ತಂಡ ಪ್ರಥಮ, ಮಾರ್ಗೊಲ್ಲಿ ತಂಡ ದ್ವಿತೀಯ ಹಾಗೂ ಬಾಳುಮನಿ ತೃತೀಯ ಸ್ಥಾನ ಪಡೆಯಿತು.
ಬಾಲಕರ ವಿಭಾಗ : 100 ಮೀ ಓಟದಲ್ಲಿ ರಾಜ ಪ್ರಥಮ, ಅಭಿಶೇಕ್ ದ್ವಿತೀಯ ಹಾಗೂ ಮಣಿಪ್ರಸಾದ್ ತೃತೀಯ ಸ್ಥಾನ ಪಡೆದರು. 200 ಮೀ ಓಟದಲ್ಲಿ ಸುಶಾಂತ್ ಪ್ರಥಮ, ಶಿವರಾಜ್ ದ್ವಿತೀಯ ಹಾಗೂ ನಂದ ತೃತೀಯ ಸ್ಥಾನ ಪಡೆದರು. ಮೂರು ಕಾಲಿನ ಓಟದಲ್ಲಿ ಹೇಮಂತ್ ಹಾಗೂ ಗಿರೀಶ ಪ್ರಥಮ, ದಿನೇಶ್ ಹಾಗೂ ಸಂತೋಷ್ ದ್ವಿತೀಯ ಹಾಗೂ ರವಿ ಹಾಗೂ ಗಿರೀಶ್ ತೃತೀಯ ಸ್ಥಾನ ಪಡೆದರು.
ಬಾಲಕಿಯರ ವಿಭಾಗ : 50 ಮೀ ಓಟದಲ್ಲಿ ರಂಜಿತಾ ಪ್ರಥಮ, ರಾಣಿ ದ್ವಿತೀಯ ಹಾಗೂ ಹರ್ಷಿತ ತೃತೀಯ ಸ್ಥಾನ ಪಡೆದರು. ಮೂರು ಕಾಲಿನ ಓಟದಲ್ಲಿ ಪ್ರಿಯ ಹಾಗೂ ನಿತ್ಯಾ ಪ್ರಥಮ, ರಾಣಿ ಹಾಗೂ ರಂಜಿತಾ ದ್ವಿತೀಯ ಮತ್ತು ಚೈತ್ರ ಹಾಗೂ ಜಯಂತಿ ತೃತೀಯ ಸ್ಥಾನ ಪಡೆದರು. ಹಿರಿಯ ವ್ಯವಸ್ಥಾಪಕ ಎಂ.ಬಿ ಗಣಪತಿ, ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷೆ ಪ್ರಿಯಾಂಕ ಗಿದ್ವಾನಿ, ಪ್ಲಾಂಟೇಶನ್ ವಿಭಾಗದ ವ್ಯವಸ್ಥಾಪಕ ಕೆ.ಜಿ ರಾಜೀವ್, ಕ್ರೀಡಾ ಸಲಹೆಗಾರ ಸಿ.ಯು ಅಶೋಕ್, ಸ್ಪೋಟ್ರ್ಸ್ ಕ್ಲಬ್ ಉಪಾಧ್ಯಕ್ಷ ವಿಜಯ್ ಕಾರ್ನಾಡ್ ಇದ್ದರು. - ವರದಿ : ಸುದ್ದಿಪುತ್ರ ಕುಶಾಲನಗರ, ಮೇ 4: ಕುಶಾಲನಗರದ ವಕ್ರ್ಸ್ಶಾಪ್ ಮಾಲೀಕರು ಹಾಗೂ ಕಾರ್ಮಿಕರ ಸಂಘದ ವತಿಯಿಂದ 8 ನೇ ವರ್ಷದ ವಾರ್ಷಿಕೋತ್ಸವ ಮತ್ತು ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಸಂಘದ ವತಿಯಿಂದ ಕೂಡಿಗೆಯ ಶ್ರೀಶಕ್ತಿ ವೃದ್ಧಾಶ್ರಮಕ್ಕೆ ಪಾತ್ರೆ ಸಲಕರಣೆಗಳನ್ನು ವಿತರಿಸಲಾಯಿತು. ಪಟ್ಟಣದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮಕ್ಕೆ ಉದ್ಯಮಿ ಎಂ.ಕೆ. ದಿನೇಶ್ ಚಾಲನೆ ನೀಡಿದರು.
ಸಂಘದ ಅಧ್ಯಕ್ಷರಾದ ಎಂ.ಆರ್. ಪೂವಯ್ಯ, ಉಪಾಧ್ಯಕ್ಷ ಎನ್.ಸಿ. ಗಣೇಶ್, ಕಾರ್ಯದರ್ಶಿ ಎಂ.ಡಿ. ರಂಜಿತ್ಕುಮಾರ್, ಖಜಾಂಚಿ ಪಿ. ಶಿವಕುಮಾರ್ ಮತ್ತಿತರರು ಇದ್ದರು. ನಂತರ ಸರ್ವ ಸದಸ್ಯರ ಸಭೆ ನಡೆಯಿತು. ಅಧ್ಯಕ್ಷರಾದ ಎಂ.ಆರ್. ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಥಳೀಯ ಉದ್ಯಮಿಗಳಾದ ವಿ.ಪಿ. ನಾಗೇಶ್, ಸಿ. ಕೃಷ್ಣ, ಗಣಪ ಮತ್ತಿತರರು ಇದ್ದರು. ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಕ್ರೀಡಾಕೂಟಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
ಕುಶಾಲನಗರ ಬೀದಿ ಬದಿ ವ್ಯಾಪಾರಿಗಳ ಸಂಘದ ವತಿಯಿಂದ ಕಾರ್ಮಿಕ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಸಂಘದ ಪದಾಧಿಕಾರಿಗಳು ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಆಂದೋಲನ ಹಮ್ಮಿಕೊಂಡಿದ್ದರು. ಈ ಸಂದರ್ಭ ಸಂಘದ ಅಧ್ಯಕ್ಷ ಕೆ.ಆರ್. ಜಗದೀಶ್, ಗೌರವಾಧ್ಯಕ್ಷ ಕೆ.ಬಿ. ರಾಜು, ಕೆ. ರವಿ, ದಿನೇಶ್, ಸತೀಶ್, ಸೋಮಣ್ಣ, ಸಲಹೆಗಾರರಾದ ಕೆ.ಟಿ. ಶ್ರೀನಿವಾಸ ಮತ್ತಿತರರು ಪಾಲ್ಗೊಂಡಿದ್ದರು. ಕೂಡಿಗೆ, ಮೇ 4: ಕುಶಾಲನಗರ ವರ್ಕ್ಶಾಪ್ ಮಾಲೀಕರ ಮತ್ತು ನೌಕರರ ಸಂಘದ 8ನೇ ವರ್ಷದ ವಾರ್ಷಿಕೋತ್ಸವ ಮತ್ತು ಕಾರ್ಮಿಕರ ದಿನಾಚರಣೆಯ ಅಂಗವಾಗಿ ಕೂಡಿಗೆ ವೃದ್ಧಾಶ್ರಮಕ್ಕೆ ಪಾತ್ರೆಗಳನ್ನು ವಿತರಿಸಲಾಯಿತು. ವೃದ್ಧಾಶ್ರಮದ ವ್ಯವಸ್ಥಾಪಕರಿಗೆ ಸಂಘದ ಅಧ್ಯಕ್ಷ ಎಂ.ಆರ್. ಪೂವಯ್ಯ ಅವರು ಪಾತ್ರೆಗಳನ್ನು ಹಸ್ತಾಂತರಿಸಿ, ವೃದ್ಧಾಶ್ರಮದಲ್ಲಿನ ವೃದ್ಧರಿಗೆ ಬೆಳಗಿನ ಉಪಹಾರವನ್ನು ನೀಡಲಾಯಿತು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಎನ್.ಸಿ. ಗಣೇಶ್, ಕಾರ್ಯದರ್ಶಿ ಎಂ.ಡಿ. ರಂಜಿತ್ ಕುಮಾರ್, ಖಜಾಂಚಿ ಪಿ. ಶಿವಕುಮಾರ್, ಸಹಕಾರ್ಯದರ್ಶಿ ದಿನೇಶ್ರೈ, ಗೌರವಾಧ್ಯಕ್ಷರಾದ ವಿ.ಪಿ. ನಾಗೇಶ್, ಸಿ. ಕೃಷ್ಣ, ಕೆ. ರಾಮದಾಸ್, ಸಿ.ಎನ್. ಮದನ್ ನಿರ್ದೇಶಕರಾದ ಗಣೇಶ್, ಸತೀಶ್ರಾವ್, ವಿ. ಬಾಬಿ, ಕೆ. ರಾಜು, ತೋಮನ್, ಚಂದ್ರಹಾಸ, ವಿನ್ಸೆಂಟ್, ಉಮೇಶ್ ಇದ್ದರು.