ನಾಪೆÇೀಕ್ಲು, ಮೇ. 4: ವಿದ್ಯಾರ್ಥಿಗಳು ತಮ್ಮ ಜೀವನವನ್ನು ಕ್ರೀಡೆಗಾಗಿ ಮೀಸಲಿಟ್ಟು, ಶ್ರಮವಹಿಸಿ ಕಾರ್ಯಪ್ರವೃತ್ತರಾದರೆ ಯಶಸ್ಸು ಸಾಧ್ಯ ಎಂದು ಹಿರಿಯ ಹಾಕಿ ಪಟು ಮಣವಟ್ಟಿರ ಅರ್ಜುನ್ ಕಿವಿಮಾತು ಹೇಳಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕ್ರೀಡಾ ಅಕಾಡೆಮಿ ವತಿಯಿಂದ ಏರ್ಪಡಿಸಲಾಗಿದ್ದ, ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ವಿದ್ಯಾರ್ಥಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ ಇಂದಿನ ಮಕ್ಕಳ ಮನಸ್ಸು ಮೊಬೈಲ್, ಟಿವಿ, ಕಂಪ್ಯೂಟರ್ಗಳತ್ತಲೇ ಹರಿಯುತ್ತಿದ್ದು, ದಿನದ ಒಂದಷ್ಟು ಸಮಯವನ್ನು ಶಿಬಿರದಲ್ಲಿ ತೊಡಗಿಸಿಕೊಳ್ಳುವದರಿಂದ ಆರೋಗ್ಯದಲ್ಲಿ ಸುಧಾರಣೆ ಆಗಲಿದೆ ಎಂದರು.
ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉದಯ ಶಂಕರ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಪ್ರೀತಿ, ವಿಶ್ವಾಸ, ಗೌರವ ಬೆಳೆಸುವ ಕೆಲಸ ಶಿಬಿರಗಳಿಂದ ಆಗುತ್ತಿದೆ ಎಂದರು.
ಪ್ರೌಢಶಾಲೆಯ ಉಪ ಪ್ರಾಂಶುಪಾಲೆ ಬಡ್ಡೀರ ನಳಿನಿ ಚಂಗಪ್ಪ ಮಾತನಾಡಿ ಶಿಬಿರದಲ್ಲಿ ಹಾಕಿ ಮಾತ್ರವಲ್ಲ ಸಾಂಸ್ಕøತಿಕ ಚಟುವಟಿಕೆಗಳಿಗೂ ಮಹತ್ವ ನೀಡುತ್ತಿರುವದು ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕ್ರೀಡಾ ಅಕಾಡೆಮಿಯ ಅಧ್ಯಕ್ಷ ಕಲಿಯಂಡ ಸಾಬು ಅಯ್ಯಣ್ಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿದ್ದಾಟಂಡ ಜೀವನ್, ಕ್ರೀಡಾ ಅಕಾಡೆಮಿ ಉಪಾಧ್ಯಕ್ಷ ಡಾ.ಜಾಲಿ ಬೋಪಯ್ಯ, ಖಜಾಂಚಿ ಕೇಟೋಳಿರ ಕುಟ್ಟಪ್ಪ, ತರಬೇತುದಾರರಾದ ಡಾಲಿ ಅಚ್ಚಪ್ಪ, ಕಸ್ತೂರಿ, ಕವಿತಾ, ನಾಗೇಂದ್ರಪ್ಪ ಉಪಸ್ಥಿತರಿದ್ದರು.
ಶಿಬಿರಾರ್ಥಿ ದುಂದುಬಿ ಪ್ರಾರ್ಥನೆ, ಮನಿಷಾ ಸ್ವಾಗತ, ಭೂಮಿಕಾ ಮುತ್ತಪ್ಪ ವರದಿ ವಾಚಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಶಿಬಿರಾರ್ಥಿಗಳಿಂದ ಬೊಳಕಾಟ್, ಉಮ್ಮತ್ತಾಟ್, ಕರಾಟೆ, ಯೋಗ ಮತ್ತಿತರ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ಅಕಾಡೆಮಿಯ ಆಜೀವ ಸದಸ್ಯರಾಗಿದ್ದ, ದಿವಂಗತ ಬಿದ್ದಾಟಂಡ ಬೆಳ್ಯಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಲಾಯಿತು.