ಮಡಿಕೇರಿ, ಮೇ 4: ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಆರು ಮಂದಿ ಸೇವೆಯಿಂದ ನಿವೃತ್ತಿಯಾಗಿದ್ದು, ಇವರಿಗೆ ಜಿಲ್ಲಾ ಎಸ್.ಪಿ. ಕಚೇರಿಯಲ್ಲಿರುವ ಜಿಲ್ಲಾ ಸ್ಪೆಷಲ್ ಬ್ರಾಂಚ್‍ನ ವತಿಯಿಂದ ಏ. 30 ರಂದು ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಡಿ.ಎಸ್.ಬಿ. ಇನ್ಸ್‍ಪೆಕ್ಟರ್ ಜಯಕುಮಾರ್ ಅವರು ನಿವೃತ್ತರನ್ನು ಗೌರವಿಸಿದರು.