ಸೋಮವಾರಪೇಟೆ, ಏ. 13: ಮೈಸೂರಿನ ಸಂತ ಜೋಸೆಫರ ಕಾಲೇಜಿನಲ್ಲಿ ಬಿಸಿಎ ವಿದ್ಯಾರ್ಥಿ ಯಾಗಿರುವ ಸೋಮವಾರಪೇಟೆಯ ಡಿ.ಆರ್. ನಿಸರ್ಗ ಅವರು ಸ್ಟುಡೆಂಟ್ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪಾಠ ಮತ್ತು ಪಠ್ಯೇತರ ಚಟುವಟಿಕೆಯಲ್ಲೂ ಉತ್ತಮ ಸಾಧನೆ ತೋರಿರುವ ನಿಸರ್ಗ ಅವರಿಗೆ ಕಾಲೇಜು ಪ್ರಾಂಶುಪಾಲೆ ಡಾ. ವಿ. ನಿವೇದಿತ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಈಕೆ ಸೋಮವಾರಪೇಟೆಯ ಡಿ.ಆರ್. ರವಿ ಮತ್ತು ಡಿ.ಆರ್. ರೇಖಾ ದಂಪತಿಯ ಪುತ್ರಿ.