ಮಡಿಕೇರಿ, ಏ. 12: ಕೊಡಗು ಪ್ರೆಸ್ ಕ್ಲಬ್ ಆಡಳಿತ ಮಂಡಳಿ ನೂತನ ನಿರ್ದೇಶಕರಾಗಿ ಎಎನ್‍ಐ ಜಿಲ್ಲಾ ವರದಿಗಾರ ಚೀಯಂಡಿ ತೇಜಸ್ ಪಾಪಯ್ಯ ನೇಮಕಗೊಂಡಿದ್ದಾರೆ. ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ಟಿವಿ9 ವರದಿಗಾರ ಕೆ.ಬಿ. ಮಂಜುನಾಥ ಹಾಸನ ಜಿಲ್ಲೆಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಈ ಆಯ್ಕೆ ಮಾಡಲಾಗಿದೆ.

ಮೇ 27 ರಂದು ಕೊಡಗು ಪ್ರೆಸ್‍ಕ್ಲಬ್ ವಾರ್ಷಿಕ ಮಹಾಸಭೆ ನಡೆಸಲು ತೀರ್ಮಾನಿಸಲಾಗಿದೆ.