ಮಡಿಕೇರಿ, ಏ. 12: ಹೊಸ್ಕೇರಿ ಗ್ರಾಮದ ಶ್ರೀ ವಿಷ್ಣುಮೂರ್ತಿ ಕುಟ್ಟಿಚಾತ ದೇವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ, ಕುಟ್ಟಿಚಾತನ್ ಮತ್ತು ಗುಳಿಗ ದೈವಗಳ ವಾರ್ಷಿಕೋತ್ಸವ ತಾ. 14 ಮತ್ತು 15 ರಂದು ನೆರವೇರಲಿದೆ. ತಾ. 6 ರಂದು ಕಟ್ಟುಬೀಳುವ ದರೊಂದಿಗೆ ದೈವತಾ ಕಾರ್ಯಗಳು ಆರಂಭಗೊಂಡಿದ್ದು, ತಾ. 14 ರಂದು ರಾತ್ರಿ 9 ಗಂಟೆಗೆ ಕಲಶ ಪೂಜೆ, ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ, 9.30 ಕ್ಕೆ ವಿಷ್ಣುಮೂರ್ತಿ ತೋತ, ಕೈಲಾಸನಾಥ ಭೈರವ, ಕಾಟುಮಾಡತಿಲ್ ಕರಿವಾಳ ಭಗವತಿ ಅಡಿಯೇರಿ ಮಡತಿಲ್ ಉಚ್ಚಟಮ್ಮ ನಡೆಯಲಿದೆ.

ತಾ. 15 ರಂದು ಬೆಳಿಗ್ಗೆ 10.30 ಕ್ಕೆ ಪೀಠ ಪೂಜೆ, ಮಹಾಪೂಜೆ, ಕುಟ್ಟಿಚಾತನ್ (ಸಾಸ್ಥಪ್ಪ ತೆರೆ) ವಿಷ್ಣುಮೂರ್ತಿ ತೆರೆ, ಗುಳಿಗ ದೈವದ ತೆರೆ, ಮಧ್ಯಾಹ್ನ ಅನ್ನಸಂತರ್ಪನೆ ಹಾಗೂ ಸಂಜೆ 4 ಗಂಟೆಗೆ ಬಾರಣೆ ನೆರವೇರಲಿದೆ ಎಂದು ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.