ಮಡಿಕೇರಿ, ಏ.12 : ಕುಂಜಿಲ ಗ್ರಾಮದ ವಯಕೋಲ್ ಪುಳಿಂಙÉೂೀಮ್ ವಲಿಯುಲ್ಲಾಹ್ ಅವರ ಹೆಸರಿನಲ್ಲಿ ನಡೆಸಲಾಗುವ ಉರೂಸ್ ಕಾರ್ಯಕ್ರಮ ತಾ.14ಮತ್ತು 15ರಂದು ನಡೆಯಲಿದೆ.
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಉರೂಸ್ ಸಮಿತಿ ಅಧ್ಯಕ್ಷ ವಿ.ಎಂ. ಹಮೀದ್ ಹಾಗೂ ಇತರರು, ಕೇರಳದ ಪುಳಿಂಙÉೂೀಮ್ ಎಂಬಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಪವಾಡ ಪುರುಷರಾದ ವಲಿಯಲ್ಲಾಹ್ ಅವರು ತಮ್ಮ ಜೀವತಾವಧಿಯಲ್ಲಿ ಕೇರಳಕ್ಕೆ ಹೋಗುವ ಮಾರ್ಗ ಮಧ್ಯೆ ವಯಕೋಲ್ ಎಂಬಲ್ಲಿ ಮರವೊಂದರ ಕೆಳಗೆ ವಿಶ್ರಾಂತಿ ಪಡೆದುಕೊಂಡಿದ್ದರು ಎನ್ನುವ ಚರಿತ್ರೆಯಿದ್ದು, ಇದಕ್ಕೆ ಪೂರಕವೆಂಬಂತೆ ಅವರು ವಿಶ್ರಾಂತಿ ಪಡೆದ ಮರದ ಒಂದು ಭಾಗ ಒಣಗಿದ್ದರೂ, ಪುರಾತನ ಕಾಲದಿಂದ ಇಂದಿನವರೆಗೂ ಒಂದು ಭಾಗ ಹಚ್ಚ ಹಸಿರಾಗಿದೆ. ಇದು ಅವರ ಪವಾಡಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಈ ಸ್ಥಳದಲ್ಲಿ ಹಿಂದೂ ಮುಸ್ಲಿಂ ಎಂಬ ಭೇದಭಾವಗಳಿಲ್ಲದೆ ಸರ್ವರೂ ಉರೂಸ್ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದು, ಭಾವೈಕ್ಯತೆಯ ಕೇಂದ್ರವಾಗಿರುವ ಈ ಸ್ಥಳವನ್ನು ಕಲಿಯಂಡ ಅಶೋಕ್ ಎಂಬವರು ದಾನವಾಗಿ ನೀಡುವ ಮೂಲಕ ಭಾವೈಕ್ಯತೆಗೆ ಮೆರುಗು ನೀಡಿದ್ದಾರೆ ಎಂದು ವಿವರಿಸಿದರು.
ವಲಿಯುಲ್ಲಾಹ್ ಅವರ ಹೆಸರಿನಲ್ಲಿ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಉರೂಸ್‍ಗೆ ಏ.14ರಂದು ವಯಕೋಲ್ ಮಸ್ಜಿದುರಹಮಾನ್ ಅಧ್ಯಕ್ಷ ವಿ.ಎಂ. ಹಮೀದ್ ಅವರು ಧ್ವಜಾರೋಹಣ ಮಾಡುವ ಮೂಲಕ ಚಾಲನೆ ದೊರೆಯಲಿದೆ. ಅಂದು ರಾತ್ರಿ ಸಯ್ಯದ್ ಖಾತಿಂ ಸಖಾಫಿ ಅವರ ಪ್ರಾರ್ಥನೆಯೊಂದಿಗೆ ಖ್ಯಾತ ಪ್ರಭಾಷಣಕಾರ ಮುಬಶಿರ್ ಅಹ್‍ಸನಿ ಕಾಮಿಲ್ ಸಖಾಫಿ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವಾರು ಧಾರ್ಮಿಕ ಮತ್ತು ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ ಎಂದರು.
ತಾ.15ರಂದು ಉರೂಸ್ ಅಂಗವಾಗಿ ಸಾರ್ವಜನಿಕ ಸಮ್ಮೇಳನ ನಡೆಯಲಿದ್ದು, ಕೇರಳದ ಖ್ಯಾತ ವಾಗ್ಮಿ ಇಸ್ಮಾಯಿಲ್ ಮಿಸ್ಯಾಯಿ ಚೇರ್‍ಮಾಲ್ ಅವರು ಉಪನ್ಯಾಸ ನೀಡಲಿದ್ದು, ಅಬ್ದುಲ್‍ಸಲಾಂ ಹಲ್‍ರಮ ಅವರು ಪ್ರಾರ್ಥನೆಗೆ ನೇತೃತ್ವ ನೀಡಲಿದ್ದಾರೆ. ಕುಂಜಿಲ ಪೈನರಿ ಜಮಾಅತ್ ಅಧ್ಯಕ್ಷ ಮಹಮದ್ ಹಾಜಿ, ಮಸ್ಜಿದುರಹಮಾನ್ ಅಧ್ಯಾಪಕ ಅಶ್ರಫ್ ಸಖಾಫಿ ವಯಕೋಲ್, ಕೊಡಗು ಜಿಲ್ಲಾ ನಾಯಿಬ್ ಖಾಝಿ ಮಹಮದ್ ಮುಸ್ಲಿಯಾರ್ ಎಡಪಾಲ ಅವರು ಭಾಗವಹಿಸಲಿದ್ದಾರೆ. ಅಂದು ಸಂಜೆ 4 ಗಂಟೆಗೆ ಮೌಲೂದ್ ಪಾರಾಯಣ ಬಳಿಕ ಅನ್ನಸಂತರ್ಪಣೆ ಜರುಗಲಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ವಿ.ಎ.ಶಿಹಾಬುದ್ದೀನ್, ಸಹ ಕಾರ್ಯದರ್ಶಿ ವಿ.ಎ.ನಿಸಾರ್, ಸದಸ್ಯರಾದ ವಿ.ಎ.ಜಕ್ರಿಯಾ, ವಿ.ಎಂ. ರಿಯಾಜ್, ಮಾಜಿ ಕಾರ್ಯದರ್ಶಿ ಸಿರಾಜ್ ವಯಕೋಲ್ ಉಪಸ್ಥಿತರಿದ್ದರು.