ವೀರಾಜಪೇಟೆ, ಏ. 11: ಅಪ್ಪಯ್ಯಸ್ವಾಮಿ ರಸ್ತೆಯಲ್ಲಿರುವ ಅಕ್ಕಡ್ಷಾ ವಲಿಯುಲ್ಲಾ ಮತ್ತು ಮಕ್ಕಡ್ಷಾ ವಲಿಯುಲ್ಲಾರವರ ವಾರ್ಷಿಕ ಉರೂಸ್ ತಾ. 13,14 ಹಾಗೂ 15ರಂದು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ. ತಾ. 13ರಂದು ಸಯ್ಯದ್ ಮುಹಮ್ಮದ್ ಗೌಸ್ ಖಾದ್ರಿಯವರ ಧ್ವಜಾರೋಹಣದೊಂದಿಗೆ 4 ಗಂಟೆಗೆ ಉರೂಸ್ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ.
ರಾತ್ರಿ 7 ಗಂಟೆಗೆ ಸಂದಲ್ ಮೆರವಣಿಗೆ ನಡೆಯಲಿದೆ. ತಾ. 15ರಂದು ಪರ್ವಿಜ್ ತಂಡದ ಖವಾಲಿ ಕಾರ್ಯಕ್ರಮವಿದೆ. ರಾತ್ರಿ 10:30ರ ದುಆ ಮಜ್ಲಿಸ್ನೊಂದಿಗೆ ಉರೂಸ್ ಮುಕ್ತಾಯಗೊಳ್ಳಲಿದೆ.