ಮಡಿಕೇರಿ, ಏ. 10: ಜಿಲ್ಲಾ ಬಾಲಭವನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ 5 ರಿಂದ 16 ವರ್ಷದೊಳಗಿನ ಮಕ್ಕಳಿಗೆ ತಾ. 16 ರಿಂದ 30 ರವರೆಗೆ ಬೇಸಿಗೆ ಶಿಬಿರ “ಕಲಿಕೆಗೊಂದು ವೇದಿಕೆ” ಕಾರ್ಯಕ್ರಮವು ನಗರದ ಕೋಟೆ ಆವರಣದಲ್ಲಿರುವ ಸರಕಾರಿ ಬಾಲಕಿಯರ ಬಾಲಮಂದಿರದಲ್ಲಿ ನಡೆಯಲಿದೆ.
ಶಿಬಿರದಲ್ಲಿ ಸಮೂಹ ನೃತ್ಯ, ಸಮೂಹ ಸಂಗೀತ, ಚಿತ್ರಕಲೆ, ಕುರಕುಶಲ ಹಾಗೂ ಜೇಡಿಮಣ್ಣಿನ ಕಲೆ, ಕಸದಿಂದ ರಸ, ಯೋಗ, ಕರಾಟೆ ಯಂತಹ ಚಟುವಟಿಕೆಗಳಲ್ಲಿ ತರಬೇತಿ ಹಾಗೂ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಶಿಬಿರಕ್ಕೆ ಪ್ರವೇಶ ಉಚಿತವಾಗಿದ್ದು, ಭಾಗವಹಿಸುವ ಎಲ್ಲಾ ಮಕ್ಕಳಿಗೆ ಇಲಾಖೆಯಿಂದ ಪ್ರಮಾಣ ಪತ್ರ ನೀಡಲಾಗುವದು. ಶಿಬಿರಕ್ಕೆ ಕೇವಲ 50 ಮಕ್ಕಳಿಗೆ ಮಾತ್ರ ಅವಕಾಶವಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವದು.
ಶಿಬಿರದಲ್ಲಿ ಭಾಗವಹಿಸಲು ಇಚ್ಚಿಸುವ ಮಕ್ಕಳು ಸರಕಾರಿ ಬಾಲಕಿಯರ ಬಾಲಮಂದಿರ, ಕೋಟೆ ಆವರಣ, ಇಲ್ಲಿ ತಾ. 13 ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಕಾರ್ಯಕ್ರಮ ಸಂಯೋಜಕರು (9611587076), ಕಚೇರಿ ಸಹಾಯಕರು (9535188206) ಅಥವಾ ಬಾಲಕಿಯರ ಬಾಲ ಮಂದಿರ (08272-220126) ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೆಶಕರು ಕೋರಿದ್ದಾರೆ.