ಬೆಂಗಳೂರು, ಏ. 10: ಕರ್ನಾಟಕದ ಶಾಸಕರು ಸರಾಸರಿ 139 ದಿನ ಕಲಾಪಗಳಿಗೆ ಹಾಜರಾಗಿದ್ದಾರೆ ಹೀಗಂತ ವರದಿಯೊಂದು ಹೇಳಿದೆ. 14ನೇ ಕರ್ನಾಟಕ ವಿಧಾನಸಭೆಯಲ್ಲಿ 15 ಅಧಿವೇಶನಗಳು ನಡೆದಿವೆ. ಇದರಲ್ಲಿ ಪ್ರತಿ ವರ್ಷ ಸರಾಸರಿ 44 ದಿನ ಕಲಾಪಗಳು ನಡೆದಿವೆ. ಆರ್.ಟಿ.ಐ. ಮೂಲಕ ಪಡೆದ ಮಾಹಿತಿಗಳನ್ನು ಕ್ರೋಢೀಕರಿಸಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್ರ್ಸ್ ಈ ವರದಿ ಬಿಡುಗಡೆ ಮಾಡಿದೆ. 15ನೇ ಕರ್ನಾಟಕ ವಿಧಾನಸಭೆಯಲ್ಲಿ 2013 ರಿಂದ 2017 ರ ನಡುವೆ ಒಟ್ಟು 216 ದಿನಗಳ ಕಲಾ ಕಲಾಪ ನಡೆದಿದೆ. ಇದರಲ್ಲಿ 2015 ರ ಜೂನ್ 29 ರಿಂದ ನವೆಂಬರ್ 2015ರ ನಡುವೆ ಅತೀ ದೀರ್ಘ ಕಾಲ ಅಂದರೆ 32 ದಿನಗಳ ಕಾಲ ಕಲಾಪ ಪಡೆದಿದೆ. ಅಧಿವೇಶನದಲ್ಲಿ ಒಟ್ಟು 216 ಮಸೂದೆಗಳನ್ನು ಮಂಡಿಸಲಾಗಿದ್ದಾರೆ ಇವುಗಳಲ್ಲಿ 209 ಮಸೂದೆಗಳಿಗೆ ಒಪ್ಪಿಗೆ ಸಿಕ್ಕಿದೆ.
ಅತೀ ಹೆಚ್ಚು ಹಾಜರಾತಿ: ಡಾ. ರಫೀಕ್ ಅಹಮದ್ (ಕಾಂಗ್ರೆಸ್) - ಶೇ. 95 ಹಾಜರಾತಿ (211 ಕಲಾಪಗಳಲ್ಲಿ ಭಾಗಿ), ಕೆ.ಬಿ. ಪ್ರಸನ್ನ ಕುಮಾರ್ (ಕಾಂಗ್ರೆಸ್) - ಶೇ. 95 ಹಾಜರಾತಿ (211 ಕಲಾಪಗಳಲ್ಲಿ ಭಾಗಿ), ಬಿ.ಎಂ. ನಾಗರಾಜ್ (ಕಾಂಗ್ರೆಸ್) - ಶೇ. 95 ಹಾಜರಾತಿ (211 ಕಲಾಪಗಳಲ್ಲಿ ಭಾಗಿ) ಕೇಳಿದ ಪ್ರಶ್ನೆಗಳು ಒಟ್ಟಾರೆ ಶಾಸಕರು 37,110 ಪ್ರಶ್ನೆಗಳನ್ನು ಕೇಳಿದ್ದಾರೆ. ಸರಾಸರಿ 178 ಪ್ರಶ್ನೆಗಳನ್ನು ಶಾಸಕರು ಕೇಳಿದ್ದಾರೆ. ಜೆಡಿಎಸ್ನ ಶಾಸಕ ಗೋಪಾಲಯ್ಯ ಬರೋಬ್ಬರಿ 885 ಪ್ರಶ್ನೆಗಳನ್ನು ಕೇಳಿದ್ದರೆ, ಜೆ.ಡಿ.ಎಸ್ನ ಮತ್ತೋರ್ವ ಶಾಸಕ ಎಂ. ಸಿದ್ದರಾಮಪ್ಪ ಖೂಬಾ 795 ಪ್ರಶ್ನೆಗಳನ್ನು ಕೇಳಿದ್ದಾರೆ. ಇನ್ನು ಶಾಂತಿನಗರ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ 750 ಪ್ರಶ್ನೆಗಳನ್ನು ಕೇಳಿದ್ದಾರೆ.