ಶನಿವಾರಸಂತೆ, ಏ. 10: ಕಾಲೇಜೆಂದರೆ ಬರಿ ಕಟ್ಟಡವಲ್ಲ. ಸಹಪಾಠಿಗಳೊಂದಿಗೆ ಹಾಗೂ ಗುರುಗಳೊಂದಿಗಿನ ಭಾವನಾತ್ಮಕ ಸಂಬಂಧ ಎಂದು ಕಲಾವಿದ ಹಾಗೂ ವ್ಯಕ್ತಿತ್ವ ವಿಕಸದ ತೇರಬೇತುದಾರ ಹೆಚ್.ಪಿ. ರೋಹಿತ್ ನಾಗೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ಭಾರತಿ ವಿದ್ಯಾಸಂಸ್ಥೆ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಎನ್.ಎಸ್.ಎಸ್. ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ತಂದೆ - ತಾಯಿ, ಗುರು-ಹಿರಿಯರ ಬಗ್ಗೆ ಗೌರವ ಭಾವನೆಯಿದ್ದು, ದೃಢತೆ, ಏಕಾಗ್ರತೆ, ಧ್ಯೇಯವಿದ್ದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು. ಕೃಷಿಕ ಎಸ್.ಎಂ. ಮೋಹನ್ ಮಾತನಾಡಿ, ಕತ್ತಲಲ್ಲಿ ಬೆಳಕನ್ನು ಹುಡುಕುವಂತಹ ಸಾಹಸೀ ಮನೋಭಾವ ವಿದ್ಯಾರ್ಥಿಗಳಲ್ಲಿ ಇರಬೇಕು. ಧ್ಯೇಯ, ಛಲ, ಸಾಹಸಗಳಿಂದ ಜಯ ಸಾಧಿಸಬಹುದು ಎಂದರು.

ಅಂತಿಮ ಪದವಿಯ ಹಿರಿಯ ವಿದ್ಯಾರ್ಥಿಗಳು ತಮ್ಮ ಅನುಭವ, ಅನಿಸಿಕೆ ಹಂಚಿಕೊಂಡರು. ಸಾಂಸ್ಕøತಿಕ ಕಾರ್ಯಕ್ರಮ ಪ್ರದರ್ಶಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಸ್.ಎಂ. ಉಮಾಶಂಕರ್ ಮಾತನಾಡಿದರು. ವಿದ್ಯಾಸಂಸ್ಥೆ ನಿರ್ದೇಶಕ ಮಹಮ್ಮದ್ ಪಾಶ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸರ್ದಾರ್ ಅಹಮ್ಮದ್, ಉಪನ್ಯಾಸಕರು ಉಪಸ್ಥಿತರಿದ್ದರು.