ಮಡಿಕೇರಿ, ಏ. 10: ವಿಧಾನಸಭಾ ಚುನಾವಣೆ ಹಿನ್ನೆಲೆ ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೆಕ್ಟರ್ ಅಧಿಕಾರಿಗಳ ವಿವರ ಇಂತಿದೆ. ಶಾಂತಳ್ಳಿ, ಕುಮಾರಳ್ಳಿ, ದೊಡ್ಡ ತೊಳೂರು ವ್ಯಾಪ್ತಿಗೆ ಎಸ್. ಮುಕುಂದ (8277931908), ಚೌಡ್ಲು, ಹಾನಗಲ್ಲು ವ್ಯಾಪ್ತಿಗೆ ಎಸ್. ಲಕ್ಷೀಕಾಂತ್ (9448106216), ತಾಕೇರಿ, ಕಿರಗಂದೂರು ವ್ಯಾಪ್ತಿಗೆ ಡಿ.ಬಿ. ಸುನೀಲ್ ಕುಮಾರ್ (9880597289), ಸೋಮವಾರಪೇಟೆ ಪಟ್ಟಣ ಹಾಗೂ ಗಣಗೂರು ವ್ಯಾಪ್ತಿಗೆ ನಾಚಪ್ಪ (9448844249), ದೊಡ್ಡಮಲ್ತೆ, ಗೌಡಳ್ಳಿ ವ್ಯಾಪ್ತಿಗೆ ನಾಗರಾಜಯ್ಯ (9480695261), ಕೊಡ್ಲಿಪೇಟೆ ವ್ಯಾಪ್ತಿಗೆ ಕೊಟ್ರೇಶ್ (9480726822), ಹಂಡ್ಲಿ ವ್ಯಾಪ್ತಿಗೆ ಎಂ.ಪಿ. ಅಶೋಕ್ (94499598538), ಶನಿವಾರಸಂತೆ, ಮಾಲಂಬಿ, ಆಲೂರು ವ್ಯಾಪ್ತಿಗೆ ಎಂ.ಎನ್. ಹೇಮಂತ್ ಕುಮಾರ್ (9036365942), ಬಾಣವಾರ, ಶಿರಂಗಾಲ, ಹೆಬ್ಬಾಲೆ, ಕಣಿವೆ ವ್ಯಾಪ್ತಿಗೆ ಪದ್ಮನಾಭ (9448539874), ಕೂಡಿಗೆ, ಕೂಡುಮಗಳೂರು ವ್ಯಾಪ್ತಿಗೆ ಧರ್ಮರಾಜು (9448825957), ಮುಳ್ಳುಸೋಗೆ, ಕುಶಾಲನಗರ ಪಟ್ಟಣ ವ್ಯಾಪ್ತಿಗೆ ಎಂ.ಎ. ಶ್ರೀಧರ್ (9448721549), ಮಾದಪಟ್ಟಣ, ಗುಡ್ಡೆ ಹೊಸೂರು, ರಂಗಸಮುದ್ರ ವ್ಯಾಪ್ತಿಗೆ ಹೆಚ್.ಕೆ. ಪಾಂಡು (948069262), ನೆಲ್ಲಿಹುದಿಕೇರಿ, ವಾಲ್ನೂರು ವ್ಯಾಪ್ತಿಗೆ ಕೆ.ಸಿ. ಅಪ್ಪಣ್ಣ (9449699798), ಸೂರ್ಲಬ್ಬಿ, ಮಕ್ಕಂದೂರು ವ್ಯಾಪ್ತಿಗೆ ಹೆಚ್.ಡಿ. ರವಿಕುಮಾರ್ (9242528225), ಸುಂಟಿಕೊಪ್ಪ ಪಟ್ಟಣ, ಮಾದಪುರ ವ್ಯಾಪ್ತಿಗೆ ಎಸ್. ವರದರಾಜು (8747841903), 7ನೇ ಹೊಸಕೋಟೆ, ಕೊಡಗರಹಳ್ಳಿ ವ್ಯಾಪ್ತಿಗೆ ಗಣೇಶ್ (9448325544), ಕಡಗದಾಳು, ಕಟ್ಟೆಮಾಡು ವ್ಯಾಪ್ತಿಗೆ ಜಿ.ಎಸ್. ಗುರುಸ್ವಾಮಿ (9945035589), ಮಡಿಕೇರಿ ಪಟ್ಟಣ ವ್ಯಾಪ್ತಿಗೆ ಸೌಮ್ಯ (9986299925), ಮಡಿಕೇರಿ ಪಟ್ಟಣ ವ್ಯಾಪ್ತಿಗೆ ಎಂ.ಎಸ್. ರೇವಣ್ಣವರ (9448160547), ಗಾಳಿಬೀಡು, ಕಡಮಕಲ್ಲು ವ್ಯಾಪ್ತಿಗೆ ನಾಗ್ರೇಂದ್ರಪ್ಪ (9902499056), ಮೂರ್ನಾಡು, ಹೊದ್ದೂರು ವ್ಯಾಪ್ತಿಗೆ ಮಹದೇವ (9480886941), ಕೆದಕಲ್, ಬೊಯಿಕೇರಿ, ಚೆಟ್ಟಳ್ಳಿ ವ್ಯಾಪ್ತಿಗೆ ಮಾಯದೇವಿ ಗಲಗಲಿ (9480843037).
ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೆಕ್ಟರ್ ಅಧಿಕಾರಿಗಳ ವಿವರ ಇಂತಿದೆ. ಸಂಪಾಜೆ, ಪೆರಾಜೆ, ತಾಳತ್ತ್‍ಮನೆ ವ್ಯಾಪ್ತಿಗೆ ಭಾಸ್ಕರ್ ಆಚಾರ್ (8310882776), ಮೇಕೇರಿ, ಬಿಳಿಗೇರಿ, ಬೆಟ್ಟಗೇರಿ ವ್ಯಾಪ್ತಿಗೆ ಡಾ. ಸುರೇಶ್ (9845906959), ಕಾರುಗುಂದ, ಅಯ್ಯಂಗೇರಿ ವ್ಯಾಪ್ತಿಗೆ ಪುಟ್ಟಸ್ವಾಮಿ (9448529016), ಕರಿಕೆ, ಮುಂಡ್‍ರೂಟ್ ವ್ಯಾಪ್ತಿಗೆ ಗೋಪಾಲಕೃಷ್ಣ (9845152053), ಪಾಲೂರು, ನೆಲಜಿ ವ್ಯಾಪ್ತಿಗೆ ಮಲ್ಲೇಸ್ವಾಮಿ (9480984722), ಕಕ್ಕಬೆ, ಅರಪಟ್ಟು ವ್ಯಾಪ್ತಿಗೆ ಟಿ.ಎನ್.ಜೀವನ್ ಕುಮಾರ್ (9480869100), ವೀರಾಜಪೇಟೆ ಪಟ್ಟಣ, ಪೊದಕೋಟೆ, ಮಗ್ಗುಲ ವ್ಯಾಪ್ತಿಗೆ ಜಿ.ಎ. ಲೋಕೇಶ್, (9480695262), ಕೆಟೋಳಿ ವ್ಯಾಪ್ತಿಗೆ ಎಂ.ಹೆಚ್. ರಾಮಕೃಷ್ಣ (9741919356), ಆರ್ಜಿ, ಬೇಟೋಳಿ, ಮಾಕುಟ್ಟ ವ್ಯಾಪ್ತಿಗೆ ಪಿ.ಎಸ್. ಸುರೇಶ್ (9480837545), ಕೈಕೇರಿ, ಗೋಣಿಕೊಪ್ಪ ಪಟ್ಟಣ, ಆತೂರು ವ್ಯಾಪ್ತಿಗೆ ಎಂ.ಕೆ. ಡೀನಾ (9448049020), ಮಾಯಮುಡಿ, ಬಾಳೆಲೆ ವ್ಯಾಪ್ತಿಗೆ ಹೆಚ್.ಜಿ. ಮಂಜುನಾಥ್ (9481407418), ಬೇಗೂರು, ಹುದಿಕೇರಿ, ಬಿರುನಾಣಿ ವ್ಯಾಪ್ತಿಗೆ ಎಂ. ಅಂಕಯ್ಯ (9449598607), ಕುಟ್ಟ, ನಾಗರಹೊಳೆ ವ್ಯಾಪ್ತಿಗೆ ಬಿ.ವಿ. ಜಯಣ್ಣ (9480869110/9900477195), ಕಾನೂರು, ಕೋತೂರು ವ್ಯಾಪ್ತಿಗೆ ಮಹದೇವ ಸ್ವಾಮಿ (9480835590), ಕುಂದ, ಅರ್ವತ್ತೋಕ್ಲು, ಪೊನ್ನಂಪೇಟೆ ವ್ಯಾಪ್ತಿಗೆ ಗಂಗಾಧರ ಹೆಚ್.ಎಸ್. (9448429510), ತಿತಿಮತಿ, ದೇವರಪುರ ವ್ಯಾಪ್ತಿಗೆ ಪಿ.ಎ. ತೀರ್ಥ (948263336), ಸಿದ್ದಾಪುರ ಪಟ್ಟಣ ವ್ಯಾಪ್ತಿಗೆ ಬಿ. ಸೋಮಶೇಖರ್ (9449598601), ಚೆನ್ನಯ್ಯನಕೋಟೆ, ಪಾಲಿಬೆಟ್ಟ ವ್ಯಾಪ್ತಿಗೆ ಶಿವರಾಜು (8904673536), ದುಬಾರೆ, ಮಾಲ್ದಾರೆ ವ್ಯಾಪ್ತಿಗೆ ಈರಣ್ಣ ಷಣ್ಮುಖಪ್ಪ ಹೊಸಮಣಿ (8861860371).‘ಸುವಿಧ’ ಕೇಂದ್ರ ಆರಂಭ
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018ರ ಸಂಬಂಧ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಪ್ರಚಾರಗಳಿಗೆ ಅನುಮತಿಯನ್ನು ನೀಡುವ ಕಾರ್ಯವನ್ನು ಸುಲಭಗೊಳಿಸಲು ಭಾರತ ಚುನಾವಣಾ ಆಯೋಗವು ‘ಸುವಿಧ’ ಎಂಬ ಹೆಸರಿನ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ತಿಳಿಸಿದ್ದಾರೆ.
ಸಭೆ, ರ್ಯಾಲಿ, ವಾಹನ, ತಾತ್ಕಾಲಿಕ ಕಚೇರಿ, ಧ್ವನಿವರ್ಧಕ ಮತ್ತು ಹೆಲಿಕಾಪ್ಟರ್ ಹಾಗೂ ಹೆಲಿಪ್ಯಾಡ್ ಕುರಿತಾದ ಅನುಮತಿಗಳಿಗೆ ‘ಸುವಿಧ’ ತಂತ್ರಾಂಶದಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಮತ್ತು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಏಕಗವಾಕ್ಷಿ ಸಮಿತಿ ರಚಿಸಲಾಗಿದ್ದು, ಈ ಸಮಿತಿಯು ಅರ್ಜಿಗಳ ವಿಲೇವಾರಿ ಮಾಡಲಿದೆ.
ಸುವಿಧ ಕೇಂದ್ರವನ್ನು ಸಂಬಂಧಪಟ್ಟ ಚುನಾವಣಾಧಿಕಾರಿಯವರ ಕಚೇರಿಯಾದ ಉಪ ವಿಭಾಗಾಧಿಕಾರಿಗಳ ಕಚೇರಿ ಮಡಿಕೇರಿ ಮತ್ತು ತಾಲೂಕು ಕಚೇರಿ ವೀರಾಜಪೇಟೆ ಇಲ್ಲಿ ತೆರೆಯಲಾಗಿದ್ದು, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಪ್ರಚಾರಗಳ ಅನುಮತಿಗಾಗಿ ಚುನಾವಣಾಧಿಕಾರಿಗಳ (ಆರ್‍ಒ) ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018ರ ಸಂಬಂಧ ಸಾರ್ವಜನಿಕರು, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ನೀಡುವ ದೂರುಗಳಿಗಾಗಿ ಭಾರತ ಚುನಾವಣಾ ಆಯೋಗವು ‘ಸಮಾಧಾನ್’ ಎಂಬ ಹೆಸರಿನ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿರುತ್ತದೆ. ಸಾರ್ವಜನಿಕರು, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ತಮ್ಮ ದೂರುಗಳನ್ನು ತಂತ್ರಾಂಶದಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ತಂತ್ರಾಂಶಗಳು ಕೊಡಗು ಜಿಲ್ಲೆಯ ಅಧಿಕೃತ ವೆಬ್‍ಸೈಟ್ hಣಣಠಿ://ಞoಜಚಿgu.ಟಿiಛಿ.iಟಿ/eಟeಛಿಣioಟಿ ರಲ್ಲಿ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೋರಿದರು.
ಹೆಚ್ಚಿನ ಮಾಹಿತಿಗಾಗಿ ಎನ್‍ಐಸಿ ಜಿಲ್ಲಾ ಮಾಹಿತಿ ಅಧಿಕಾರಿ ಅಜಿತ್ (9483978310) ಅಥವಾ ಚುನಾವಣಾ ಕಂಟ್ರೋಲ್ ರೂಂ (08272-224300) ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.