ಮಡಿಕೇರಿ, ಏ. 10: ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು ಕರ್ನಾಟಕ ಅರಣ್ಯ ಕಾಯಿದೆ 1963 ರಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ ತಾ. 22.5.2009 ರಂದು ಅಮಾನತು ಪಡಿಸಿದ್ದ ವಾಹನ ನೋಂದಣಿ ಸಂಖ್ಯೆ ಕೆಎಲ್-07-ಕೆ-36 ಕಾರ್ಗೊ ಮಿನಿ ಲಾರಿ ಹಾಗೂ ಬೀಟೆ ಮರದ 15 ನಾಟ-4.869 ಘ.ಮೀ.ಗಳನ್ನು ಹಾಗೂ ತಾ. 12.06.2014 ರಂದು ಅಮಾನತು ಪಡಿಸಿದ್ದ ವಾಹನ ನೋಂದಣಿ ಸಂಖ್ಯೆ ಕೆಎ-12-3434 ಸ್ವರಾಜ್ ಮಜ್ದಾ ಲಾರಿ ಹಾಗೂ ಬೀಟೆ ಮರದ ವಿವಿಧ ಅಳತೆಯ ಒಟ್ಟು 52 ನಾಟಾ-6.116 ಘ.ಮೀ, ಹಲಸು ಮರದ 11 ನಾಟಾ -1.643 ಘ.ಮೀಗಳನ್ನು ಅಲ್ಲದೆ, 25.08.2016 ರಂದು ಅಮಾನತು ಪಡಿಸಿದ ವಾಹನ ನೋಂದಣಿ ಸಂಖ್ಯೆ ಕೆಎ-12-ಟಿ-4589 ಟ್ರ್ಯಾಕ್ಟರ್ ಹಾಗೂ ಕೆಎ-12-ಟಿ-6974 ಟ್ರೈಲರ್ ವಾಹನ, ಬೀಟೆ ಮರಗಳ 32 ನಾಟ-7.212 ಘ.ಮೀ.ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ಹೊರಡಿಸಿ ದ್ದಾರೆ. ಈ ಆದೇಶವನ್ನು ಹೊರಡಿಸಿದ ದಿನದಿಂದ 30 ದಿನಗಳ ಒಳಗಾಗಿ ಸಂಬಂಧಿಸಿದವರು ಯಾವದೇ ಮೇಲ್ಮನವಿಯನ್ನು ಸಲ್ಲಿಸದೇ ಇದ್ದಲ್ಲಿ ಈ ಎಲ್ಲ ಸ್ವತ್ತನ್ನು ಕಾನೂನು ರೀತಿಯಲ್ಲಿ ವಿಲೇಗೊಳಿಸ ಲಾಗುವದು ಎಂದು ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.