ಗೋಣಿಕೊಪ್ಪಲು, ಏ.10: ರಾಜ್ಯದಲ್ಲಿ ಮುಂದಿನ ಚುನಾವu Éಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ರೈತರ ಪಕ್ಷದತ್ತ ಯುವಕರು ಮುಖ ಮಾಡಿದ್ದಾರೆ.ಇದಕ್ಕೆ ಸಾಕ್ಷಿ ಎಂಬಂತೆ ದ.ಕೊಡಗಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪಕ್ಷದತ್ತ ಆಕರ್ಷಿತ ರಾಗುತ್ತಿರುವದು ಉದಾಹರಣೆ ಎಂದು ಜೆಡಿಎಸ್ನ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅಭಿಪ್ರಾಯ ಪಟ್ಟರು.
ಟಿ.ಶೆಟ್ಟಿಗೇರಿಯ ವಿ.ಎಸ್.ಎಸ್. ಎನ್. ಸಭಾಂಗಣದಲ್ಲಿ ಆಯೋಜನೆ ಗೊಂಡಿದ್ದ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಂಕೇತ್ ಪೂವಯ್ಯ ಈಗಾಗಲೇ ವೀರಾಜಪೇಟೆ ವಿಧಾನ ಸಭಾಕ್ಷೇತ್ರದ 262 ಬೂತ್ಗಳಲ್ಲಿ ಕಾರ್ಯಕರ್ತರ, ಮುಖಂಡರ ಸಭೆಗಳು,ಬಹಿರಂಗ ಸಭೆಗಳು, ಸಮಾವೇಶಗಳು ನಡೆದಿವೆ.ಪಕ್ಷಕ್ಕೆ ಉತ್ತಮ ಭವಿಷ್ಯ ಇರುವದನ್ನು ಮನಗಂಡ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷ ಸೇರ್ಪಡೆ ಗೊಳ್ಳುತ್ತಿರುವದು ಪಕ್ಷಕ್ಕೆ ಶಕ್ತಿ ತುಂಬಿದಂತಾಗಿದೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಎಸ್.ಎಚ್.ಮತೀನ್, ಜಾತ್ಯಾತೀತ ಜನತಾ ದಳ ಪಕ್ಷದಲ್ಲಿ ಯುವಕರಿಗೆ ಮುಂದಿನ ಸರ್ಕಾರದಲ್ಲಿ ಉದ್ಯೋಗ ಅವಕಾಶ ಲಭ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಟಿ.ಶೆಟ್ಟಿಗೇರಿ ಸ್ಥಾನೀಯ ಸಮಿತಿ ಅಧ್ಯಕ್ಷ ಉಳುವಂಗಡ ದತ್ತ,ರೈತ ಸಂಘದ ಮುಖಂಡರಾದ ಮಚ್ಚಮಾಡ ರಂಜಿ,ಯುವ ಜೆಡಿಎಸ್ನ ಅಧ್ಯಕ್ಷ ಅಮ್ಮಂಡ ವಿವೇಕ್,ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಪರಮಾಲೆ ಗಣೇಶ್,ಉಪಾಧ್ಯಕ್ಷ ರೆನ್ನಿ,ಬಿರುನಾಣಿ ಯುವ ಘಟಕದ ಅಧ್ಯಕ್ಷರಾದ ಚೋನಿರ ಸಜನ್ ಉತ್ತಪ್ಪ, ಹರಿಹರ ವಲಯದ ಪಿ.ಎಸ್.ವಿಘ್ನೇಶ್ ಕುಟ್ಟ ವಲಯದ ಕರಣ್ ಕೋಗಿಲೆ, ಎ.ಎಂ.ಶಫಿರ್, ಎಂ.ಸಿ.ಅರುಣ್,ಸಲಿತ ಮುಖಂಡರಾದ ರಾಮು. ಹೆಚ್.ಎಂ.ಚಂದ್ರ, ಹೆಚ್.ಆರ್,ರವಿ, ಹೆಚ್.ಎಂ.ನಂಜಪ್ಪ, ಮುಂತಾದವರು ಹಾಜರಿದ್ದರು.