ಸುಂಟಿಕೊಪ್ಪ, ಏ. 11: ಚುನಾವಣಾ ಆಯೋಗದ ತಾಲೂಕು ಸ್ವೀಪ್ ಕಾರ್ಯಕ್ರಮದ ಸಂಯೋಜಕ ಡಿ.ಡಿ. ಪೆಮ್ಮಯ್ಯ ಅಪ್ಪಾರಂಡ ಬಡಾವಣೆಯಲ್ಲಿ ಮತದಾರರ ಗುರುತಿನ ಚೀಟಿಗೆ ಹೆಸರು ನೋಂದಾವಣೆ ಹಾಗೂ ಪ್ರತಿಯೊಬ್ಬ ಮತದಾರರು ಕಡ್ಡಾಯ ಮತದಾನ ಮಾಡುವಂತೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಮತದಾನ ಹಕ್ಕು ಪಡೆದ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕೆಂದರು. ಯಾವದೇ ವ್ಯಕ್ತಿಯು ಇಂದಿನವರೆಗೂ ಮತದಾನದಲ್ಲಿ ಪಾಲ್ಗೊಳ್ಳದೆ ಹೊರಗುಳಿದಿದ್ದರೂ ಈಗ ತಮ್ಮ ಅಧಿಕೃತ ದಾಖಲಾತಿಗಳನ್ನು ಒದಗಿಸಿ ಮತದಾನದಲ್ಲಿ ಪಾಲ್ಗೊಳ್ಳಲು ಚುನಾವಣಾ ಆಯೋಗ ಕಾಲಾವಕಾಶ ನೀಡಿದೆ ಎಂದರು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಪಿಡಿಓ ಮೇದಪ್ಪ, ಪಂಚಾಯಿತಿ ಕಾರ್ಯದರ್ಶಿ ನಿತ್ಯ, ಸಿಬ್ಬಂದಿಗಳಾದ ಶ್ರೀನಿವಾಸ್, ಪುನೀತ್ ಕುಮಾರ್ ಮತ್ತಿತರರು ಇದ್ದರು.