ಸೋಮವಾರಪೇಟೆ,ಏ.10: ಇಲ್ಲಿಗೆ ಸಮೀಪದ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎನ್‍ಎಸ್‍ಎಸ್ ಘಟಕ ಹಾಗೂ ಆಂತರಿಕ ಗುಣಮಟ್ಟ ಖಾತ್ರಿ ಕೋಶದ ವತಿಯಿಂದ ಕಾಲೇಜಿನ ದತ್ತು ಗ್ರಾಮವಾದ ಕಲ್ಕಂದೂರಿನಲ್ಲಿ ಗ್ರಾಮಸ್ಥರಿಗೆ ನಗದು ರಹಿತ ವಹಿವಾಟು ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.

ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಶ್ರೀಧರ್ ಅವರು, ನಗದು ರಹಿತ ವಹಿವಾಟಿನಿಂದ ಜನರಿಗೆ ಹೆಚ್ಚಿನ ಅನುಕೂಲವಾಗುತ್ತಿದ್ದು, ಎಲ್ಲರೂ ಇದರತ್ತ ಗಮನ ಹರಿಸಬೇಕೆಂದರು. ಎನ್‍ಎಸ್‍ಎಸ್ ಘಟಕದ ಸಂಯೋಜಕರಾದ ಪ್ರೊ. ಪ್ರವೀಣ್ ಪಿಓಎಸ್ ಉಪಕರಣದ ಪ್ರಾತ್ಯಕ್ಷಿತೆ ನೀಡಿದರು. ಆಂತರಿಕ ಗುಣಮಟ್ಟ ಖಾತ್ರಿ ಕೋಶದ ಸಂಚಾಲಕ ಪ್ರೊ. ಕಮಲಾಕ್ಷ ಬಲ್ಯಾಯ ಗ್ರಾಮಸ್ಥರೊಂದಿಗೆ ನಗದುರಹಿತ ವಹಿವಾಟಿನ ಬಗ್ಗೆ ಸಂವಾದ ನಡೆಸಿದರು.

ಈ ಸಂದರ್ಭ ಹಾನಗಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ವೆಂಕಟೇಶ್ ಹಾಗೂ ಸದಸ್ಯರು, ಅಭಿವೃದ್ದಿ ಅಧಿಕಾರಿ ರವೀಶ್, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.