ವರದಿ-ಸಿಂಚುಕುಶಾಲನಗರ, ಏ. 11: ಜೀವನದಿ ಕಾವೇರಿಯನ್ನು ಕಸಮುಕ್ತ ನದಿಯನ್ನಾಗಿ ಪರಿವರ್ತಿಸುವದ ರೊಂದಿಗೆ ಕಾವೇರಿ ಉಳಿವಿಗಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಯುವ ಬ್ರಿಗೇಡ್ ಮುಖ್ಯಸ್ಥರಾದ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದ್ದಾರೆ. ಅವರು ಬಲಮುರಿ ಕಾವೇರಿ ಕ್ಷೇತ್ರದಲ್ಲಿ ಸಾಂಕೇತಿಕ ಸ್ವಚ್ಛತೆಗೆ ಚಾಲನೆ ನೀಡಿದ ನಂತರ ಮಾತನಾಡಿದರು.ಮೂಲ ಕಾವೇರಿ ಹೆಚ್ಚಿನ ಪ್ರಮಾಣದಲ್ಲಿ ಕಲುಷಿತಗೊಳ್ಳುತ್ತಿರು ವದು ಆತಂಕಕಾರಿ ಬೆಳವಣಿಗೆ ಯಾಗಿದ್ದು ಪ್ರಕೃತಿಯನ್ನು ಆರಾಧಿಸುವದರೊಂದಿಗೆ ನದಿ ತಟಗಳ ಸಂರಕ್ಷಣೆಯಾಗಬೇಕಾಗಿದೆ ಎಂದರು.(ಮೊದಲ ಪುಟದಿಂದ) ದಕ್ಷಿಣ ಭಾರತದ ರಾಜ್ಯಗಳು ಜೀವನದಿ ಕಾವೇರಿಯನ್ನು ಅವಲಂಬಿಸಿದ್ದು ಮುಂದಿನ ದಿನಗಳಲ್ಲಿ ಆತಂಕಕಾರಿ ಬೆಳವಣಿಗೆಗಳು ಸೃಷ್ಟಿಯಾಗುವ ಸಾಧ್ಯತೆಗಳು ಅಧಿಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಳಿಗ್ಗೆ ತಲಕಾವೇರಿ ಮತ್ತು ಭಗಂಡೇಶ್ವರ ಕ್ಷೇತ್ರಗಳಲ್ಲಿ ಸಂಕಲ್ಪದೊಂದಿಗೆ ವಿಶೇಷ ಪೂಜೆ ನೆರವೇರಿಸಿ ನಂತರ ಬಲಮುರಿ ಸೇತುವೆ ಕೆಳಭಾಗದ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ ಕೈಗೊಳ್ಳಲಾಯಿತು. ಭಾರೀ ಪ್ರಮಾಣದ ತ್ಯಾಜ್ಯಗಳು ನದಿಯಲ್ಲಿ ಕಂಡುಬಂದಿದ್ದು ಇದನ್ನು ನದಿಯಿಂದ ತೆರವುಗೊಳಿಸಿ ಯುವ ಬ್ರಿಗೇಡ್, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವಿವಿಧ ಸಂಘಟನೆಗಳ ಸಹಯೋಗ ದೊಂದಿಗೆ ಸಂಜೆ ತನಕ ಸ್ವಚ್ಚತಾ ಕಾರ್ಯ ಮುಂದುವರೆಯಿತು.

ಸಿಮೆಂಟ್ ಚೀಲಗಳು, ಪ್ರಾಣಿಗಳ ತ್ಯಾಜ್ಯಗಳು, ಬಾಟಲಿಗಳು, ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳು ಯಥೇಚ್ಚವಾಗಿ ನದಿ ಒಡಲು ಸೇರಿದ್ದು ಮುಂದಿನ ದಿನಗಳಲ್ಲಿ ನದಿಯನ್ನು ಸ್ವಚ್ಛವಾಗಿಡುವ ಕಾರ್ಯ ಸ್ಥಳೀಯರದ್ದಾಗಿದೆ ಎಂದು ಸಂಘಟನೆಗಳ ಪ್ರಮುಖರು ತಿಳಿಸಿದರು.

ನದೀ ತಟದ ಜನತೆಗೆ ಜೀವನದಿಯ ಸಂರಕ್ಷಣೆ ಹಾಗೂ ಜಲಮೂಲಗಳ ರಕ್ಷಣೆ ಬಗ್ಗೆ ಕರಪತ್ರಗಳನ್ನು ವಿತರಿಸುವ ಮೂಲಕ ಸ್ವಚ್ಚ ಕಾವೇರಿ ನಿರ್ಮಾಣಕ್ಕೆ ಮುಂದಾಗುವಂತೆ ಜಾಗೃತಿ ಮೂಡಿಸಿದರು. ಯುವ ಬ್ರಿಗೇಡ್‍ನ, ಮೈಸೂರು ಪ್ರಾಂತ್ಯ ಸಂಚಾಲಕರಾದ ಚಂದ್ರು ಸೇರಿದಂತೆ 20 ಕ್ಕೂ ಅಧಿಕ ಕಾರ್ಯಕರ್ತರು ರಾಜ್ಯದ ವಿವಿಧಡೆ ಗಳಿಂದ ಆಗಮಿಸಿದ್ದು ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಮಧ್ಯಾಹ್ನ ವೇಳೆ ಬಲಮುರಿ ವ್ಯಾಪ್ತಿಯಲ್ಲಿ ಅಲ್ಪಸ್ವಲ್ಪ ಮಳೆಯಾಗುವ ದರೊಂದಿಗೆ ಸ್ವಚ್ಛತಾ ಕಾರ್ಯ ಕರ್ತರಿಗೆ ಹುಮ್ಮಸ್ಸು ಮೂಡಿಸು ವಂತಿತ್ತು. ನದಿಯಲ್ಲಿ ತ್ಯಾಜ್ಯ ತೆರವು ಮಾಡುವ ಸಂದರ್ಭ ಪುರಾತನ ಕಾಲದ ಶಿಲೆಯೊಂದು ದೊರಕಿದ್ದು ಅದನ್ನು ಸಂರಕ್ಷಿಸಿ ಮಡಿಕೇರಿ ಪುರಾತತ್ವ ಇಲಾಖೆಗೆ ಹಸ್ತಾಂತರಿಸಲು ಕಾರ್ಯಕರ್ತರು ನಿರ್ಧರಿಸಿದರು.

ಈ ಸಂದರ್ಭ ಪತ್ರಕರ್ತರ ಸಂಘದ ಅಧ್ಯಕ್ಷÀ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಎಂ.ಎನ್. ಚಂದ್ರಮೋಹನ್, ಡಿ.ಆರ್. ಸೋಮಶೇಖರ್, ಗ್ರೀನ್ ಸಿಟಿ ಫೋರಂ ಪ್ರಮುಖರಾದ ಚೆಯ್ಯಂಡ ಸತ್ಯ, ಮೋಂತಿ ಗಣೇಶ್, ಗೋ ಗ್ರೀನ್ ಮೂರ್ನಾಡು ಸಂಸ್ಥೆಯ ಪ್ರಮುಖರಾದ ಬಡುವಂಡ ಅರುಣ್ ಅಪ್ಪಚ್ಚು, ಬಲಮುರಿಯ ಅಗಸ್ತ್ಯೇಶ್ವರ ದೇವಾಲಯ ಸೇವಾ ಸಮಿತಿ ಅಧ್ಯಕ್ಷರಾದ ಕೊಂಗೀರಂಡ ಸಾಧು ತಿಮ್ಮಯ್ಯ, ಬಿದ್ದಂಡ ಜಗದೀಶ್, ಕುಂದನ ಪ್ರಭಾನಂದ, ಆಂಗಿರ ಸಂತೋಷ್, ತೊತ್ತಿಯಂಡ ಕುಟ್ಟಯ್ಯ, ಜಿಪಂ ಸದಸ್ಯೆ ಉಷಾ ದೇವಯ್ಯ, ಪತ್ರಕರ್ತರ ಸಂಘದ ಸದಸ್ಯರು, ಸ್ಥಳೀಯ ಪ್ರಮುಖರು ಇದ್ದರು.