ಮಡಿಕೇರಿ, ಏ. 10: ಮಕ್ಕಳು ಶಿಸ್ತು, ಏಕಾಗ್ರತೆಯನ್ನು ಮೈಗೂಡಿಸಿ ಕೊಂಡು ಜೀವನದಲ್ಲಿ ಸಾಧಕರಾಗ ಬೇಕೆಂದು ಶಕ್ತಿ ಪತ್ರಿಕೆ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಕರೆ ನೀಡಿದರು.ವಾಂಡರರ್ಸ್ ಕ್ಲಬ್ ಹಾಗೂ ಮ್ಯಾನ್ಸ್ ಹಾಕಿ ಅಕಾಡೆಮಿ ವತಿಯಿಂದ ದಿ. ಸಿ.ವಿ. ಶಂಕರ್ ಸ್ಮರಣಾರ್ಥ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬೇಸಿಗೆ ಹಾಕಿ ತರಬೇತಿ ಶಿಬಿರಕ್ಕೆ ಆಗಮಿಸಿ ಮಕ್ಕಳಿಗೆ ಹಿತವಚನ ನೀಡಿದರು. ಕ್ರೀಡೆ ಸೇರಿದಂತೆ ಯಾವದೇ ಕ್ಷೇತ್ರದಲ್ಲೂ ಸಾಧನೆ ಮಾಡಿದರೆ, ಅದು ವೈಯಕ್ತಿಕವಾಗಿ ಮಾತ್ರವಲ್ಲದೆ, ಊರು, ಜಿಲ್ಲೆ, ರಾಜ್ಯ, ರಾಷ್ಟ್ರಕ್ಕೂ ಕೀರ್ತಿ ತಂದುಕೊಡುತ್ತದೆ. ಏನೇ ಸಾಧನೆ ಮಾಡಬೇಕಿದ್ದರೂ ಏಕಾಗ್ರತೆ ಅತಿ ಮುಖ್ಯ, ಜೊತೆಗೆ ಧ್ಯಾನ ಕೂಡ ಮಾಡಬೇಕೆಂದು ಉದಾಹರಣೆ ಗಳ ಸಹಿತ ವಿವರಣೆ ನೀಡಿದರು. ಈ ಸಂದರ್ಭದಲ್ಲಿ ವಾಂಡರರ್ಸ್ ಕ್ಲಬ್‍ನ ಬಾಬು ಸೋಮಯ್ಯ, ಯೋಗ ಶಿಕ್ಷಕ ವೆಂಕಟೇಶ್, ತರಬೇತುದಾರರಾದ ಶ್ಯಾಂ, ಲಕ್ಷ್ಮಣ್‍ಸಿಂಗ್, ಅಪ್ಪಯ್ಯ, ಮುದ್ದಯ್ಯ, ಬಿ.ಸಿ. ತಿಲಕ್ ಇದ್ದರು.