ಮಡಿಕೇರಿ, ಏ. 9: ಮಹಿಳೆಯರಲ್ಲಿ ಫುಟ್ಬಾಲ್ ಕ್ರೀಡೆ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ಕೂರ್ಗ್ ವುಮೆನ್ಸ್ ಸಾಕರ್ ಕ್ಲಬ್ ವತಿಯಿಂದ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಸಹಯೋಗ ದೊಂದಿಗೆ ಮರಗೋಡುವಿನ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಏರ್ಪಡಿಸಿರುವ ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಫ್ರೆಂಡ್ಸ್ ಕ್ಲಬ್ ಸುಂಟಿಕೊಪ್ಪ, ಗೌಡಳ್ಳಿಯ ಗೋಲ್ಡನ್ ಗ್ರೇಸ್, ಗೌಡ ಫುಟ್ಬಾಲ್ ಅಕಾಡೆಮಿ ಹಾಗೂ ಸಿವೈಸಿ ಒಂಟಿಯಂಗಡಿ ತಂಡಗಳು ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದಿವೆ.ಇಂದು ನಡೆದ ಪಂದ್ಯಾವಳಿಯಲ್ಲಿ ಫ್ರೆಂಡ್ಸ್ ಕ್ಲಬ್ ಸುಂಟಿಕೊಪ್ಪ ತಂಡ ಗ್ರೀನ್ಸ್ ಕಟ್ಟೆಮಾಡು ತಂಡವನ್ನು 6-2 ಗೋಲುಗಳಿಂದ ಸೋಲಿಸಿದರೆ, ದೇಶಪ್ರೇಮಿ ಕುಶಾಲನಗರ ತಂಡವನ್ನು ಗೌಡಳ್ಳಿಯ ಗೋಲ್ಡನ್ ಗ್ರೇಸ್ (ಎ) ತಂಡ 1-7 (ಮೊದಲ ಪುಟದಿಂದ) ಗೋಲುಗಳ ಅಂತರದಿಂದ ಸೋಲಿಸಿತು. ಸಿವೈಸಿ ಒಂಟಿಯಂಗಡಿ ತಂಡವು ಗೋಲ್ಡನ್ ಗ್ರೇಸ್ (ಬಿ) ತಂಡವನ್ನು 7-3 ಗೋಲುಗಳ ಅಂತರದಿಂದ ಮಣಿಸಿದರೆ, ಗೌಡ ಫುಟ್ಬಾಲ್ ಅಕಾಡೆಮಿ ತಂಡ ಎಂಸಿಸಿ ಮಡಿಕೇರಿ ತಂಡವನ್ನು 5-3 ಗೋಲುಗಳಿಂದ ಸೋಲಿಸಿತು.ನಂತರ ನಡೆದ ಕ್ವಾರ್ಟರ್ ಫೈನಲ್ ಪಂದ್ಯಾವಳಿಯಲ್ಲಿ ಫ್ರೆಂಡ್ಸ್ ಕ್ಲಬ್ ಸುಂಟಿಕೊಪ್ಪ ತಂಡ ಕೆಕೆಎಫ್‍ಸಿ ತಂಡವನ್ನು 5-1 ಗೋಲುಗಳ ಅಂತರದಿಂದ ಮಣಿಸಿದರೆ, ಸಿವೈಸಿ ಒಂಟಿಯಂಗಡಿ ತಂಡ ಸುಂಟಿಕೊಪ್ಪ ಬ್ಲೂಬಾಯ್ಸ್ ತಂಡವನ್ನು 6-0 ಗೋಲುಗಳ ಅಂತರದಿಂದ ಸೋಲಿಸಿತು. ತಾ. 10 ರಂದು (ಇಂದು) ಬೆಳಿಗ್ಗೆ ಸೆಮಿಫೈನಲ್ ಪಂದ್ಯಾವಳಿಗಳು ನಡೆಯಲಿದ್ದು, ಮಧ್ಯಾಹ್ನ 1 ಗಂಟೆಗೆ ಕೊಡಗು ಜಿಲ್ಲಾ ಮಹಿಳೆಯರ ತಂಡಗಳ ನಡುವೆ ಪ್ರದರ್ಶನ ಪಂದ್ಯಾಟ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಅಂತಿಮ ಪಂದ್ಯಾವಳಿ ನಡೆಯಲಿದೆ.
ಉದ್ಘಾಟನೆ: ಇಂದು ನಡೆದ ಕಾರ್ಯಕ್ರಮವನ್ನು ರಾಜ್ಯ ರೋಲರ್ ಸ್ಕೇಟಿಂಗ್ ತರಬೇತುದಾರ ಕುಂಬಗೌಡನ ಜಗದೀಪ್ ಉದ್ಘಾಟಿಸಿದರು. ಸಾಕರ್ ಫುಟ್ಬಾಲ್ ಕ್ಲಬ್‍ನ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಬಡುವಂಡ್ರ ಕವಿತಾ ಬೆಳ್ಯಪ್ಪ, ಶಾಲಾ ಮುಖ್ಯ ಶಿಕ್ಷಕಿ ಕೆದಂಬಾಡಿ ಚಂದ್ರಕಲಾ, ಬೆಳೆಗಾರ ಪಾಂಡನ ಲೋಕನಾಥ್, ಕ್ಲಬ್ ಸದಸ್ಯೆ ಸೋನಿಯಾ ಶರತ್ ಇನ್ನಿತರರು ಪಾಲ್ಗೊಂಡಿದ್ದರು.
ಸಮಾರೋಪ: ಸಮಾರೋಪ ಸಮಾರಂಭ ತಾ. 10 ರಂದು (ಇಂದು) ಸಂಜೆ 4 ಗಂಟೆಗೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಅತಿಥಿಗಳಾಗಿ ಮರಗೋಡು ಗ್ರಾ.ಪಂ. ಅಧ್ಯಕ್ಷ ಬಿದ್ರುಪಣೆ ಮೋಹನ್, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ವಿಜು ಸುಬ್ರಮಣಿ, ಎಪಿಎಂಸಿ ಅಧ್ಯಕ್ಷ ಕಾಂಗೀರ ಸತೀಶ್, ತಾ.ಪಂ. ಸದಸ್ಯ ಅಜಿತ್ ಕರುಂಬಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ಫುಟ್ಬಾಲ್ ಸಂಸ್ಥೆ ಅಧ್ಯಕ್ಷ ಮೋಹನ್ ಅಯ್ಯಪ್ಪ, ಅಮ್ಮತ್ತಿ ಅಯ್ಯಪ್ಪ ದೇವಾಲಯ ಸಮಿತಿ ಟ್ರಸ್ಟಿ, ಬಿ.ಎ. ಗುರುರಾಜ್, ಉದ್ಯಮಿ ಶಾಂತರಾಂ ಉಪಸ್ಥಿತರಿದ್ದರು.