ಮಡಿಕೇರಿ, ಏ. 9: ನಗರದ ಕೋಟೆ ಆವರಣದೊಳಗೆ ನ್ಯಾಯಾಲಯ ಬಳಿ ನಿಲ್ಲಿಸಿದ್ದ ಕಾರೊಂದಕ್ಕೆ (ಕೆಎಲ್-14-ಇ-1179) ಪಕ್ಕದಲ್ಲಿರುವ ಅತ್ತಿಮರದ ಬೃಹತ್‍ಕೊಂಬೆಯೊಂದು ಮುರಿದು ಬಿದ್ದಿದೆ. ಪರಿಣಾಮ ಕಾರಿನ ಹಿಂಭಾಗ ತೀವ್ರ ಜಖಂಗೊಂಡಿದೆ. ಈ ಬಗ್ಗೆ ನ್ಯಾಯಾಲಯ ಹಾಗೂ ಕೋಟೆಯಲ್ಲಿರುವ ಕಚೇರಿಗಳಿಗೆ ಆಗಮಿಸಿದ ಸಾರ್ವಜನಿಕರು ಈ ದೃಶ್ಯವನ್ನು ಕುತೂಹಲದಿಂದ ನೋಡುತ್ತಿದ್ದರು. ಕಾರಿನೊಳಗೆ ಘಟನೆ ಸಂದರ್ಭ ಯಾರೊಬ್ಬರೂ ಇಲ್ಲದ್ದರಿಂದ ಹೆಚ್ಚಿನ ಪ್ರಾಣಾಪಾಯ ಸಂಭವಿಸಿಲ್ಲ.