*ಸಿದ್ದಾಪುರ, ಏ. 9: ಮತದಾನದ ಬಗ್ಗೆ ಅರಿವು ಮೂಡಿಸುವದರೊಂದಿಗೆ, ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳು ವಂತಾಗಲು, ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವವರು ಹೆಸರು ನೋಂದಾಯಿಸಿಕೊಳ್ಳಲು ಮಿಂಚಿನ ಮತದಾನ ಎಂಬ ಅಭಿಯಾನ ಏರ್ಪಡಿಸಿತ್ತು. ಎಲ್ಲಾ ಬೂತ್ ಮಟ್ಟದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಉತ್ತಮ ಸ್ಪಂದನ ದೊರೆತಿದೆ. ಈ ಅಭಿಯಾನದಲ್ಲಿ ಚುನಾವಣಾ ಅಧಿಕಾರಿಗಳು, ಬೂತ್ ಮಟ್ಟದ ಅಧಿಕಾರಿಗಳು ಹಾಜರಿದ್ದು, ಮತದಾರರ ಹೆಸರು ನೋಂದಾಯಿಸಿಕೊಳ್ಳುತ್ತಾರೆ.

ಸಾರ್ವಜನಿಕರು ಯಾರ ದಾದರೂ ಹೆಸರು ಬಿಟ್ಟು ಹೋಗಿದ್ದರೆ, ಅಂತಹವರನ್ನು ಕರೆ ತಂದು ನೋಂದಣಿ ಮಾಡಿಸಬ ಹುದಾಗಿದೆ. ಆದರೆ ಚೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೂಡ್ಲೂರು ಚೆಟ್ಟಳ್ಳಿ ಅಂಗನವಾಡಿ ಕೇಂದ್ರದಲ್ಲಿ ತೆರೆಯಲಾಗಿದ್ದ ಕೇಂದ್ರದಲ್ಲಿ ರಾಜಕೀಯ ಪಕ್ಷದ ಜನ ಪ್ರತಿನಿಧಿ ಯೋರ್ವರ ಅಣತಿಯಂತೆ ಕಾರ್ಯಕರ್ತನೋರ್ವ ಕುಳಿತು ಕೊಂಡು ತಮಗೆ ಬೇಕಾದವರ ಹೆಸರು ಗಳನ್ನು ಮಾತ್ರ ಸೇರ್ಪಡೆಗೊಳಿಸುತ್ತಿದ್ದ ಪ್ರಸಂಗ ಕಂಡು ಬಂದಿದ್ದು, ಇದಕ್ಕೆ ಗ್ರಾಮಸ್ಥರು ಪ್ರತಿರೋಧ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.

ಗ್ರಾಮದ ನಿವಾಸಿ, ಮಣಿಕಂಠ ಎಂಬಾತ ಬೂತ್ ಮಟ್ಟದ ಅಧಿಕಾರಿ ಬಳಿಯಲ್ಲೇ ಕುಳಿತುಕೊಂಡು ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ ಅಧಿಕಾರಿ ಶಾರದ ಅವರು ‘ನೀವು ಹೇಳಿದಂತೆ ಮಾಡಲು ಸಾಧ್ಯವಿಲ್ಲ, ಕೇಂದ್ರದಿಂದ ಹೊರ ಹೋಗುವಂತೆ’ ಸೂಚನೆ ನೀಡಿದ್ದಾರೆ ಆದರೂ ಈತ ತೆರಳದ್ದರಿಂದ ಗ್ರಾಮಸ್ಥರು ಹಾಗೂ ಈತನ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭ ಆತ ‘ತನ್ನನ್ನು ಜಿ.ಪಂ. ಸದಸ್ಯೆ ಸುನಿತಾ ಅವರು ಇಲ್ಲಿ ಕುಳಿತುಕೊಳ್ಳಲು ಹೇಳಿದ್ದು, ತಾನು ತೆರಳುವದಿಲ್ಲ’ ಎಂದು ಪಟ್ಟು ಹಿಡಿದಿದ್ದಾನೆ. ಈ ಬಗ್ಗೆ ಗ್ರಾಮಸ್ಥರು ಗ್ರಾಮಲೆಕ್ಕಿಗರಾದ ಅನುಷ ಅವರ ಗಮನಕ್ಕೆ ತಂದಿದ್ದು, ಅವರು ದೂರವಾಣಿ ಮೂಲಕ ಹೇಳಿದರೂ ಈತ ಹೊರ ಹೋಗದ ಹಿನ್ನೆಲೆಯಲ್ಲಿ ಅನುಷ ಅವರೇ ಸ್ಥಳಕ್ಕಾಗಮಿಸಿ ಆತನನ್ನು ಹೊರ ಕಳುಹಿಸುವದ ರೊಂದಿಗೆ ಪ್ರಹಸನ ಅಂತ್ಯ ಕಂಡಿದೆ.

- ಅಂಚೆಮನೆ ಸುಧಿ