ಗೋಣಿಕೊಪ್ಪ ವರದಿ, ಏ. 7: ಬೆಳ್ಳೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಉತ್ಸವವು ತಾ. 8 ರಂದು (ಇಂದು) ಬೆಳಿಗ್ಗೆ ಕೊಡಿಮರ ನಿಲ್ಲಿಸುವದರ ಮೂಲಕ ಆರಂಭಗೊಳ್ಳಲಿದೆ. ತಾ. 9 ರಿಂದ 15 ರ ವರೆಗೆ ಮಹಾಪೂಜೆ, ತೂಚಂಬಲಿ ಸೇರಿದಂತೆ ವಿವಿಧ ಪೂಜೆಗಳು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.