ವೀರಾಜಪೇಟೆ, ಏ. 6: ಭಾರತೀಯ ಜನತಾ ಪಕ್ಷದ ವತಿಯಿಂದ ರಾಜ್ಯಾದ್ಯಂತ ಆಯೋಜಿಸಲಾಗಿದ್ದ ಮುಷ್ಟಿದಾನ್ಯ ಅಭಿಯಾನವು ವೀರಾಜಪೇಟೆ ತಾಲೂಕು ಬಿಟ್ಟಂಗಾಲ ಶಕ್ತಿಕೇಂದ್ರದಲ್ಲಿ ನಡೆಯಿತು. ತಾಲೂಕು ಕೃಷಿ ಮೋರ್ಚಾದ ಅಧ್ಯಕ್ಷ ಕಂಜಿತಂಡ ಮಂದಣ್ಣ ಚಾಲನೆ ನೀಡಿದರು.
ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಾಲ ಭೀಮಯ್ಯ, ಬಿಟ್ಟಂಗಾಲ ಶಕ್ತಿಕೇಂದ್ರದ ಅಧ್ಯಕ್ಷ ರಂಜಿ ಪೂಣಚ್ಚ, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಸುಬ್ಬಯ್ಯ, ತಾಲೂಕು ಮಹಿಳಾ ಮೋರ್ಚಾ ಕಾರ್ಯದರ್ಶಿ ಸುಮಿ ಸೋಮಯ್ಯ, ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಸದಸ್ಯೆ ಪವಿ ಪೂವಯ್ಯ ಕಂಡಂಗಾಲ, ನಾಂಗಾಲ, ಬಿಟ್ಟಂಗಾಲ, ಬಾಳುಗೋಡು, ವಿ.ಬಾಡಗ ಸೇರಿದಂತೆ ಎಲ್ಲಾ ಬೂತ್ ಅಧ್ಯಕ್ಷರುಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.