ಪೊನ್ನಂಪೇಟೆ, ಏ. 4: ಇಲ್ಲಿಗೆ ಸಮೀಪದ ಬೇಗೂರು ಮಾಪಿಳೆತೋಡು ಕಲ್ಲಾಯಿ ಜುಮಾ ಮಸೀದಿಯ ಆಶ್ರಯದಲ್ಲಿ ವರ್ಷಂಪ್ರತಿ ನಡೆಸಲಾಗುವ ವಾರ್ಷಿಕ ಉರೂಸ್ (ನೇರ್ಚೆ) ಮತ್ತು ಸ್ವಲಾತ್ ವಾರ್ಷಿಕೋತ್ಸವ ಕಾಂiÀರ್iಕ್ರಮ ತಾ. 6 ರಿಂದ 8 ರವರೆಗೆ ಜರುಗಲಿದೆ ಎಂದು ಬೇಗೂರು ಮಾಪಿಳೆತೋಡು ಕಲ್ಲಾಯಿ ಜುಮಾ ಮಸೀದಿಯ ಆಡಳಿತ ಮಂಡಳಿಯ ಕಾರ್ಯದರ್ಶಿ ಎ.ಹೆಚ್. ಅಬ್ದಲ್ ಹಮೀದ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 3 ದಿನಗಳ ಕಾಲ ನಡೆಯ ಲಿರುವ ಮಾಪಿಳೆ ತೋಡು ಉರೂಸ್ ಮತ್ತು ಸ್ವಲಾತ್ ವಾರ್ಷಿಕೋತ್ಸವ ಆಚರಣೆಯನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಸಲಾಗುವದು. ತಾ. 8 ರಂದು ಉರೂಸ್‍ನ ಸಮಾರೋಪ ಸಮಾರಂಭ ಜರುಗಲಿದೆ ಎಂದು ಹೇಳಿದ್ದಾರೆ.

ತಾ. 6 ರಂದು ಜುಮಾ ನಮಾಝ್ ಬಳಿಕ ಮಾಪಿಳೆತೋಡು ಕಲ್ಲಾಯಿ ಜುಮಾ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ಆಲೀರ ಬಿ. ಅಬ್ದುಲ್ಲಾ ಅವರ ಸಮ್ಮುಖದಲ್ಲಿ ಮಸೀದಿಯ ಹಿರಿಯ ತಕ್ಕರಾದ ಆಲೀರ ಚೇಕು ಹಾಜಿ ಅವರು ಕಲ್ಲಾಯಿ ಮಸೀದಿಯ ಆವರಣದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಉರೂಸ್ ಆಚರಣೆಗೆ ಚಾಲನೆ ನೀಡಲಾಗುವದು.

ತಾ. 7 ರಂದು ರಾತ್ರಿ 8 ಗಂಟೆಗೆ ಕೆ.ಸಿ.ಎ. ಕುಟ್ಟಿ ಕೊಡುವಳ್ಳಿ ಮತ್ತು ಸಂಗಡಿಗರಿಂದ ನಡೆಯಲಿರುವ ‘ಇಸ್ಲಾಮಿಕ್ ಕಥಾ ಪ್ರಸಂಗ’ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಪಿಳೆತೋಡು ಕಲ್ಲಾಯಿ ಜುಮಾ ಮಸೀದಿಯ ಆಡಳಿತ ಮಂಡಳಿ ಉಪಾಧ್ಯಕ್ಷ ಎ.ಪಿ. ಅಹಮ್ಮದ್ ವಹಿಸಲಿದ್ದಾರೆ. ಆರಂಭದಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆಗೆ ಹಳ್ಳಿಗಟ್ಟು ಬದ್ರಿಯಾ ಜುಮ ಮಸೀದಿಯ ಖತೀಬರಾದ ಹ್ಯಾರೀಸ್ ಸಖಾಫಿ ಅವರು ನೇತೃತ್ವ ವಹಿಸಲಿದ್ದಾರೆ.

ತಾ. 8 ರಂದು ಮಧ್ಯಾಹ್ನ ಲುಹರ್ ನಮಾಜ್‍ನ ಬಳಿಕ ಸಾಂಪ್ರದಾಯಿಕ ಮೌಲೂದ್ ಪಾರಾಯಣ ಕಾರ್ಯಕ್ರಮ ನಡೆಯಲಿದೆ. ನಂತರ ಮಧ್ಯಾಹ್ನ 2 ಗಂಟೆಗೆ ಮಾಪಿಳೆತೋಡು ಕಲ್ಲಾಯಿ ಜುಮಾ ಮಸೀದಿಯ ಖತೀಬರಾದ ಇಸ್ಮಾಯಿಲ್ ಲತೀಫಿ ಅವರ ಅಧ್ಯಕ್ಷತೆಯಲ್ಲಿ ಜರುಗಲಿರುವ ಉರೂಸ್‍ನ ಸಮಾರೋಪ ಸಮಾರಂಭದಲ್ಲಿ ಹಿರಿಯ ಧಾರ್ಮಿಕ ವಿದ್ವಾಂಸ ಅಶ್ರಫ್ ಸಖಾಫಿ ತರುವಣ ಧಾರ್ಮಿಕ ಪ್ರಭಾಷಣ ಮಾಡಲಿದ್ದಾರೆ. ಆರಂಭದಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆಗೆ ಕಾಟ್ರಕೊಲ್ಲಿ ಮೊಹೀದ್ದೀನ್ ಜುಮ ಮಸೀದಿಯ ಖತೀಬ ಯೂಸುಫ್ ಪಾಳ್ಹಿಲಿ ನೇತೃತ್ವ ವಹಿಸಲಿದ್ದಾರೆ.