ರಂಗಸಮುದ್ರದಲ್ಲಿ ಜೋಡಿ ಬಸವೇಶ್ವರ ಉತ್ಸವ

ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ರಂಗಸಮುದ್ರ ಗ್ರಾಮದ ಶ್ರೀ ಜೋಡಿ ಬಸವೇಶ್ವರ ದೇವಸ್ಥಾನದ ವಾರ್ಷಿಕೋತ್ಸವವು ಚಿಕ್ಲಿಹೊಳೆ ಮತ್ತು ಕಾವೇರಿ ನದಿ ಸಂಗಮದಲ್ಲಿ ಗಂಗಾ ಸ್ನಾನ ಮತ್ತು ಗಂಗಾಪೂಜೆ ನೆರವೇರಿಸಿ ಪಲ್ಲಕ್ಕಿ ಮೆರವಣಿಗೆಯಲ್ಲಿ ಸಾಗಿ ಊರಿನ ಪ್ರಮುಖ ರಸ್ತೆಯಲ್ಲಿ ಮುಂದುವರಿದು ನಂತರ ದೇವಸ್ಥಾನದ ಮುಂಭಾಗ ಕೊಂಡ ಪೂಜೆ ನಡೆಸಲಾಯಿತು. ವಾದ್ಯಮೇಳದೊಂದಿಗೆ ಸಾಗಿ ಬಂದ ದೇವರ ಪಲ್ಲಕ್ಕಿ ಮೆರವಣಿಗೆಯು ದೇವಸ್ಥಾನ ಆವರಣಕ್ಕೆ ಬಂದ ಸಂದÀರ್ಭ ಸಾವಿರಾರು ಭಕ್ತರು ಅಲ್ಲಿ ನೆರೆದಿದ್ದರು.

ಅರಮೇರಿ ಮಠದ ಪೀಠಾಧ್ಯಕ್ಷ ಶಾಂತಮಲ್ಲಿಕಾರ್ಜನ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಕೆಂಡಪೂಜೆ ಮತ್ತು ಕೊಂಡ ಹಾಯುವ ಕಾರ್ಯ ನಡೆಯಿತು. ನಂತರ ಮಹಾಪೂಜೆ ನಡೆಯಿತು. ಎರಡು ದಿನಗಳ ಕಾಲ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಬಸವೇಶ್ವರ ಉತ್ಸವ

ಸುಂಟಿಕೊಪ್ಪ: ಇಲ್ಲಿಗೆ ಸಮೀಪದ ಹೇರೂರು ಗ್ರಾಮದ ಬಸವೇಶ್ವರ ದೇವರ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಬೆಳಿಗ್ಗೆಯಿಂದ ವಿವಿಧ ಪೂಜಾದಿ ಕಾರ್ಯಗಳೊಂದಿಗೆ ಮಧ್ಯಾಹ್ನ ಮಹಾಪೂಜೆ ನೆರವೇರಿತು. ಸುತ್ತಮುತ್ತಲ ಗ್ರಾಮದ ಭಕ್ತರು ಅಧಿಕ ಸಂಖ್ಯೆಯಲ್ಲಿ ನೆರೆದಿದ್ದರು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಬಯನಾಟ್ ಕೋಲ

ನಾಪೆÇೀಕ್ಲು: ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ಕಾವಲುಗಾರನೆಂದು ಪ್ರಸಿದ್ಧಿ ಪಡೆದಿರುವ ಬಯನಾಟ್ ದೈವದ ವಾರ್ಷಿಕ ಕೋಲ ವಿಜೃಂಭಣೆಯಿಂದ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ನಡೆಯಿತು.

ಅಷ್ಟಬಂಧ - ಬ್ರಹ್ಮಕಲಶ

ನಾಪೆÇೀಕ್ಲು: ಸಮೀಪದ ಕಕ್ಕುಂದಕಾಡು ಶ್ರೀ ವೆಂಕಟೇಶ್ವರ ದೇವಳದಲ್ಲಿ ತಾ. 8 ರಿಂದ 10 ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕೋತ್ಸವ ನಡೆಯಲಿದೆ.

ಈ ಪ್ರಯುಕ್ತ ತಾ. 8 ರಂದು ಬೆಳಿಗ್ಗೆಯಿಂದ ವಿವಿಧ ಹೋಮ, ಹವನ, ದುರ್ಗಾಪೂಜೆ, 9 ರಂದು ಬ್ರಹ್ಮಕಲಶ ಪೂಜೆ, ಮಹಾಪೂಜೆ, ದೇವರ ಬಲಿ, ತೀರ್ಥ ಪ್ರಸಾದ, ಅನ್ನಸಂತರ್ಪಣೆ, ಸಂಜೆ ವಾರ್ಷಿಕೋತ್ಸವದ ಪ್ರಯುಕ್ತ ದೀಪಾರಾಧನೆ, ದೇವರ ನೃತ್ಯ ನಡೆಯಲಿದೆ. 10 ರಂದು ಬೆಳಿಗ್ಗೆ ದೇವರ ಬಲಿ, ನೃತ್ಯ, ಅನ್ನಸಂತರ್ಪಣೆ, ಸಂಜೆ ಪವಿತ್ರ ಶ್ರೀ ಕಾವೇರಿ ನದಿಯಲ್ಲಿ ಉತ್ಸವ ಮೂರ್ತಿಯ ಅವಭೃತ ಸ್ನಾನ, ಪೇಟೆ ಮೆರವಣಿಗೆ ನಂತರ ದೇವಳದಲ್ಲಿ ದೇವರ ನೃತ್ಯ, ವಸಂತ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ಕೋರಿದೆ.

ಕುಂಜಿಲ ಭಗವತಿ ವಾರ್ಷಿಕೋತ್ಸವ

ನಾಪೆÇೀಕ್ಲು: ಪುರಾಣ ಪ್ರಸಿದ್ಧ ಕುಂಜಿಲ- ನಾಲ್ಕೇರಿ ಶ್ರೀ ಭಗವತಿ ದೇವಿಯ ಉತ್ಸವವು ತಾ. 5 ರಿಂದ 8ರ ವರೆಗೆ ನಡೆಯಲಿದೆ.

ತಾ. 5 ರಂದು (ಇಂದು) ಸಂಜೆ ದೀಪಾರಾಧನೆ, ದೇವರ ಬಲಿ. ತಾ. 6 ರಂದು ಬೆಳಿಗ್ಗೆ ಇರ್‍ಬೊಳಕು, ಪಟ್ಟಣಿ ಹಬ್ಬದ ಪ್ರಯುಕ್ತ ಮಧ್ಯಾಹ್ನ ಅಲಂಕಾರ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ದೇವರ ನೃತ್ಯ ಬಲಿ ನಡೆಯಲಿದೆ. 7 ರಂದು ಮಧ್ಯಾಹ್ನ ಅಲಂಕಾರ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ದೇವಿಯ ಅವಭೃತ ಸ್ನಾನ, ನೃತ್ಯ ಬಲಿ, ವಸಂತ ಪೂಜೆ ನಡೆಯಲಿದ್ದು, 8ರಂದು ದೇವಳದಲ್ಲಿ ಶುದ್ಧ ಕಲಶದೊಂದಿಗೆ ವಾರ್ಷಿಕೋತ್ಸವ ಸಂಪನ್ನಗೊಳ್ಳಲಿದೆ ಎಂದು ದೇವಳದ ತಕ್ಕಮುಖ್ಯಸ್ಥರು ಮತ್ತು ಆಡಳಿತ ಮಂಡಳಿ ತಿಳಿಸಿದೆ.

ಬಜೆಗುಂಡಿ ಮಾರಿಯಮ್ಮ ಪೂಜೋತ್ಸವ

ಸೋಮವಾರಪೇಟೆ : ಬಜೆಗುಂಡಿ ಗ್ರಾಮದಲ್ಲಿರುವ ಶ್ರೀ ಮಾರಿಯಮ್ಮ ದೇವಾಲಯದ 23ನೇ ವರ್ಷದ ವಾರ್ಷಿಕ ಮಹಾ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಮೂರು ದಿನಗಳ ಕಾಲ ನಡೆದ ಪೂಜಾ ಮಹೋತ್ಸವದಲ್ಲಿ ಗಣಪತಿ ಹೋಮ, ಊಧ್ರ್ವ ಕಳಶ ಪೂಜೆ, ಮಾರಿಕಾಂಬ ಅಮ್ಮನವರಿಗೆ ಕಲಾತತ್ವಾಧಿವಾಸ ಹೋಮ, ನವ ಕಳಶಾಭಿಷೇಕ ಸೇರಿದಂತೆ ವಿವಿಧ ಪೂಜೆಗಳು ಅರ್ಚಕ ಡಿ.ಕೆ.ಮೋಹನ್‍ಸ್ವಾಮಿ ನೇತೃತ್ವದಲ್ಲಿ ನಡೆಯಿತು.

ಸೋಮವಾರ ರಾತ್ರಿ ವಿಜೃಂಭಣೆಯ ಕರಗ ಮೆರವಣಿಗೆ ನಡೆಯಿತು. ಮಂಗಳವಾರ ಮಧ್ಯಾಹ್ನದಿಂದ ಸಂಜೆಯವರೆಗೆ ನೆರೆದಿದ್ದ ಸಾವಿರಾರು ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು. ದೇವಾಲಯ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಪುಟ್ಟರಾಜು, ಖಜಾಂಚಿ ವಸಂತ ಮತ್ತು ಪದಾಧಿಕಾರಿಗಳು ಪೂಜೋತ್ಸವದ ಯಶಸ್ಸಿಗೆ ಸಹಕರಿಸಿದರು.

ಬೈತೂರಪ್ಪ ಪೊವ್ವದಿ ವಾರ್ಷಿಕ ಹಬ್ಬ

ಮಡಿಕೇರಿ : ಕೊಡಗಿನ ಏಕೈಕ ಬೈತೂರಪ್ಪ ದೇವಾಲಯ ಎಂಬ ಖ್ಯಾತಿ ಪಡೆದಿರುವ ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ ಗ್ರಾಮದಲ್ಲಿರುವ ಶ್ರೀ ಬೈತೂರಪ್ಪ ಮತ್ತು ಪೊವ್ವದಿ ದೇವಾಲಯದಲ್ಲಿ ವಾರ್ಷಿಕ ಹಬ್ಬ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ವಾರ್ಷಿಕ ಹಬ್ಬದ ಪ್ರಯುಕ್ತ ತಾ. 6 ರಂದು ಶ್ರೀ ಬಸವೇಶ್ವರ ದೇವರ ಪರವು ನಡೆಯಲಿದ್ದು, ಅಂದು ದೇವತಕ್ಕರಾದ ಜಗ್ಗಾರಂಡ ಹ್ಯಾರಿ ಕಾರ್ಯಪ್ಪ ಅವರ ಮನೆಯಿಂದ ಎತ್ತು ಪೋರಾಟದೊಂದಿಗೆ ವಾರ್ಷಿಕೋತ್ಸವ ನಡೆಯಲಿದೆ. ತಾ. 9 ರಂದು ಪೂರ್ವಾಹ್ನ ಗಣಪತಿ ಹೋಮದೊಂದಿಗೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, 12 ಗಂಟೆಗೆ ಮಹಾಪೂಜೆಯೊಂದಿಗೆ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 2 ಗಂಟೆಯಿಂದ ದೇವರ ಬಂಡಾರ ಒಪ್ಪಿಸುವದರೊಂದಿಗೆ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.

ಶ್ರೀ ಚಾಮುಂಡೇಶ್ವರಿ ಪರಿವಾರ ದೇವರುಗಳ ಉತ್ಸವ

ಮಡಿಕೇರಿ: ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಕೊಡಗರಹಳ್ಳಿ ವತಿಯಿಂದ ಶ್ರೀ ಚಾಮುಂಡೇಶ್ವರಿ, ಶ್ರೀ ಮಹಾವಿಷ್ಣು, ರಕ್ತೇಶ್ವರಿ, ಪರಿವಾರ ದೇವರುಗಳ 40ನೇ ವಾರ್ಷಿಕ ಮಹೋತ್ಸವ ತಾ. 16 ರಿಂದ 18 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ, ಕೋಲ, ಅಜ್ಜಪ್ಪಕೋಲ, ವಿಷ್ಣುಮೂರ್ತಿ ಕೋಲ ಸೇರಿದಂತೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸೇವಾ ಸಮಿತಿಯ ಪ್ರಕಟಣೆ ತಿಳಿಸಿದೆ.

ತಾ. 16 ರಂದು ದೀಪಾರಾಧನೆ ಪೂಜೆಯೊಂದಿಗೆ 7 ಸುತ್ತಿನ ಪ್ರದಕ್ಷಿಣೆ. ನಂತರ ಸಿಂಗಾರಿಮೇಳಂ ಹಾಗೂ ಚಂಡೆ ಮೇಳಂ ನಡೆಯಲಿದೆ. ತಾ. 17 ರಂದು ಶ್ರೀ ಚಾಮುಂಡೇಶ್ವರಿಯ ಅಭಿಷೇಕ ಪೂಜೆ, ದರ್ಶನ ಪೂಜೆ, ಹರಕೆ ಮತ್ತು ಬೇಡಿಕೆ, ರಾತ್ರಿ 7 ಗಂಟೆಗೆ ಕೇರಳದ ಕುರುಮತ್ತೂರ್ ಮಲಯಾನ್ ಕೃಷ್ಣನ್‍ರವರ ಮುಂದಾಳತ್ವದಲ್ಲಿ ಮೂರ್ತಿಯ ಕೋಲ ಮತ್ತು ಮೇಲೇರಿಗೆ ಅಗ್ನಿ ಸ್ಪರ್ಶ, ಕುಟ್ಟಿಚಾತ ಭೈರವ ಮತ್ತು ಕೊಚ್ಚುಟ್ಟಿ ಕೋಲ, ಕೊರತಿ ಕೋಲ, ಗುಳಿಗನ ಕೋಲಗಳು ನಡೆಯಲಿವೆ. ತಾ. 18 ರಂದು ಬೆಳಿಗ್ಗೆ 5 ಗಂಟೆಗೆ ಅಜ್ಜಪ್ಪ ಕೋಲ, 6 ಗಂಟೆಗೆ ವಿಷ್ಣುಮೂರ್ತಿ ಕೋಲ ಮತ್ತು ಅಗ್ನಿಪ್ರವೇಶ, ಬೆಳಿಗ್ಗೆ 11 ಗಂಟೆಗೆ ರಕ್ತೇಶ್ವರಿ ಕೋಲ, ಚಾಮುಂಡೇಶ್ವರಿ ಕೋಲ, ರಾತ್ರಿ 8 ಗಂಟೆಗೆ ದೇವಿಗೆ ನೈವೇದ್ಯ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ಗುರುಸಿದ್ಧವೀರೇಶ್ವರಸ್ವಾಮಿ ಜಾತ್ರೆಯ ರಥೋತ್ಸವ

ಶನಿವಾರಸಂತೆ: ಸಮೀಪದ ಮೆಣಸ ಗ್ರಾಮದ ಮನೆಹಳ್ಳಿಯಲ್ಲಿ 3 ದಿನಗಳ ಕಾಲ ನಡೆದ ಕ್ಷೇತ್ರ ತಪೋವನ ಗುರುಸಿದ್ಧ ವೀರೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸೋಮವಾರ ರಾತ್ರಿ ಸ್ವಾಮಿಯವರ ಮಹಾ ರಥೋತ್ಸವದ ಮೂಲಕ ಮುಕ್ತಾಯ ಹಾಡಲಾಯಿತು.

ಚೈತ್ರ ಶುದ್ಧ ಪೌರ್ಣಮಿ ಮಾ. 31 ರಂದು ಬೆಳಿಗ್ಗೆ ಧ್ವಜಾರೋಹಣ ಮಾಡಿ, ಸಂಜೆ ಸ್ವಾಮಿಯವರಿಗೆ ಕಂಕಣ ಧಾರಣೆ ಮಾಡಲಾಗಿತ್ತು. ಚೈತ್ರ ಬಹುಳ ಬಿದಿಗೆ ಏ. 1ರಂದು ಬೆಳಿಗ್ಗೆ ಶ್ರೀಮಧನಾದಿ ಅನಘ ನಿರಂಜನ ಜಂಗಮ ಪೂಜೆ ಹಾಗೂ ಸಂಜೆ ಸ್ವಾಮಿಯವರ ಸೂರ್ಯಮಂಡಲೋತ್ಸವ ನಡೆದಿತ್ತು.

ಸೋಮವಾರ ಬೆಳಿಗ್ಗೆ 5 ರಿಂದ ಪೂಜಾ ಕಾರ್ಯಕ್ರಮಗಳ ಸೇವೆಯೊಂದಿಗೆ ಆರಂಭವಾದ ವಿಜೃಂಭಣೆಯ ಜಾತ್ರಾ ಮಹೋತ್ಸವ ಮಂಗಳವಾರ ಬೆಳಗ್ಗಿನ ಜಾವ 2 ಗಂಟೆಗೆ ಮಹಾರಥೋತ್ಸವದ ಮೆರವಣಿಗೆಯೊಂದಿಗೆ ಮುಕ್ತಾಯವಾಯಿತು. ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಹಾಗೂ ನೆರೆ ಜಿಲ್ಲೆಗಳ ಸಾವಿರಾರು ಮಂದಿ ಭಕ್ತರು ಸಾಕ್ಷಿಯಾದರು.

ಜಾತ್ರಾ ಮಹೋತ್ಸವ ಸಂದರ್ಭ ಲೇಖಕ ಶಿವಕುಮಾರ್ ರಚಿಸಿ ಶ್ರೀ ಕ್ಷೇತ್ರ ತಪೋವನ ಕ್ಷೇತ್ರ ಪರಿಚಯ ಕೃತಿಯನ್ನು ಮಹಾಂತ ಶಿವಲಿಂಗ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.

3 ದಿನಗಳ ಪೂಜಾ ಕೈಂಕರ್ಯಗಳ ತಪೋವನ ಮಠಾಧೀಶ ಹಾಗೂ ಸೇವಾ ಟ್ರಸ್ಟಿಯ ಅಧ್ಯಕ್ಷ ಮಹಾಂತ ಶಿವಲಿಂಗ ಸ್ವಾಮೀಜಿ, ಗೌರವ ಅಧ್ಯಕ್ಷ ಸುಕ್ಷೇತ್ರ ಚಿಲುಮೆ ಮಠಾಧೀಶ ಜಯದೇವಮಹಾಸ್ವಾಮಿ, ಉಪಾಧ್ಯಕ್ಷ ಯು.ಎಸ್. ಶೇಖರ್, ಕಾರ್ಯದರ್ಶಿ ಎಂ.ಎಂ. ಸುರೇಶ್, ಖಜಾಂಚಿ ಕೆ.ಹೆಚ್. ಮಂಜುನಾಥ್ ಹಾಗೂ ಸದಸ್ಯರು, ಲೇಖಕ ಶಿವಕುಮಾರ್, ಪ್ರಮುಖರಾದ ಮಲ್ಲೇಶಯ್ಯ, ಸೋಮಣ್ಣ, ಪುಟ್ಟಸ್ವಾಮಿ ಮತ್ತಿತರು ಹಾಜರಿದ್ದರು.

ಜೋಡು ಭಗವತಿ ದೇವರ ಉತ್ಸವ

ವೀರಾಜಪೇಟೆ: ವೀರಾಜಪೇಟೆ ತಾಲೂಕು ಬೇರಳಿನಾಡು ರುದ್ರಗುಪ್ಪೆ ಜೋಡು ಭಗವತಿ ದೇವರ ವಾರ್ಷಿಕ ಉತ್ಸವ ತಾ. 6 ಮತ್ತು 7 ರಂದು ಜರುಗಲಿದೆ ಎಂದು ತಕ್ಕಮುಖ್ಯಸ್ಥ ಎಂ.ಬಿ. ಅರುಣ್ ಅಪ್ಪಣ್ಣ ತಿಳಿಸಿದ್ದಾರೆ. ತಾ. 6 ರಂದು ನೆರಪು, ತಾ. 7 ರಂದು ದೇವರ ಜಳಕ ನಡೆಯಲಿದೆ ಎಂದು ತಿಳಿಸಿದ್ದಾರೆ.ದೇವಾಲಯದ ವಾರ್ಷಿಕ ಪೂಜೋತ್ಸವ

ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಉಮಾಮಹೇಶ್ವರ ಸ್ವಾಮಿಯ ವಾರ್ಷಿಕ ವಿಶೇಷ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಪೂಜೆಯ ಅಂಗವಾಗಿ ಬೆಳಗ್ಗಿನಿಂದಲೇ ಗಣಪತಿ ಹೋಮ, ಪ್ರಧಾನ ದೇವರಿಗೆ ಹಾಗೂ ಇತರ ಉಪದೇವತೆಗಳಿಗೆ ವಿಶೇಷ ಅಭಿಷೇಕ, ಅರ್ಚನೆ, ಉಮಾಮಹೇಶ್ವರ ಸ್ವಾಮಿಗೆ ಮೃತ್ಯುಂಜಯ ಹೋಮ ಸೇರಿದಂತೆ ಪೂಜಾ ಕೈಂಕರ್ಯಗಳು ನಡೆದವು. ಪೂಜಾ ವಿಧಿ-ವಿಧಾನಗಳು ಕೇರಳದ ಮುಖ್ಯ ಅರ್ಚಕ ತಂತ್ರಿಗಳಾದ ಶ್ರೀಹರಿ ಮತ್ತು ತಂಡದವರು ನೆರವೇರಿಸಿದರು. ಮಧ್ಯಾಹ್ನ ಮಹಾಮಮಂಗಳಾರತಿ ನಂತರ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಟಿ.ಎಂ. ಚಾಮಿ, ಉಪಾಧ್ಯಕ್ಷ ಉತ್ತಪ್ಪ, ಖಜಾಂಚಿ ಶಾಂತಿ, ಕಾರ್ಯದರ್ಶಿ ವಿ.ಎಲ್. ಸುರೇಶ್ ಸೇರಿದಂತೆ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಸದಸ್ಯರು ಇದ್ದರು.ಚರ್ಚ್‍ನಲ್ಲಿ ವಿಶೇಷ ಪ್ರಾರ್ಥನೆಸುಂಟಿಕೊಪ್ಪ: ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಗುಡ್‍ಫ್ರೈಡೆ ಅಂಗವಾಗಿ ವಿಶೇಷ ಪ್ರಾರ್ಥನೆ ನಡೆಯಿತು. ಏಸು ಶಿಲುಬೆಗೆ ಏರುವ ರೂಪಕ ನಡೆಯಿತು. ಪ್ರಾರ್ಥನೆಯನ್ನು ಸಂತ ದೇವಾಲಯದ ಧರ್ಮಗುರು ಫಾದರ್ ಎಡ್ವರ್ಡ್ ವಿಲಿಯಂ ಸಲ್ಡಾನಾ ಹಾಗೂ ಬ್ರದರ್ ರೂಡೊಲ್ ನೆರವೇರಿಸಿದರು.ಪುನರ್ ಪ್ರತಿಷ್ಠಾಪನೆ-ಬ್ರಹ್ಮಕಲಶೋತ್ಸವ

ಗುಡ್ಡೆಹೊಸೂರು: ಸಮೀಪದ ಅತ್ತೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ತಾ. 16 ರಿಂದ 20 ರವರೆಗೆ ಬ್ರಹ್ಮಕಲಶೋತ್ಸವದ ಪ್ರಯುಕ್ತ ವಿವಿಧ ಪೂಜಾ ವಿಧಾನಗಳು ನಡೆಯಲಿವೆ. ವೇದಮೂರ್ತಿ ಗಣೇಶ್ ತಂತ್ರಿಗಳು, ಜೋತಿಷಿ ಕಲ್ಲಾರು ಬಾಲಕೃಷ್ಣ ಗುರೂಜಿ, ವಾಸ್ತು ಶಿಲ್ಪಿ ರಮೇಶ್ ಕಾರಂತ್, ಶಿಲಾ ಶಿಲ್ಪಿ ವೇಲು ಸ್ವಾಮಿ ಮುಂತಾದವರು ಭಾಗವಹಿಸಲಿದ್ದಾರೆ. ದೇವಸ್ಥಾನಕ್ಕೆ ಧನ ಸಹಾಯ ಮಾಡುವವರು ಕಾವೇರಿ ಗ್ರಾಮೀಣ ಬ್ಯಾಂಕ್ ಖಾತೆ 85052067778 ಗುಡ್ಡೆಹೊಸೂರು ಶಾಖೆಯಲ್ಲಿ ಪಾವತಿಸುವಂತೆ ದೇವಸ್ಥಾನ ಸಮಿತಿ ಅಧ್ಯಕ್ಷ ಮನೋಜ್ ಉಗ್ರಾಣಿ ಕೋರಿದ್ದಾರೆ. 5 ದಿನಗಳ ಕಾಲ ದೇವಸ್ಥಾನದ ಆವರಣದಲ್ಲಿ ಅನ್ನಸಂತರ್ಪಣೆ ನಡೆಯಲಿದೆ.ಮಹಾವೀರ ಜಯಂತಿವೀರಾಜಪೇಟೆ, ಏ. 4: ಮಹಾವೀರ ಜಯಂತಿ ಪ್ರಯುಕ್ತ ಪಟ್ಟಣದ ಜೈನ ಸಮುದಾಯದ ಬಾಂದವರು ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಾಲು, ಹಣ್ಣು-ಹಂಪಲುಗಳನ್ನು ವಿತರಿಸಿದರು.

ಈ ಸಂದರ್ಭ ಜೈನ್ ಸಂಘಟನೆಯ ಅಧ್ಯಕ್ಷ ಜೆ.ಎನ್. ಪುಷ್ಪರಾಜ್, ಉಪಾಧ್ಯಕ್ಷ ಸಂಪತ್, ಚಂದ್ರಪ್ರಸಾದ್, ಅರುಣ್‍ಕುಮಾರ್, ಮಹೇಂದ್ರ, ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.