ಸೋಮವಾರಪೇಟೆ, ಏ. 4: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕಿನ ನಾಲ್ವರು ಮಹಿಳಾ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮ ತಾ.8ರಂದು ಸಂಜೆ 4.30ಕ್ಕೆ ಕ.ಸಾ.ಪ. ಕಚೇರಿಯಲ್ಲಿ ನಡೆಯಲಿದೆ ಎಂದು ಪರಿಷತ್‍ನ ಗೌರವ ಕಾರ್ಯದರ್ಶಿ ಕೆ.ಎ.ಆದಂ ತಿಳಿಸಿದ್ದಾರೆ.

ಕಸಾಪ ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ಕಾರ್ಯದರ್ಶಿ ಎಲ್.ಎಂ.ಪ್ರೇಮ, ಸಾಹಿತಿ ಸುನೀತಾ ಲೋಕೇಶ್, ಕವಯತ್ರಿ ರಂಜಿತಾ ಕಾರ್ಯಪ್ಪ, ವಕೀಲೆ ಮಾನಸ ಅವರುಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಸಂಗೀತ ಕ್ಷೇತ್ರದಲ್ಲಿ ಸೀತಾಲಕ್ಷ್ಮೀ, ಜಾನಪದ ಕ್ಷೇತ್ರದಲ್ಲಿ ಕೆ.ಆರ್.ಚಂದ್ರಿಕಾ, ಸಮಾಜ ಸೇವಾ ಕ್ಷೇತ್ರದಲ್ಲಿ ಎಚ್.ಬಿ.ಜಯಮ್ಮ, ಶಿಕ್ಷಣ ಕ್ಷೇತ್ರದಲ್ಲಿ ಎಂ.ಜೆ.ಅಣ್ಣಮ್ಮ ಅವರುಗಳನ್ನು ಸನ್ಮಾನಿಸಲಾಗುತ್ತದೆ ಎಂದು ಆದಂ ಮಾಹಿತಿ ನೀಡಿದ್ದಾರೆ.

ಕಾರ್ಯಕ್ರಮದ ಪ್ರಯುಕ್ತ ತಾ.6ರಂದು(ನಾಳೆ) ಸಂಜೆ 4.30ಕ್ಕೆ ಸಾರ್ವಜನಿಕರಿಗೆ ಸ್ಥಳದಲ್ಲೇ ಕವನ ಬರೆಯುವ ಸ್ಪರ್ಧೆಯನ್ನು ಕ.ಸಾ.ಪ. ಕಚೇರಿಯಲ್ಲಿ ಏರ್ಪಡಿಸಲಾಗಿದೆ. ಮಾಹಿತಿಗಾಗಿ ಮೊ.9611743369, 8762983849 ಸಂಪರ್ಕಿಸಬಹುದಾಗಿದೆ